ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ   Distribution of fruits to patients on the occasion of the birthday

ಯರಗಟ್ಟಿ  10: ದಲಿತ ಮುಖಂಡ, ಎಸ್‌.ಬಿ. ಪೌಂಡೇಶನ್ ಸಂಸ್ಥಾಪಕ ಸುರೇಶ ಭಜಂತ್ರಿ ಅವರ ಹುಟ್ಟು ಹಬ್ಬದ ನಿಮಿತ್ಯ ಸುರೇಶಅಣ್ಣಾ ಅಭಿಮಾನಿ ಬಳಗದಿಂದ ರೋಗಿಗಳ ಹೆಣ್ಣು ಹಂಪಲು ಹಾಗೂ ಅಂಬೇಡ್ಕರ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.ನಂತರ ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ಹಾಗೂ ಎಸ್‌.ಬಿ. ಫೌಂಡೇಶನ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಇವರ ಆಶ್ರಯದಲ್ಲಿ ವಯೋವೃದ್ಧರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ರಫೀಕ ಡಿ.ಕೆ ಸುರೇಶ ಭಜಂತ್ರಿ ಅವರು ಹುಟ್ಟು ಹಬ್ಬದ ನಿಮಿತ್ಯ ಅನಾಥಾಶ್ರಮಗಳು,

ವೃದ್ಧಾಶ್ರಮಗಳು ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸುವುದು ಅತ್ಯಂತ ಶ್ರೇಷ್ಠ ಹಾಗೂ ಸಮಾಜಮುಖಿ ಕಾರ್ಯವಾಗಿದೆ. ಇದು ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವಾಗುವುದಲ್ಲದೆ, ನಿಮ್ಮ ಹುಟ್ಟು ಹಬ್ಬಕ್ಕೆ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂದು ಹೇಳಿದರು.ಈ ವೇಳೆ ದಲಿತ ಮುಖಂಡರಾದ ಮಾರುತಿ ಭಜಂತ್ರಿ, ಬಸವರಾಜ ಕಟ್ಟಿಮನಿ, ರಮೇಶ ಗಿಡ್ಡವಗೋಳ, ಕರವೇ ಅಧ್ಯಕ್ಷ, ರಫೀಕ ಡಿ. ಕೆ., ಮಹಾಂತೇಶ ಕಲ್ಲೋಳ್ಳಿ, ಕಿರಣ ಭೋವಿ, ಫಾರಕ್ ಅತ್ತಾರ, ಕೊಟ್ರೇಶ ಎ, ಮುದಕ್ಕಪ್ಪ ಕರಿಗೊಣ್ಣವರ, ಫಕ್ಕೀರ ಬಸಿಡೋಣಿ, ಅಪ್ಪು ಕರಿಗೊಣ್ಣವರ, ಸಿದ್ದಪ್ಪ ಕರಿಗೊಣ್ಣವರ, ಮಾಳಪ್ಪ ಕರಿಗಾರ, ಗೌಡಪ್ಪ ಆಲದಕಟ್ಟಿ ಸೇರಿದಂತೆ ಅನೇಕರು ಇದ್ದರು.