ಚಿಂಚಲಿಯಲ್ಲಿ ರೈತರೊಂದಿಗೆ ಡಾ. ಪ್ರಭಾಕರ ಕೋರೆ ಸಮಾಲೋಚನೆ: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕರೆ

ಚಿಂಚಲಿಯಲ್ಲಿ ರೈತರೊಂದಿಗೆ ಡಾ. ಪ್ರಭಾಕರ ಕೋರೆ ಸಮಾಲೋಚನೆ: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕರೆ Dr. Prabhakar Kore holds consultations with farmers in Chinchali; urges adoption of modern farming m

ರಾಯಬಾಗ 24: ರೈತರ ಆರ್ಥಿಕ ಅಭಿವೃದ್ಧಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.ರಾಯಬಾಗ ತಾಲೂಕಿನ ಚಿಂಚಲಿಯ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ವತಿಯಿಂದ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯ ಉತ್ಪಾದಕತೆ ಹೆಚ್ಚಿಸಲು ವೈಜ್ಞಾನಿಕ ಕೃಷಿ ಪದ್ಧತಿ, ಗುಣಮಟ್ಟದ ಬೀಜಗಳ ಬಳಕೆ, ಹನಿ ನೀರಾವರಿ, ಮಣ್ಣಿನ ಪರೀಕ್ಷೆ, ಸಮರ​‍್ಕ ಗೊಬ್ಬರ ನಿರ್ವಹಣೆ ಹಾಗೂ ನೀರಿನ ಮಿತವ್ಯಯದ ಬಗ್ಗೆ ರೈತರಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.ಕಬ್ಬು ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು. ರೈತರು ಕೃಷಿ ವಿಜ್ಞಾನಿಗಳ ಮಾರ್ಗದರ್ಶನದೊಂದಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಶಿವಶಕ್ತಿ ಸಕ್ಕರೆ ಕಾರ್ಖಾನೆಯು ರೈತರ ಹಿತದೃಷ್ಟಿಯಿಂದ ವಿವಿಧ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ರೈತರಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ, ತರಬೇತಿ ಹಾಗೂ ನೆರವು ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.ಈ ಸಂದರ್ಭದಲ್ಲಿ ಚಿದಾನಂದ ಕೋರೆ ಸಕ್ಕರೆ ಕಾರಖಾನೆಯ ನಿರ್ದೇಶಕ ಮಂಡಳಿಯ ಸದಸ್ಯರಾದ ಭರತೇಶ ಬನವಣೆ, ಅಜೀತ ದೇಸಾಯಿ, ಮಲ್ಲಪ್ಪ ಮೈಶಾಳೆ, ಚಿಂಚಲಿಯ ನಾನಾಸಾಬ್ ಸೌಂದಲಗಿ, ಅಂಕುಶ ಜಾಧವ, ಜೀತೇಂದ್ರ ಜಾಧವ, ಭೀಮಶಿ ಕಿಲಾರೆ, ವಸಂತ ಕರಕಯಿ, ಆರ್‌. ಬಿ. ಖಂಡಗಾವೆ ಸೇರಿದಂತೆ ಅನೇಕ ರೈತರು ಹಾಗೂ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಪೂರ್ವದಲ್ಲಿಯೇ ಡಾ. ಪ್ರಭಾಕರ ಕೋರೆ ಅವರು ಚಿಂಚಲಿಯ ಆರಾಧ್ಯ ದೇವತೆ ಮಾಯಕ್ಕಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ರೈತರೊಂದಿಗೆ ಡಾ. ಪ್ರಭಾಕರ ಕೋರೆ ಸಮಾಲೋಚನೆ: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕರೆರಾಯಬಾಗ: ರೈತರ ಆರ್ಥಿಕ ಅಭಿವೃದ್ಧಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.ರಾಯಬಾಗ ತಾಲೂಕಿನ ಚಿಂಚಲಿಯ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ವತಿಯಿಂದ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯ ಉತ್ಪಾದಕತೆ ಹೆಚ್ಚಿಸಲು ವೈಜ್ಞಾನಿಕ ಕೃಷಿ ಪದ್ಧತಿ, ಗುಣಮಟ್ಟದ ಬೀಜಗಳ ಬಳಕೆ, ಹನಿ ನೀರಾವರಿ, ಮಣ್ಣಿನ ಪರೀಕ್ಷೆ, ಸಮರ​‍್ಕ ಗೊಬ್ಬರ ನಿರ್ವಹಣೆ ಹಾಗೂ ನೀರಿನ ಮಿತವ್ಯಯದ ಬಗ್ಗೆ ರೈತರಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.

ಕಬ್ಬು ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು. ರೈತರು ಕೃಷಿ ವಿಜ್ಞಾನಿಗಳ ಮಾರ್ಗದರ್ಶನದೊಂದಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಶಿವಶಕ್ತಿ ಸಕ್ಕರೆ ಕಾರ್ಖಾನೆಯು ರೈತರ ಹಿತದೃಷ್ಟಿಯಿಂದ ವಿವಿಧ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ರೈತರಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ, ತರಬೇತಿ ಹಾಗೂ ನೆರವು ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಚಿದಾನಂದ ಕೋರೆ ಸಕ್ಕರೆ ಕಾರಖಾನೆಯ ನಿರ್ದೇಶಕ ಮಂಡಳಿಯ ಸದಸ್ಯರಾದ ಭರತೇಶ ಬನವಣೆ, ಅಜೀತ ದೇಸಾಯಿ, ಮಲ್ಲಪ್ಪ ಮೈಶಾಳೆ, ಚಿಂಚಲಿಯ ನಾನಾಸಾಬ್ ಸೌಂದಲಗಿ, ಅಂಕುಶ ಜಾಧವ, ಜೀತೇಂದ್ರ ಜಾಧವ, ಭೀಮಶಿ ಕಿಲಾರೆ, ವಸಂತ ಕರಕಯಿ, ಆರ್‌. ಬಿ. ಖಂಡಗಾವೆ ಸೇರಿದಂತೆ ಅನೇಕ ರೈತರು ಹಾಗೂ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಸಭೆಯ ಪೂರ್ವದಲ್ಲಿಯೇ ಡಾ. ಪ್ರಭಾಕರ ಕೋರೆ ಅವರು ಚಿಂಚಲಿಯ ಆರಾಧ್ಯ ದೇವತೆ ಮಾಯಕ್ಕಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.