ಡಾ. ಕುಲಕರ್ಣಿಯವರ ಉಪನ್ಯಾಸ ಕಾರ್ಯಕ್ರಮಗಳು ವಸ್ತುನಿಷ್ಠವಾಗಿ ನಡೆದು ಬರುತ್ತಿದೆ

ಡಾ. ಕುಲಕರ್ಣಿಯವರ ಉಪನ್ಯಾಸ ಕಾರ್ಯಕ್ರಮಗಳು ವಸ್ತುನಿಷ್ಠವಾಗಿ ನಡೆದು ಬರುತ್ತಿದೆ Dr. Kulkarni's lecture programs are being held objectively.

ಧಾರವಾಡ 01: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಗಸ್ಟ್‌ 28 ರಿಂದ ಸೆಪ್ಟೆಂಬರ್ 1ರವರಿಗೆ ಐದು ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ  ರಾ.ಹ ದೇಶಪಾಂಡೆ ಸಭಾಭವನದಲ್ಲಿ ಸುಸ್ಥಿರ ಅಭಿವೃದ್ಧಿ ಕಾರ್ಯಕರ್ತ ಡಾ. ಸಂಜೀವ್ ಕುಲಕರ್ಣಿ ಅವರು ನಡೆಸಿಕೊಡುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮಗಳು ಬಹಳ ವಸ್ತುನಿಷ್ಠವಾಗಿ ನಡೆದು ಬರುತ್ತಿದ್ದು ಮಹಾತ್ಮ ಗಾಂಧೀಜಿಯ ಸತ್ಯಾನ್ವೇಷಣೆಗಳನ್ನು ಕೇಳುಗರೊಂದಿಗೆ ಮುಖಾಮುಖಿಯಾಗಿಸುತ್ತ ಹೋಗುತ್ತಿದ್ದಾರೆ. 

ಸರಣಿ ಉಪನ್ಯಾಸದ ಅಂಗವಾಗಿ ಗಾಂಧಿ ಮತ್ತು ಸತ್ಯ ಹಾಗೂ ಅಹಿಂಸೆ ಎಂಬ ವಿಷಯದ ಕುರಿತು ಬಹಳ ಸಮಗ್ರವಾಗಿ ಗಾಂಧೀಜಿ ಪರಿಪಾಲಿಸಿ ಕೊಂಡು ಬಂದ  ಹಾಗೂ ತಾನು ಕಂಡುಕೊಂಡ ಎಲ್ಲ ವಿಷಯಗಳ ಹಾಗೂ ಕ್ಷೇತ್ರಗಳ ಸತ್ಯಗಳ ವಿಸ್ತಾರಗಳ ಕುರಿತು ಡಾಕ್ಟರ್ ಸಂಜೀವ್ ಕುಲಕರ್ಣಿ ಅವರು ತಮ್ಮ ಉಪನ್ಯಾಸ ಮಂಡಿಸಿದರು. 

ಅಹಿಂಸೆಯ ನಿಜವಾದ ಅರ್ಥ ಹಾಗೂ ಅಹಿಂಸೆಯ ಪಾಲನೆ ಹಾಗೂ ಅದರ ನಿಜವಾದ ಅರ್ಥಗಳನ್ನು ಗಾಂಧೀಜಿಯು ಹೇಗೆ ಅರ್ಥೈಸಲು ಪ್ರಯತ್ನಿಸಿದರು,  ಚೌರೀ ಚೌರಾ ಘಟನೆಯಲ್ಲಿ ಅಹಿಂಸೆಯ ಕುರಿತಾಗಿ ಯಾಕೆ ತಮ್ಮ ಅಸಹಕಾರ ಚಳುವಳಿಯನ್ನು ಹಿಂದೆ ತೆಗೆದುಕೊಂಡರು. ಅಹಿಂಸೆಯ ಪಾಲನೆಯಲ್ಲಿ ಎಷ್ಟು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಹಾಗೂ ಅಹಿಂಸೆಯ ಪಾಲನೆಯ ಕೆಲವು ಘಟನೆಗಳನ್ನು ಮೇಲುಕು ಹಾಕಿದರು.  

