ರಾಜು ಕಾಗೆ ಅವರೇ ಮುಂದಿನ ಕಾಗವಾಡ ಶಾಸಕರು..!
ಲೋಕದರ್ಶನ ವರದಿ
ಗೊಂದಲ ಬೇಡ: ಬಸನಗೌಡಾ ಪಾಟೀಲ (ಬೊಮ್ನಾಳ) ಸ್ಪಷ್ಟನೆ..!!
ಕಾಗವಾಡ 15: ಮತಕ್ಷೇತ್ರದಿಂದ 2028ರಲ್ಲಿ ವಿಧಾನಸಭೆ ಚುನಾವಣೆಗೆ ರಾಜು ಕಾಗೆಯವರೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಶಾಸಕರಾಗಿ ಆಯ್ಕೆಯಾಗುವುದೂ ಕೂಡಾ ನಿಶ್ಚಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಮತದಾರರು ಮತ್ತು ಪಂಚಮಸಾಲಿ ಸಮಾಜ ಅವರೊಂದಿಗೆ ಇದೆ ಎಂದು ಪಂಚಮಸಾಲಿ ಮುಖಂಡ ಬಸನಗೌಡ ಪಾಟೀಲ (ಬೊಮ್ನಾಳ) ತಿಳಿಸಿದ್ದಾರೆ.
ಅವರು ರವಿವಾರ ದಿ.15 ರಂದು ಮಂಗಸೂಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಬೇರೆಯವರು ಇಲ್ಲಿ ಅಭ್ಯರ್ಥಿಗಳಾಗಲಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಕಪೊಲಕಲ್ಪಿತ ಸುದ್ದಿಗಳು ಹರಿದಾಡುತ್ತಿವೆ. ರಾಜು ಕಾಗೆ ಅವರ ಆರೋಗ್ಯ ಸರಿ ಇಲ್ಲ. ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ರಾಜು ಕಾಗೆ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ನಡೆಯುತ್ತಿದ್ದು, ರಾಜು ಕಾಗೆ ಅವರ ಅಭಿವೃದ್ಧಿ ಕೆಲಸಗಳಿಂದಾಗಿ ಕ್ಷೇತ್ರದ ಮತದಾರರು ಅವರೊಂದಿಗಿದ್ದಾರೆ. ರಾಜು ಕಾಗೆ ಎಲ್ಲಿಯೂ ನನ್ನ ಆರೋಗ್ಯ ಸರಿಯಿಲ್ಲ. ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ. ಕ್ಷೇತ್ರದ ಜನತೆ ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ರಾಜು ಕಾಗೆ ಅವರು ಮುಂದಿನ 2028 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಗವಾಡ ಮತಕ್ಷೇತ್ರದಿಂದ 6 ನೇ ಬಾರಿಗೆ ಶಾಸಕರಾಗಲಿದ್ದಾರೆ. ಕ್ಷೇತ್ರದ ಮತದಾರರು, ಪಂಚಮಸಾಲಿ ಸಮಾಜ ಅವರೊಂದಿಗೆ ಇದೆ. ಯಾರೂ ಕೂಡಾ ಕ್ಷೇತ್ರದ ಜನರಲ್ಲಿ ಗೊಂದಲು ಸೃಷ್ಟಿಸಬೇಡಿ ಎಂದು ಆಗ್ರಹಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 