ಡಾ. ಕರಜಗಿಯವರ ‘ಸಾಕ್ಷಿ’ ಕೃತಿ ಆತ್ಮ ಚರಿತ್ರೆಗೊಂದು ಮಾದರಿಯಾಗಿದೆ: ಡಾ. ನರೋಡೆ
Dr. Karajagi's 'Sakshi' is a model for autobiography said Dr. Narode
ಬೆಳಗಾವಿ 21 ಹಿ ಸಮಾಸ ಸಂಘಟನೆಯ ಪ್ರಥಮ ಕಾರ್ಯಕ್ರಮವಾಗಿ ಡಾ.ಗುರುರಾಜ ಕರಜಗಿಯವರ ‘ಸಾಕ್ಷಿ’ ಕೃತಿಯ ಕುರಿತಂತೆ ಮನದಾಳದ ಮಾತು ಮತ್ತು ಚರ್ಚೆಯು ಆರಿ್ಪ.ಡಿ. ವ್ಯತ್ತ ದ ಬಳಿ ಇರುವ ಗುರುನಾಥ ಕುಲಕರ್ಣಿಯವರ ಸ್ವಗೃಹದಲ್ಲಿ ಜರುಗಿತು.
ಅತಿಥಿಗಳಾಗಿ ಗೋಗಟೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ನರೋಡೆಯವರು ತಮ್ಮ ಮಾತಿನಲ್ಲಿ ಡಾ. ಗುರುರಾಜ ಕರಜಗಿಯವರ ಆತ್ಮಚರಿತ್ರೆ ಸಾಕ್ಷಿ ಕೃತಿಯು ಆತ್ಮ ಚರಿತ್ರೆ ಪ್ರಕಾರಕ್ಕೊಂದು ಮಾದರಿಯಾಗಿದ್ದು ಇದೊಂದು ಸಂಗ್ರಾಹ್ಯ ಯೋಗ್ಯ ಕೃತಿಯಾಗಿ ಎಂದು ಹೇಳಿದರು.
ರಾಣಿ ಪಾರ್ವತಿ ದೇವಿ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೇ ಡಾ.ಸ್ಮಿತಾ ಸುರೇಬಾನಕರ ಅವರು ಮಾತನಾಡುತ್ತ ಡಾ. ಕರಜಗಿಯವರ ಆತ್ಮ ಚರಿತ್ರೆ ಸಾಕ್ಷಿ ಯಾವುದೇ ವೈಭವಿಕರಣವಿಲ್ಲದ ವಸ್ತುನಿಷ್ಠ ಕೃತಿಯಾಗಿದೆ. ಇವರ ಜೀವನದ ಮೇಲೆ ತಂದೆ ತಾಯಿಗಿಂತ ಅಜ್ಜ ತುಂಬ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು.
ಸುನೀತಾ ಪಾಟೀಲ , ಪದ್ಮಾ ಕುಲಕರ್ಣಿ ಮತ್ತು ಪವಿತ್ರಾ ರೇವಣಕರ ಇವರು ಮಾತನಾಡಿ ಡಾ. ಕರಜಗಿಯವರ ಬರವಣಿಗೆ ಶೈಲಿ ಓದುಗನನ್ನು ಸೆರೆ ಹಿಡಿಯುತ್ತದೆ. ಆತ್ಮ ಚರಿತ್ರೆಗಳು ಕಡಿಮೆಯಾಗುತ್ತಿರುವ ಇಂದಿನ ದಿನದಲ್ಲಿ ಇದೊಂದು ವಿಶೇಷ ಕೃತಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಸಂಪದ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು, ಸಮಾಸ ಸಂಘಟನೆಯು ಪ್ರತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆಯನ್ನು ಹೊಂದಿದೆ. ವಾಚನಾಭಿರುಚಿಯನ್ನು ಹೆಚ್ಚಿಸುವ ಅಲ್ಲದೇ ಬರೆಹಗಾರರನ್ನು ಒಂದೆಡೆ ಸೇರಿಸುವ ಸಂಘಟನೆ ಇದಾಗಿದೆ ಎಂದು ಹೇಳಿದ ಅವರು ಮುಂದಿನ ಕಾರ್ಯಕ್ರಮ ಆಗಸ್ಟ್ ದಿ 24 ರವಿವಾರದಂದು ಲೇಖಕಿ ದೀಪಿಕಾ ಚಾಟೆಯವರ ಗೃಹದಲ್ಲಿ ಇರುವುದಾಗಿ ಹೇಳಿದರು.
ತಿಂಗಳ ಕಾರ್ಯಕ್ರಮ ಉಸ್ತುವಾರಿಗಳಾದ ಗುರುನಾಥ ಕುಲಕರ್ಣಿ ಕುಟುಂಬ ಸದಸ್ಯರು, ನಾರಾಯಣ ಸುಂಬಳಿ. ಚಂದ್ರಶೇಖರ ನವಲಗುಂದ, ಚಿದಾನಂದ ವಾಳಕೆ, ಕನಕ ಕುಲಕರ್ಣಿ, ಮಂಜುನಾಥ ಕಲಾಲ, ಪೂರ್ಣಿಮಾ, ಮನೋಜ ಚರಂತಿಮಠ. ನಿರ್ಮಲಾ ರಾಮಸ್ವಾಮಿ, ಆರಿ್ಬ. ಬನಶಂಕರಿ. ಜ್ಯೋತಿ ಬದಾಮಿ. ಶ್ವೇತಾ ನರಗುಂದ, ಸುಮಿತ್ರಾ ಮಲ್ಲಾಪೂರ, ಗೀತಾ ಮಡಿವಾಳರ, ದೀಪಿಕಾ ಚಾಟೆ, ರಾಘವೇಂದ್ರ ದೇಶಮುಖ, ರಾಜೇಂದ್ರ ಶಹಾಪೇಟಿ. ಸತೀಶ ಕುಲಕರ್ಣಿ, ಮಮತಾ ಶಂಕರ, ಸುಧಾ ಪಾಟೀಲ, ರಾಜೇಶ್ವರಿ ಹೆಗಡೆ ರಘುನಾಥ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ ಕಾರಜೋಳ ವಂದಿಸಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 