ಡಾ. ಬಾಬಾಸಾಹೇಬ ಅಂಬೇಡ್ಕರರ 135ನೇ ಜಯಂತಿ ಉತ್ಸವ
Dr. Babasaheb Ambedkar's 135th Birth Anniversary Celebration
ವಿಜಯಪುರ 28: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿ ಉತ್ಸವ ಅಂಗವಾಗಿ ಬಬಲೇಶ್ವರ ತಾಲೂಕಿನ ಜಂಬಗಿ ಎಚ್. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಇಂದು ಮಂಗಳವಾರ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಹಾಗೂ ಜಂಬಗಿಯ ಡಾ. ಬಾಬಾಸಾಹೇಬ ಅಂಬೇಡ್ಕರ ತರುಣ ಸಂಘ ಜಂಬಗಿ ಎಚ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ನಡೆಯಿತು.25ನೇ ಏಪ್ರಿಲ್ 1970ರಲ್ಲಿ ಅಂದಿನ ಮೈಸೂರು ರಾಜ್ಯದ ಪೌರಾಡಳಿತ ಸಚಿವ ಬಿ. ಎಂ. ಪಾಟೀಲ ಅವರು ಈ ಶಾಲೆಯನ್ನು ಉದ್ಘಾಟಿಸಿದ್ದು ಇಂದು ಶತಮಾನೋತ್ಸವ ದಿನದಂದು ಈ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದು ಗಮನಾರ್ಹವಾಗಿತ್ತು. ಈಗ ಈ ಶತಮಾನದ ಈ ಶಾಲೆಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಿ.ಎಸ್.ಆರ್ ಅನುದಾನದಲ್ಲಿ ಹೊಸದಾಗಿ ಕೊಠಡಿಗಳು, ಶೌಚಾಲಯ ಹಾಗೂ ಕ್ರೀಡಾ ಸಾಮಾಗ್ರಿಗಳನ್ನು ಮಂಜೂರು ಮಾಡಿದ್ದಾರೆ.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಎಚ್.ಎಸ್. ಕೋರಡ್ಡಿ, ಕಲ್ಲಪ್ಪಗೌಡ ಕೊಡಬಾಗಿ, ಎಚ್. ಕೆ. ನ್ಯಾಮಗೌಡ, ದುಂಡಣ್ಣಗೌಡ ಕೋರಡ್ಡಿ, ಪಿ. ವಿ. ಚಿಗದಾನಿ, ತಿಮ್ಮನಗೌಡ ಪಾಟೀಲ, ಹನುಮಂತ ಕಜ್ಜಿದೋಣಿ, ಭೀಮಪ್ಪ ಕಜ್ಜಿದೋಣಿ, ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು.ಮತ್ತು ಡಾ. ಬಿಆರ್ ಅಂಬೇಡ್ಕರ್ ತರುಣ ಸಂಘದ ಸರ್ವ ಸದಸ್ಯರು, ಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ ವಿಭಾಗ, ಶಸ್ತ್ರಚಿಕಿತ್ಸೆ ವಿಭಾಗ,ಎಲುಬು ಮತ್ತು ಕೀಲು ಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಪ್ರಸೂತಿ ವಿಭಾಗ, ಚಿಕ್ಕ ಮಕ್ಕಳ ಚಿಕಿತ್ಸೆ ವಿಭಾಗ, ಚರ್ಮರೋಗ ಚಿಕಿತ್ಸೆ ವಿಭಾಗ, ನೇತೃ ಚಿಕಿತ್ಸೆ ವಿ ಭಾಗ, ದಂತ ಚಿಕಿತ್ಸೆ ವಿಭಾಗಗಳ ಎಲ್ಲ ತಜ್ಞ ವೈದ್ಯರು ಪಾಲ್ಗೊಂಡು ಚಿಕಿತ್ಸೆ ನೀಡಿದರು.ಜಂಬಗಿ ಎಚ್. ಮತ್ತು ಸುತ್ತಮುತ್ತಲಿನ ಗ್ರಾಮದ ನೂರಾರು ರೋಗಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 