ಬಿಎಸ್‌ಎನ್‌ಎಲ್ ನೌಕರರ ಪತ್ತಿನ ಸಹಕಾರಿ ಸಂಘಕ್ಕೆ ಚುನಾಯಿತಗೊಂಡ ನಿರ್ದೇಶಕರು
Directors elected to BSNL Employees' Cooperative Society
ಬಿಎಸ್‌ಎನ್‌ಎಲ್ ನೌಕರರ ಪತ್ತಿನ ಸಹಕಾರಿ ಸಂಘಕ್ಕೆ ಚುನಾಯಿತಗೊಂಡ ನಿರ್ದೇಶಕರು
ಕೊಪ್ಪಳ 15: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ನೌಕರರ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಒಟ್ಟು 13 ಸ್ಥಾನ ದಲ್ಲಿ 12 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಆಡಳಿತ ಮಂಡಳಿ ನೂತನ ನಿರ್ದೇಶಕರುಗಳಾಗಿ ಚುನಾಯಿತ ಗೊಂಡ ನಿರ್ದೇಶಕರ ವಿವರ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿಎಸ್‌ಎನ್‌ಎಲ್ ನಿಗಮ ಕೊಪ್ಪಳದ ಅಧೀಕ್ಷಕರಾದ ಅನಿಲ್ ಕುಮಾರ್ ಅವರು ಚುನಾವಣಾ ಫಲಿತಾಂಶ ಘೋಷಿಸಿದರು, ಸಂಘದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಡಳಿತ ಮಂಡಳಿ ನಿರ್ದೇಶಕರಾಗಿ ರಾಯಚೂರಿನ ಜಿಲಾನಿ ಭಾಷಾ, ಬಳ್ಳಾರಿಯಿಂದ ಪಿ.ವಿ. ಪ್ರಸಾದ ರಾವ್, ಕೊಪ್ಪಳದ ಮೊಹಮ್ಮದ್ ತಾಜುದ್ದಿನ, ಲಿಂಗಸೂರಿನ ಎಲ್. ಶರಣಪ್ಪ ಗೌಡ, ಯಲಬುರ್ಗಾದ ಶೇಕ್ ಮಸ್ತಾನ್, ಸಿಂಧನೂರಿನ ಕೆ. ನಾಗೇಂದ್ರ ಕುಮಾರ್ ಮತ್ತು ಎಚ್. ಎಂ. ರೇಣುಕಯ್ಯ ಸ್ವಾಮಿ ಚುನಾಯಿತಗೊಂಡಿದ್ದು ಪರಿಶಿಷ್ಟ ಜಾತಿ ಸ್ಥಾನದಿಂದ ರಾಯಚೂರಿನ ನಾಗರಾಜ್ ಒಡೆಯರ್, ಪರಿಶಿಷ್ಟ ಪಂಗಡದ ಸ್ಥಾನದಿಂದ ಕೊಪ್ಪಳದ ಅಶೋಕ್ ವಾಲ್ಮೀಕಿ, ಮಹಿಳಾ ಕ್ಷೇತ್ರ ಸ್ಥಾನದಿಂದ ಹೊಸಪೇಟೆಯ ಲೀಲಾ ಕ್ಲ್ಯಾರಿ ಡಿಬೇಲ್ ಮತ್ತು ಯಲಬುರ್ಗಾ ಅನಿತಾ ಸೊಪ್ಪಿಮಠ ಹಾಗೂ ಹಿಂದುಳಿದ ವರ್ಗ ಕ್ಷೇತ್ರದಿಂದ ಕೊಪ್ಪಳದ ಶ್ರೀನಿವಾಸ್ ಕುರುಗೋಡ್ ರವರು ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಚುನಾಯಿತಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿರುವ ಬಿಎಸ್‌ಎನ್ ಎಲ್ ನಿಗಮ ಕೊಪ್ಪಳದ ಅಧೀಕ್ಷಕ ಅನಿಲ್ ಕುಮಾರ್ ರವರು ಘೋಷಿಸಿ ಒಂದು ಸ್ಥಾನ ಖಾಲಿ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 