ಉಡುಪಿ, ನ : ನನ್ನ ಜೀವನದಲ್ಲಿ ಈ ದಿನ ಬರಲಿದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡಿದ ಶ್ರೀಗಳು, ನನ್ನ ಜೀವನದಲ್ಲಿ ಈ ದಿನ ಬರಲಿದೆ ಎಂದು ನಿರೀಕ್ಷಿಸಿರಲಿಲ್ಲ. ಬಹಳ ವಯಸ್ಸಾಗಿರುವುದರಿಂದ ರಾಮಮಂದಿರದ ಆಸೆ ಕಳೆದುಕೊಂಡಿದ್ದೆ. ಬಹಳ ನಿರೀಕ್ಷೆಯಿಂದ ಈ ತೀರ್ಪನ್ನು ಎದುರು ನೋಡುತ್ತಿದ್ದೇನೆ. ರಾಮಮಂದಿರ ಇಡೀ ದೇಶದ ಜನರ ಕನಸು, ರಾಮ ಮಂದಿರದ ಸ್ವಲ್ಪ ದೂರದಲ್ಲಿ ಮಸೀದಿ ಕೂಡ ನಿಮರ್ಾಣವಾಗಲಿ ಎಂದು ಆಶಿಸುತ್ತೇನೆ. ಇಂದಿನ ತೀಪು ಯಾರ ಪರ, ವಿರುದ್ಧವಾದರೂ ಸೌಹಾರ್ದತೆ ಮುಖ್ಯ. ಇಲ್ಲಿ ಸಂವಿಧಾನಕ್ಕೆ ಭಂಗವಾಗಬಾರದು ಎಂದರು. ಕಾನೂನು ಹಾಗೂ ನ್ಯಾಯಾಲದ ವಿರುದ್ಧ ವರ್ತನೆ ಬೇಡ ಎಂದು ಶ್ರೀಗಳು ವಿನಂತಿಸಿದರು. ರಾಜ್ಯದಲ್ಲಿ ಸಂಘರ್ಷ ಉದ್ಭವವಾದರೇ, ಉಪವಾಸ ಕೂರುವುದಾಗಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಭಾನುವಾರ ದೆಹಲಿಯಲ್ಲಿ ನಡೆಯಲಿರುವ ಸಂತರ ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಮಾಹಿತಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಆಲೋಚನೆ ಹೊಂದಿದ್ದೇನೆ ಎಂದು ತಿಳಿಸಿದರು.