ಮಳೆಯ ಹಿನ್ನೆಲೆ ತುರ್ತು ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
District Collector issues instructions for emergency preparations due to rain
ಮುದ್ದೇಬಿಹಾಳ 12 : ಸದ್ಯ ಮುಂಗಾರು ಮಳೆ ಆರಂಭವಾಗಿದ್ದು ಯಾವುದೆ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅಧಿಕಾರಿಗಳಿಗೆ ಸೂಚಿಸಿದರು ಗುರುವಾರ ದಂದು ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ಪ್ರವಾಹಕ್ಕೆ ಸಂಬಂದಿಸಿದಂತೆ ಪ್ರತಿ ಗ್ರಾಮಕ್ಕೊಬ್ಬ ನೋಡಲ್ ಅಧಕಾರಿಯನ್ನು ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಲಮಟ್ಟಿಗೆ ಕೃಷ್ಣಾನದಿಯಿಂದ ಹೆಚ್ಚುವರಿ ನೀರು ಹರಿಯಲಾರಂಭಿಸಿದರೆ ಮುದ್ದೇಬಿಹಾಳ ಕೆಲವು ಹಳ್ಳಿಗಳು ಪ್ರವಾಹ ಪೀಡಿತವಾಗುವ ಸಂಭವವಿದೆ ಇದರ ಕುರಿತಾಗಿ ಕೆಬಿಜೆನ್ನೆಲ್ ಅಧಿಕಾರಿಗಳಿಗೆ ಮುಂಜಾಗ್ರತೆ ವಹಿಸಲು ಹೇಳಿದರು ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಗಂಟಿ ಮತ್ತಿತರೆ ಶುಚಿಗೊಳಿಸಿ ಅಲ್ಲಿ ಸೋಳ್ಳೆಗಳು ಉತ್ಪತ್ತಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಮತ್ತು ಶಿಥಿಲಗೊಂಡ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರಗಳ ಬಳಿ ಮಕ್ಕಳು ಸುಳಿಯದಂತೆ ನೋಡಿಕ್ಕೊಳ್ಳಬೇಕು ಎಂದು ಅವರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದರು ಕುಡಿಯುವ ನೀರು ಕಲುಸಿತಗೋಳ್ಳದಂತೆ ಶುಚಿಗೊಳಿಸಬೇಕು.
ಮುಗಾಂರು ಹಂಗಾಮಿನಲ್ಲಿ ರೈತರು ಬಿತ್ತನೆಗೆ ಸಜ್ಜಾಗುತಿದ್ದಾರೆ ಹಾಗಾಗಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕೃಷಿ ಇಲಾಖೆ ಅಧಿಕಾರಿಗಳು ಬೀಜ ಮತ್ತು ರಸಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚೆನೆ ನೀಡಿದರು ಮುದ್ದೇಬಿಹಾಳ ತಹಸೀಲ್ದಾರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದೆ ಸಂರ್ಭದಲ್ಲಿ ಬಳಿಕ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ತಾಳಿಕೋಟಿ ತಾಲೂಕಿನ ವಿವಿಧ ಸ್ಥಳಗಳಿಗೆ ಬೇಟಿ ನೀಡಿ ಪರೀಸೀಲಿಸಿದರು ತಾಳಿಕೋಟಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ತಾಳಿಕೋಟಿಯಿಂದ ವಿಜಯಪುರ ಮಾರ್ಗದಲ್ಲಿನ ಹಳೆ ಸೇತುವೆಯನ್ನು ಪರೀಶೀಲಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಲು ಸೂಚಿಸಿದರು.
ಅಲ್ಲಿಯೆ ಹೋಸದಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಪರೀಸೀಲಿಸಿ ಕೆ ಆರ ಡಿ ಸಿಎಲ್ ಇಂಜನಿಯರ ಅವರಿಗೆ ತ್ವರಿತವಾಗಿ ಸೇತುವೆ ಕಾಮಗಾರಿ ಪೋರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು ತಾಳಿಕೋಟಿಯಿಂದ ಮುದ್ದೇಬಿಹಾಳ ಮಾರ್ಗದಲ್ಲಿರುವ ಸೋಗಲಿ ಹಳ್ಳಕ್ಕೆ ನಿರ್ಮಾಣವಾಗುತ್ತಿರುವ ನೂತನ ಸೇತುವೆ ಕಾಮಗಾರಿಯನ್ನು ಸ್ಥಾನಿಕ ಪರೀಶೀಲನೆ ನಡೆಸಿ ಲೋಕೋಪಯೋಗಿ ಇಲಾಖೆ ಇಂಜನಿಯರ್ ಗಳಿಗೆ ತ್ವರೀತವಾಗಿ ಸೇತುವೆ ಕಾಮಗಾರಿಯನ್ನು ಪೋರ್ಣಗೊಳಿಸಲು ಹೆಳಿದರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 