ದಾಖಲೆ ನಿರ್ಮಿಸಿಕೊಂಡಿದ್ದೆ ಸಾಧನೆ ವೈದ್ಯ ಕ್ಯಾವಟರ್ ವ್ಯಂಗ್ಯ
Doctor Cavator's record-breaking achievement is ironic
ಕೊಪ್ಪಳ 06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 17 ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಮಾಡಿಕೊಂಡಿದ್ದೆ ಸಾಧನೆ ವಿನಹ, ಜನ ಕಲ್ಯಾಣದಂತ ಯೋಜನೆಗಳನ್ನು ಸರಿಯಾಗಿ ಘೋಷಿಸಿಲ್ಲ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ.ಈ ಕುರಿತು ಶುಕ್ರವಾರ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಹಿರಿಯರಾದ ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಉತ್ತಮ ಕೊಡುಗೆ ನೀಡುತ್ತಾರೆ ಎಂಬ ನೀರೀಕ್ಷೆಗಳಿದ್ದವು. ಆದರೆ, ಇಂತಹ ಹಲವು ನೀರೀಕ್ಷೆಗಳು ಆಯವ್ಯದಲ್ಲಿ ಈಡೇರಿಲ್ಲ.
ಬದಲಾಗಿ ಜನಸಾಮಾನ್ಯರ ಮೇಲೆ ಸಾಲದ ಹೊರೆಯ ಪ್ರಮಾಣ ಹೆಚ್ಚಿಸಿದ್ದೆ ಸಿದ್ದರಾಮಯ್ಯನವರ ಬಜೆಟ್ ಸಾಧನಯಾಗಿದೆ.ಅದರಲ್ಲಿಯೂ ಕೊಪ್ಪಳ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆ ಘೋಷಿಸದಿರುವುದು ದುರಂತದ ಸಂಗತಿಯಾಗಿದೆ. ಸಿಎಂ ಆರ್ಥಿಕ ಸಲಹೆಗಾರ, ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ ಶಾಸಕರು ಸಿಎಂ ಅವರಿಗೆ ಅತ್ಯಾಪ್ತರಾಗಿದ್ದರೂ ಜಿಲ್ಲೆಯನ್ನು ಕಡೆಗಣಿಸಿರುವುದು ದುರಂತದ ಸಂಗತಿಯಾಗಿದೆ. ಅಲ್ಲದೆ, ಈ ವರ್ಷದ ಬಜೆಟ್ ನಲ್ಲಿ ಕ್ಯಾನ್ಸರ್ ಆಸ್ಪತ್ರೆ ಘೋಷಿಸಿದ್ದು, ಶ್ಲಾಘನೀಯವಾದರೂ ಅನುಷ್ಠಾನ ತ್ವರಿತವಾಗಬೇಕು.ಏಕೆಂದರೇ ಕಳೆದ ಸಾಲಿನಲ್ಲಿ ಘೋಷಿಸಿದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಇಂದಿಗೂ ಆರಂಭವೇ ಆಗಿಲ್ಲ.
ಎರಡು ವರ್ಷದ ಹಿಂದೆ ಘೋಷಿಸಿದ ಜಾನಪದ ಲೋಕ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ಕೇವಲ ಬಜೆಟ್ ನಲ್ಲಿ ಯೋಜನೆ ಘೋಷಿಸಿ, ಕೈ ಬಿಡದೇ ಅವುಗಳನ್ನು ಸಮರ್ಕವಾಗಿ ಅನುಷ್ಠಾನ ಮಾಡಬೇಕು. ಅಂದಾಗ ಬಜೆಟ್ ನಲ್ಲಿ ಯೋಜನೆ ಘೋಷಿಸಿದ್ದಕ್ಕೂ ಸಾರ್ಥಕತೆ ಬರಲಿದೆ. ಅದನ್ನು ಬಿಟ್ಟು ಜನರನ್ನು ಯಮಾರಿಸುವ ತಂತ್ರದ ಭಾಗವಾಗಿ ಯೋಜನೆ ಘೋಷಿಸಿ, ನಂತರ ಅವುಗಳಿಗೆ ಕಾಯಕಲ್ಪ ಕೊಡದೇ ಮರೆಯುವ ಸರಕಾರದ ನಿರ್ಧಾರ ಈ ರಾಜ್ಯದ ಜನರಿಗೆ ಮಾಡುವ ಮಹಾದೊಡ್ಡ ಮೋಸವಾಗಿದೆ ಎಂದು ಕ್ಯಾವಟರ್ ಅವರು ಆರೋಪಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 