ಎಚ್ ಪಿ ವಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ:ವೈ ಎಂ ಪೂಜಾರಿ
Don't have misconceptions about HPV vaccine: YM Pujari
ಲೋಕದರ್ಶನ ವರದಿ
ಇಂಡಿ 03: ಲಸಿಕೆಗಳು ಮಾನವನ ಜೀವ ರಕ್ಷಣೆ ಗರ್ಭದಿಂದ ಗೋರಿಯತನಕ ಮರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ಲಸಿಕೆಗಳು ಕೆಲವು ಚುಚ್ಚುಮದ್ದು. ನೀಡಿದರೆ ಇನ್ನೂ ಕೆಲವು ಲಸಿಕೆಗಳು ಹನಿ ನೀಡುವ ಮೂಲಕ ದೇಹದಲ್ಲಿ ಪ್ರತಿಕಾಯಗಳಾಗಿ ಉತ್ಪತ್ತಿಯಾಗಿ ನೈಸರ್ಗಿಕದಲ್ಲಿ ಬದುಕುವ ಮಾನವನಿಗೆ ಸೂಕ್ಷ್ಮಾಣು ಜೀವಿಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ಹೊರ ರೋಗಾಣುಗಳು. ದೇಹದಲ್ಲಿ ಪ್ರವೇಶಿಸಿದಾಗ ನಮ ಗರಿಯದಂತೆ ಅವುಗಳ ವಿರುದ್ಧ ಹೋರಾಟ ಮಾಡಿ ಅಮಾಯಕವಾಗಿ ಹೋಗುವ ಜೀವಗಳು ಉಳಿಸುತ್ತವೆ.ಆದ್ದರಿಂದ ಎಚ್ ಪಿ ವಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದು ವೈ. ಎಂ. ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಹೇಳಿದರು.
ಕೋವಿಡ್ 19ಸೇರಿದಂತೆ ಹೊಸದಾಗಿ ಲಸಿಕೆಗಳು ಬಂದಾಗ ಸಮಾಜದಲ್ಲಿ ಕಿಡಿಗೇಡಿಗಳು ತಪ್ಪು ಸಂದೇಶ ಮಾಡಿದ ಉದಾಹರಣೆಯು ಇದೆ.ಪೋಲಿಯೋ ಲಸಿಕೆ ನೀಡುತ್ತಿರುವಾಗ ಕೆಲವು ಧರ್ಮದ ಬಂಧುಗಳ ಸಂತತಿಗೆ ಅವನತಿ ಮಾಡಲು ತಂದಿರುವ ಲಸಿಕೆ ಯಾರು ಪಡೆಯಬಾರದು ಯಾರೋಬ್ಬ ಕಿಡಿಗೇಡಿ ಸುಳ್ಳು ಸುದ್ದಿ ಹಡಿಸಿದಾಗ ಅಲ್ಲಿಯ ಸಮಾಜದ ಮುಖಂಡರು ಧಾರ್ಮಿಕ ಮುಖ ಮೂಲಕ ಮನವೊಲಿಸಿ ಲಸಿಕೆಗಳು ನೀಡಿದ್ದು ಉದಾಹರಣೆಯು ಇದೆ.ಊಕಗಿ ಲಸಿಕೆ ಚುಚ್ಚುಮದ್ದು ನೀಡಿರುವ ಸ್ಥಳದಲ್ಲಿ ಬಾವು ನೋವು ಕಾಣಿಸಬಹುದು ಭಯಪಡಬೇಡಿ ಜ್ವರ ಬರಬಹುದು ಪ್ರಾಣಅಪಾಯವಿಲ್ಲ. ಬಾವು ನೋವು ಜ್ವರ ಭಯದಿಂದ ಲಸಿಕೆ ಪಡೆಯದಿದ್ದರೆ ಖಾಯಿಲೆಗೆ ತುತ್ತಾಗಬೇಕಾಗುತ್ತದೆ ಪ್ರಜ್ಞಾವಂತ ನಾಗರಿಕರು ಸಮಾಜದಲ್ಲಿರುವ ತಪ್ಪು ಕಲ್ಪನೆ ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ವೈ. ಎಂ. ಪೂಜಾರ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 