ಪ್ರತಿನಿತ್ಯವೂ  ವಿಶೇಷ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಚರ್ಚಿಸುತ್ತಿರುವ ಇವರು ಮೊದಲನೇ ದಿನ “ಗಾಂಧಿ ಎಂಬ ಹನುಮಂತನ ಬಾಲ” ಹಾಗೂ ಎರಡನೇ ದಿನ ಗಾಂಧಿ ಮತ್ತು ಯೋಗ ಎಂಬ  ವಿಷಯಗಳನ್ನು ಇಟ್ಟುಕೊಂಡು ಉಪನ್ಯಾಸ ನೀಡಿ ಚರ್ಚಿಸಿದರು . ಶೊತ್ರು ವರ್ಗವು ಏಕಮುಖ ಉಪನ್ಯಾಸ ವಾಗಿಸದೆ ಕೊನೆಯ ಅರ್ಧ ಗಂಟೆಯಲ್ಲಿ ತಮ್ಮ ಸಂದೇಹಗಳನ್ನು ತಮ್ಮ ಅಭಿಪ್ರಾಯಗಳನ್ನು ಚರ್ಚಿಸುತ್ತ ಬರುತ್ತಿರುವುದು ಉಪನ್ಯಾಸವನ್ನು ಮತ್ತಷ್ಟು ಶ್ರೀಮಂತ ಗೊಳಿಸುತ್ತಿದೆ. ಪ್ರತಿ ಕಾರ್ಯಕ್ರಮವು ಹೆಚ್ಚು ಕುತೂಹಲಗಳನ್ನು ಹುಟ್ಟಿಸುತ್ತಿದ್ದು ಆರೋಗ್ಯಕರ ಚರ್ಚೆಯಿಂದ ಉಪನ್ಯಾಸ ಕಾರ್ಯಕ್ರಮ ಬಹಳ ಸರಳ ಹಾಗೂ ಪ್ರಬುದ್ಧ ಚಿಂತನೆಗಳಿಂದ ಕೂಡಿದೆ. ಗಾಂಧೀಜಿಯವರು ತಮ್ಮನ್ನು ತಾವು ಅನ್ವಯಿಸಿಕೊಂಡ ಆರೋಗ್ಯ, ಸರ್ವೋದಯ, ಮಹಿಳಾ ಸಮಾನತೆ, ಸತ್ಯಾಗ್ರಹ, ಉಪವಾಸ, ಶಿಕ್ಷಣ, ಅಹಿಂಸೆ, ಸರಳತೆ, ಅಸಂಗ್ರಹ, ಖಾದಿ, ರಾಜಕಾರಣ, ಅಸ್ವಾದ, ಅಸ್ಪೃಶ್ಯತಾ ನಿವಾರಣೆ, ಶರೀರಶ್ರಮ, ಪ್ರಯೋಗಶೀಲತೆ, ಕೃಷಿ, ಪರಿಸರ, ಸ್ವದೇಶಿ, ಆಧ್ಯಾತ್ಮ , ಶ್ರಮ ಸಂಸ್ಕೃತಿ, ಸ್ವಾತಂತ್ರ್ಯ ಇಂತಹ ಹಲವಾರು ಚಿಂತನೆಗಳು ಪ್ರತಿನಿತ್ಯ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಚರ್ಚೆಯಾಗುತ್ತಿವೆ.ಆಗಸ್ಟ್‌ 30 ಶನಿವಾರದಂದು  ಗಾಂಧಿ ಮತ್ತು ಸತ್ಯ ಅಹಿಂಸೆ, ಭಾನುವಾರದಂದು ಗಾಂಧಿ ಮತ್ತು ಜಾತಿ ಧರ್ಮ ಸೋಮವಾರದಂದು ಗಾಂಧಿ ಮತ್ತು ಇಂದು ನಾಳೆ ಎಂಬ ವಿಷಯಗಳ ಆಧಾರಗಳ ಮೇಲೆ ಉಪನ್ಯಾಸ ಕಾರ್ಯಕ್ರಮವು ಮುಂದುವರಿಯುತ್ತದೆ. ಇದೊಂದು  ಮಹಾತ್ಮ ಗಾಂಧೀಜಿಯನ್ನು ಅರ್ಥೈಸಿಕೊಳ್ಳುವ ಸದಾವಕಾಲ. ಕರ್ನಾಟಕ ವಿದ್ಯಾವರ್ಧಕ ಸಂಘವು ಈ ಸರಣಿ ಉಪನ್ಯಾಸ ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತದೆ.