ಅಂಗನವಾಡಿ ಮಕ್ಕಳಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ವಿತರಣೆ ಸಂಜು ಮಾನೆ ಕಾರ್ಯಕ್ಕೆ ಮೆಚ್ಚುಗೆ
Distribution of ration kits to Anganwadi children at own expense Sanju Mane's work appreciated
ಲೋಕದರ್ಶನ ವರದಿ
ಅಂಗನವಾಡಿ ಮಕ್ಕಳಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ವಿತರಣೆ
ಸಂಜು ಮಾನೆ ಕಾರ್ಯಕ್ಕೆ ಮೆಚ್ಚುಗೆ
ಕಾಗವಾಡ 07: ತಾಲೂಕಿನ ಮೋಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾತ್ರಾಳ ಗ್ರಾಮದ ಸಮಾಜ ಸೇವಕ ಸಂಜು ಮಾನೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ-02 ರಲ್ಲಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಳ್ಳ ರೇಷನ್ ಕಿಟ್ ವಿತರಣೆ ಮಾಡಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದಾ ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಂಜು ಮಾನೆ ಇವರು ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತ ದೇಶದ ಪ್ರಜೆಗಳು. ಈ ನಿಟ್ಟಿನಲ್ಲಿ ಮಕ್ಕಳು ಆರೋಗ್ಯವಂತರಾಗಿ ಬೆಳೆದು, ದೇಶದ ಅಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕೆಂಬ ಉದ್ದೇಶದಿಂದ ಗ್ರಾಮದ ಅಂಗನವಾಡಿ ಕೇಂದ್ರ-02 ರ ಮಕ್ಕಳಿಗೆ ಸೋಮವಾರ ದಿ. 06 ರಂದು ತಮ್ಮ ಸ್ವಂತ ಖರ್ಚಿನಿಂದ 1 ಕೆಜಿ ಅಕ್ಕಿ, 1 ಕೆಜಿ ಹೆಸರು ಬೆಳೆ, 250 ಗ್ರಾಮ್ ತುಪ್ಪ, 1 ಬಿಸ್ಕಿಟ್ ಪ್ಯಾಕ್ ಸೇರಿದಂತೆ ಹೀಗೆ ಹಲವು ಪೌಷ್ಟಿಕ ಆಹಾರಯುಕ್ತ ರೇಷನ್ ಕಿಟ್‌ಗಳನ್ನು ವಿತರಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದ ಸಿಎಚ್‌ಓ ಸಕ್ಕುಬಾಯಿ ಖವಾಸ್ತ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಂದಿನ ಮಕ್ಕಳೇ ನಾಳಿನ ಭವಿಷ್ಯ ರೂಪಿಸುವ ಪ್ರಜೆಗಳಾಗಲಿದ್ದು, ಸಮಾಜ ಸೇವಕ ಸಂಜು ಮಾನೆ ಅವರು ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಿ, ಮಕ್ಕಳು ಆರೋಗ್ಯವಂತಾಗಲು ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಅಣ್ಣಾಸಾಬ ಕಾಂಬಳೆ, ಕಿರಣ ಕಾಂಬಳೆ, ಸುರೇಶ ಕಾಂಬಳೆ, ಶಿವಲು ನಾಯಿಕ, ಪ್ರೀತಮ ಕಾಂಬಳೆ, ಅಮೀತ ಕೋಳಿ, ರಾಜು ಮಳಮಸಿ, ಗುಲಾಬ ನಾಯಿಕ, ದುಂಡಪ್ಪಾ ಕಾಂಬಳೆ, ಸಮುದಾಯ ಆರೋಗ್ಯ ಕೇಂದ್ರದ ಸಿಎಚ್‌ಓ ಸಕ್ಕುಬಾಯಿ ಖವಾಸ್ತ, ಅಂಗನವಾಡಿ ಕಾರ್ಯಕರ್ತೆ ಶೋಭಾ ಕಾಂಬಳೆ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 