ಮಕ್ಕಳ ಬೇಸಿಗೆ ಶಿಬಿರ ಸಮಾರೋಪದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ
Digital library launched at the conclusion of children's summer camp
ರಾಣೆಬೆನ್ನೂರ 21 : ಆಧುನೀಕತೆಯ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಓದುಗರಿಗೆ ಇಷ್ಟವಾಗುವ ಪುಸ್ತಕಗಳೊಂದಿಗೆ ತುಮ್ಮಿಕಟ್ಟಿಯಲ್ಲಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ಗ್ರಂಥಾಲಯ ಆರಂಭವಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷ ಮಂಜುನಾಥ ಹೊನ್ನಾಳಿ ಹೇಳಿದರು.
ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊದಲಿಗೆ ಗ್ರಂಥಾಲಯ ಹೆಸರಿಗೆ ಮಾತ್ರವಿತ್ತು. ಸೌಲಭ್ಯಗಳಿಲ್ಲದೆ ಸೊರಗಿತ್ತು. ಇದೀಗ ಗ್ರಾಪಂ ಸದಸ್ಯರ ಒತ್ತಾಸೆಯಂತೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕ ಮನೆ ಎಂಬ ಹೆಸರಿಟ್ಟು ಹೊಸ ಮೆರಗು ನೀಡಲಾಗಿದೆ ಎಂದರು.
ಗ್ರಾಪಂ ಪಿಡಿಒ ಬಸನಗೌಡ ಪಾಟೀಲ ಮಾತನಾಡಿ ಮಕ್ಕಳಿಗೆ ಬೇಸಿಗೆ ಶಿಬಿರ ಮಾಡಿದ್ದು ಬಹಳ ಅನುಕೂಲವಾಗಿದೆ. ಮಕ್ಕಳು ಸದುಪಯೋಗ ಪಡಿಸಿಕೊಂಡಿದ್ದಾರೆ, ಈಗಾಗಲೇ ಈ ಗ್ರಂಥಾಲಯಕ್ಕೆ ಜಿಲ್ಲಾ ಗ್ರಂಥಾಲಯವು 6 ಸಾವಿರ ಪುಸ್ತಕಗಳನ್ನು ಹಾಗೂ ದಾನಿಗಳಿಂದ 154 ಪುಸ್ತಕ ಒದಗಿಸಿದ್ದಾರೆ. ಗ್ರಾಪಂ ಆಡಳಿತದವರು 5ಸಾವಿರ ರೂ ಮೊತ್ತದ ಕೆಪಿಎಸ್ಸಿ ಪುಸ್ತಕಗಳನ್ನು ಒದಗಿಸಿದ್ದಾರೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಅನುಕೂಲ ಮಾಡಲು ಕಂಪ್ಯೂಟರ್ ಪ್ರೊಜೆಕ್ಟರ್, ಪೂರೈಸಲಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕರಾದ ವಿದ್ಯಾವತಿ ಕೊಟ್ರ್ಪನವರ, ಪಾವನಿ ಹುಯ್ಯಪ್ಪನವರ, ನಂದೀಶ ಚಲವಾದಿ, ಮಿಥುನ ಸಾಲಿ, ಹೇಮಾ ಹುಯ್ಯಪ್ಪನವರ, ರಾಕೇಶ ಸಾಲಿ, ಮೋಹಿತ ಕೆ.ಕೆ. ದೀಕ್ಷಾ ಕುಂಬಾರ, ಶ್ರೇಯಸ್ ಎನ್.ಕೆ, ಉಶಾ ಳ್ಳೇರ, ಕಿರಣ ಭಂಡಾರಿ, ಜೀವಿತಾ ಗಡ್ಡದ, ಪ್ರತಿಭಾ ಚಕ್ರಸಾಲಿ, ವಿಷ್ಣು ಚಕ್ರಸಾಲಿ, ರುತಿಕ ಕಬ್ಬಾರ, ಆರಿ್ಪ, ನಮ್ರತ ಗಡ್ಡದ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 