ಡಾ. ಪ್ರಭುಗೌಡರ ಜನ್ಮದಿನ: ಅಭಿಮಾನಿಗಳಿಂದ ರಕ್ತದಾನ ಶಿಬಿರ ಹಾಗೂ ಹಣ್ಣು ಹಂಪಲ ವಿತರಣೆ
Dr. Prabhugowda's birthday: Blood donation camp and fruit distribution by fans
ದೇವರಹಿಪ್ಪರಗಿ 02: ಮತಕ್ಷೇತ್ರದ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಅಂದರ ಬಾಳಿಗೆ ಬೆಳಕಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರ 55ನೇ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ರಕ್ತದಾನ ಶಿಬಿರ ಏರಿ್ಡಸುವ ಮೂಲಕ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರದಂದು ಡಾ. ಪ್ರಭುಗೌಡ ಅವರ ಅಭಿಮಾನಿ ಬಳಗದ ಮುಖಂಡರುಗಳಾದ ಮುರ್ತುಜಾ ತಾಂಬೋಳಿ, ಸಲೀಂ ವಠಾರ ಹಾಗೂ ಕಾಶಿನಾಥ ಕೋರಿ ಅವರು ಮಾತನಾಡಿ, ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು,ಸರಳ ಸಜ್ಜನ ವ್ಯಕ್ತಿ, ದೀನ ದಲಿತರ ಆಶಾಕಿರಣ, ಯುವಕರ ಹೃದಯವಂತ ಡಾ.ಪ್ರಭುಗೌಡ ಅವರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದು ವೃತ್ತಿಯಲ್ಲಿ ವೈದ್ಯರಾದರು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ, ರಾಜಕೀಯ ಪ್ರವೇಶ ಮಾಡುವುದಕ್ಕಿಂತ ಮುಂಚೆ ಸಾರ್ವಜನಿಕರ ಮದ್ಯ ಬೆರೆತು ಜನರ ಕಷ್ಟ ನಷ್ಟಗಳನ್ನು ಅರಿತು, ಅವರ ಅಭಿಮಾನಿ ಬಳಗದ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಪಡೆದು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಸೇವೆಯಲ್ಲಿ ತೊಡಗಿರುವಂತಹ ಧೀಮಂತ ನಾಯಕರಾಗಿದ್ದಾರೆ.
ಯಾವುದೇ ರೀತಿಯ ಕಷ್ಟಕಾರ್ಪಣಯಗಳನ್ನು ಹೇಳಿಕೊಂಡು ಬಂದರೆ ಸಾಕು ಅಂಥವರಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ, ಸಹಕಾರ ಮಾಡುವ ಸಮೃದ್ಧಿ ಮನಸುಳ್ಳಂತಹ ವ್ಯಕ್ತಿ ಅಂದರೆ ಅದು ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಇವತ್ತು ಅವರ 55ನೇ ಹುಟ್ಟು ಹಬ್ಬವನ್ನು ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಇಡೀ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ರಕ್ತದಾನ ಮಾಡುತಿದ್ದೇವೆ. ನಮ್ಮ ನಾಯಕರು ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಿರಿ ಮತ್ತು ಯಾವುದೇ ಕಾರಣಕ್ಕೂ ಅದ್ದೂರಿ ಆಡಂಬರದಿಂದ ಆಚರಣೆ ಮಾಡಕೂಡದು ಎಂದು ಕರೆಯನ್ನು ನೀಡಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮುನೀರ್ ಬಿಜಾಪುರ, ಸಂಗಮೇಶ ದಂಡೋತಿ, ಭೀಮಶಂಕರ ಮಿಂಚನಾಳ, ಉದಯ ಅರವಿಂದ, ಕಮಲಸಾಬ, ಮುನೀರ್ ಹಸನ, ಸಲೀಂ ಕೋಲಾರ, ಬಾಯಸಾಬ ಹಳ್ಳಿ, ಯಾಕೂಬ್ ನದಾಫ್, ಗಂಗಾಧರ ಬಬಲೇಶ್ವರ, ಕಾಸಪ್ಪ ಯಂಬತ್ನಾಳ, ಕಾಸಪ್ಪ ಮಲ್ಹಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿ ಬಳಗ ಸದಸ್ಯರು ಹಾಗೂ ಮಹಿಳೆಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 