ಡಾ. ಬಿ.ಆರ್‌.ಅಂಬೇಡ್ಕರ್‌ರವರ: ಮಹಾ ಪರಿನಿರ್ವಾಹಣ ದಿನ

Dr. BR Ambedkar's: Great Implementation Day

ಲೋಕದರ್ಶನ ವರದಿ 

ಡಾ. ಬಿ.ಆರ್‌.ಅಂಬೇಡ್ಕರ್‌ರವರ: ಮಹಾ ಪರಿನಿರ್ವಾಹಣ ದಿನ 

ಕಂಪ್ಲಿ 07: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ರವರ 68 ಮಹಾಪರಿನಿರ್ವಾಹಣ ದಿನವನ್ನು ಕರ್ನಾಟಕ ವಿಮೋಚನೆ ಅಸ್ಪಶ್ಯ ವಿಮೋಚನೆ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಆಚರಿಸಲಾಯಿತು. ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ದೇಶದಲ್ಲಿ ಸಮಾನತೆ ಸಾರುವ ಜತೆಗೆ ಮತದಾನದ ಹಕ್ಕನ್ನು ನೀಡಿದ್ದಾರೆ. ಅವರ ಕೊಡಿಗೆ ಅಪಾರವಾಗಿದೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. 

ರಾಜ್ಯ ಉಪಾಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ. ಬಿ.ಆರ್‌.ಅಂಬೇಡ್ಕರ್ ರವರು ಸಮಾಜದಲ್ಲಿನ ಸಮಾನತೆಗಾಗಿ ಧ್ವನಿ ಎತ್ತಿ ಹೋರಾಟಮಾಡಿದ ಮಹಾ ಪುರುಷ ಆದರ್ಶ ತತ್ವ ಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಿ ಅವರು ಹಾಕಿ ಕೋಟ್ ಮಾರ್ಗದಲ್ಲಿ ನಡೆಯಬೇಕು ಎಂದರು. 

ಜಿಲ್ಲಾಧ್ಯಕ್ಷರಾದ ಬುಜ್ಜಿಕುಮಾರ, ಮಾತನಾಡಿ ಮಹಿಳೆಯರ  ಸಮಾನತೆಗಾಗಿ ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸಿದರು ಎಂದರು ಮುಖಂಡರಾದ ಪಿ.ಬ್ರಹ್ಮಯ್ಯ, ಎಂ.ಸಿ.ಮಾಯಪ್ಪ, ಚನ್ನಬಸುವ, ಅಕ್ಕಿ ಜಿಲಾನ್ ಸೇರಿದಂತೆ ಅನೇಕರಿದ್ದರು. 


                                                                                  ಡಿ.1 ಡಾ.ಬಿ.ಆರ್‌.ಅಂಬೇಡ್ಕರ್ ರವರ 68 ಮಹಾಪರಿನಿರ್ವಾಹಣ ದಿನವನ್ನು ಕರ್ನಾಟಕ ವಿಮೋಚನೆ ಅಸ್ಪಶ್ಯ ವಿಮೋಚನೆ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಆಚರಿಸಲಾಯಿತು