ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ ಕಾರ್ಯಕ್ರಮ

      ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ ಕಾರ್ಯಕ್ರಮ District tour programme of the State Women's Commission Chairperson

ಲೋಕದರ್ಶನ ವರದಿ 

 ಗದಗ   27:   ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಜುಲೈ 30 ರಿಂದ ಅಗಸ್ಟ್‌ 1 ರವರೆಗೆ  ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ವಿವರ ಈ ಕೆಳಗಿನಂತಿದೆ. ಜುಲೈ 30 ರಂದು  ಸಂಜೆ 6 ಗಂಟಗೆ ಬಾಗಲಕೋಟೆಯಿಂದ ಡಿವಿ ವಾಹನದ ಮೂಲಕ ಹೊರಟು  8.30 ಗಂಟೆಗೆ ಗದಗ ಜಿಲ್ಲೆಗೆ ಆಗಮಿಸಿ ವಾಸ್ತವ್ಯ ಮಾಡುವರು. ಜುಲೈ 31 ರಂದು ಬೆಳಿಗ್ಗೆ 9 ಗಂಟೆಗೆ  ಡಿವಿ ವಾಹನದ ಮೂಲಕ ಹೊರಟು 9.15 ಗಂಟೆಗೆ ಗದಗ ನಗರದಲ್ಲಿ ಇರುವ ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡುವರು.  ಬೆಳಿಗ್ಗೆ 10.15 ಗಂಟೆಗೆ ನವನಗರದಲ್ಲಿರುವ ಮಹಿಳಾಪೊಲೀಸ್ ಠಾಣೆಗೆ ಭೇಟಿ ನೀಡುವರು. 

11 ಗಂಟೆಗೆ ಗದಗ ಜಿಲ್ಲಾ ಆಡಳಿತ ಭವನದಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿರುವ  ಅಧಿನಿಯಮ 2013 ರ ತರಬೇತಿ ಕಾರ್ಯಾಗಾರ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸುವರು. ನಂತರ ಗದಗನಿಂದ ರೋಣ ಕ್ಕೆ ಆಗಮಿಸಿ ರೋಣ ನಗರದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿರುವ ಪೂಜ್ಯ ಮಾತೋಶ್ರೀ ಬಸಮ್ಮನವರು ಸಂಗನಗೌಡರು  ಪಾಟೀಲ ಇವರ ಎಪ್ಪತ್ತೆರಡನೆಯ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಮಹಿಳಾ ಗೋಷ್ಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ  ರೋಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವರು. ನಂತರ  ಮಧ್ಯಾಹ್ನ  4.45 ಗಂಟೆಗೆ ಗದಗಗೆ ಆಗಮಿಸಿ ರಾಜೀವ ಗಾಂಧಿ ನಗರದಲ್ಲಿರುವ ಸುಡುಗಾಡು ಸಿದ್ಧ ಸಮುದಾಯದ ಮೂಲಭೂತ ಸೌಲಭ್ಯಗಳ ಕುರಿತು ಪರೀಶೀಲನೆ ನಡೆಸಿ ವಾಸ್ತವ್ಯ ಮಾಡುವರು.  

ಅಗಸ್ಟ 1 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಿಳಾ ಸಂಘ ಉದ್ಘಾಟನೆ ಮಾಡುವರು ಹಾಗೂ ಗದಗ ನಗರದ ವಿವಿಧ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ಮತ್ತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಪ್ರಗತಿ  ಪರೀಶೀಲನಾ ಸಭೆ ನಡೆಸುವರು.  ಜಿಲ್ಲೆಯಲ್ಲಿ ಜಾರಿಯಾದ ಬಗ್ಗೆ ಹಾಗೂ ಪ್ರಕರಣಗಳು ದಾಖಲಾದ ಬಗ್ಗೆ , ಅಂಕಿ ಅಂಶಗಳೊಂದಿಗೆ ಚರ್ಚೆ, ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಹಾಗೂ ಆಂತರಿಕ ದೂರು ಸಮಿತಿ ಬಗ್ಗೆ ಪರೀಶೀಲನೆ , ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚೆ, ಮಹಿಳಾ ರಿಸರ್ವೆಶನ್ , ಕಾಲೇಜು ವಿದ್ಯಾರ್ಥಿನಿಯರು  ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತ ತೆಗೆದುಕೊಂಡ ಕ್ರಮದ ಬಗ್ಗೆ ಚರ್ಚೆ ನಡೆಸುವರು ಎಂದು ರಾಜ್ಯ ಮಹಿಳಾ ಆಯೋಗದ ಪ್ರಕಟಣೆ ತಿಳಿಸಿದೆ.