ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
Did Khanapur MLA Halgekar cross-vote? What is the underlying meaning of Anjali Nimbalkar's words?
ಬೆಳಗಾವಿ : ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಬಗ್ಗೆ ಹಲವಾರು ಚರ್ಚೆಗಳು ಹುಟ್ಟುಹಾಕುತ್ತಿದ್ದು, ಬೆಳಗಾವಿ ಜಿಲ್ಲೆಯ ಶಾಸಕರ ಹೆಸರು ತಳುಕು ಹಾಕಿರುವ ನಿಟ್ಟಿನಲ್ಲಿ ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಅವರು, ಅವರು ಹಾಲಿ ಶಾಸಕ ವಿಠಲ ಹಲಗೇಕರ್ ಅವರು ಹೆಸರು ಪ್ರಸ್ತಾಪಿಸಿ ಧನ್ಯವಾದ ತಿಳಿಸಿರುವದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ ನನ್ನ ಸೋಲಿಗೆ ಸ್ವಪಕ್ಷದವರೇ ಕಾರಣ ಅಥವಾ ಯಾರು ಅನ್ನೊದನ್ನ ಹಲಗೇಕರ ಅವರೆ ಸ್ಪಷ್ಟ ಪಡಿಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಈ ಕುರಿತು ಮಾಧ್ಯಮದವರು ಕೇಳಿದ ನಿಮ್ಮ x ಖಾತೆಯಿಂದ ಅಡ್ಡ ಮತದಾನದ ಕುರಿತು ಒಂದು ಪೊಸ್ಟ್ ಹಾಕಿರುವ ಬಗ್ಗೆ ಕೇಳಿದಾಗ ಈ ಬಗ್ಗೆ ಹೇಳಿಕೆ ನೀಡಿರುವ ಅಂಜಲಿ ನಿಂಬಾಳಕರ್ ಅವರು, ಬಿಜೆಪಿ ಕೆಲಸ ಶಾಸಕರು ಕಾಂಗ್ರೆಸ್ ಗೆ ಸಹಕರಿಸುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ ಕೆಲಸ ನೋಡಿ ಸಹಕಾರ ನೀಡುತ್ತಿದ್ದಾರೆ. ಇದು ಹೆಮ್ಮೆ ವಿಷಯ. ಅದೇ ತರಹ ಖಾನಾಪುರ ಶಾಸಕ ವಿಠಲ ಹಲಗೇಕರ ಅವರ ಹೆಸರು ಕೇಳಿಬಂದಿತ್ತು. ಅವರು ಕೂಡಾ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸಾ ನೋಡಿ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಸಹಕಾರ ನೀಡುವ ನಿಟ್ಟಿನಲ್ಲಿ ಅಡ್ಡ ಮತದಾನ ಮಾಡಿರಬಹುದು ಅದಕ್ಕೆ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿಕೆ ನೀಡಿರುವದು ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.
ನಮ್ಮ ಪಕ್ಷಕ್ಕೆ ಹಲಗೇಕರ ಅವರು ಸಹಕಾರ ಮಾಡಿದ್ದಾರೆ. ನಮಗೆ ಅದು ಕೂಡಾ ಖುಶಿಯ ವಿಚಾರ ಎಂದು ನಿಂಬಾಳಕರ ಹೇಳಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ನೂರ ವರ್ಷದಲ್ಲಿ ಆಗದ ಕೆಲಸ ನನ್ನ ಅವಧಿಯಲ್ಲಿ ನಾನು ಮಾಡಿದ್ದೇನೆ. ಆಸ್ಪತ್ರೆಗೆ, ಶಾಲಾ ಕೊಠಡಿಗಳು ಹೀಗೆ ಹಲಾವರು ಅಭಿವೃದ್ಧಿ ಮಾಡಿದ್ದೇನೆ.
ಚುನಾವಣೆಯಲ್ಲಿ ನಾನು ಸೋಲು ಕಂಡರು ನಾನು ಕೆಲಸಾ ಮಾಡತಾ ಬಂದಿದ್ದೇನೆ. ಈ ಹಿಂದೆ ತಾವು ಶಾಸಕರಾಗಿ ಆಯ್ಕೆ ಯಾಗಲು ಕಾಂಗ್ರೆಸ್ ನವರು ಸಹಕಾರ ಮಾಡಿದ್ದಾರೆ ಎಂದು ಹಲಗೇಕರ ಅವರು ಹೇಳಿದ್ದರು. ಆದರೆ ಅವರಿಗೆ ಯಾವ ಕಾಂಗ್ರೆಸ್ ನಾಯಕರು ಸಹಕಾರ ಮಾಡಿದ್ದಾರೆ ಅನ್ನುವದನ್ನು ಅವರೇ ಹೇಳಬೇಕು ಅಂದರು.
ನಿಮ್ಮನ್ನು ಸೋಲಿಸಲು ನಿಮ್ಮ ಪಕ್ಷದವರೇ ಪ್ರಯತ್ನ ಮಾಡಿರುವದರಲ್ಲಿ ಮಹಿಳಾ ನಾಯಕರು ಅಥವಾ ಪುರುಷರ ಕಾಣದ ಕೈ ಕೆಲಸಾ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನನಗೆ ಗೊತ್ತಿಲ್ಲ ಅದನ್ನು ವಿಠಲ ಹಲಗೇಕರ ಅವರೇ ಹೇಳಬೇಕು. ಅದರ ಬಗ್ಗೆ ಅವರೆ ಹಿಂದೆ ಹೇಳಿಕೆ ನೀಡಿದ್ದಾರೆ ಎಂದರು.
ಸದ್ಯ ಶಾಸಕ ಹಲಗೇಕರ ಅವರು ಯಾವ ಕೆಲಸಾ ಮಾಡತಾ ಇಲ್ಲ. ನೀವು ಯಾರ ಬಳಿ ಕೆಲಸಾ ಮಾಡಕೊತಿರಾ ಮಾಡಕೊಳ್ಳಿ ಅಂತಾ ಹೇಳತಾ ಇದ್ದಾರೆ ಎಂದು ಜನ ಹೇಳತಾ ಇದ್ದಾರೆ.
ಈ ನಿಟ್ಟಿನಲ್ಲಿ ಜನಾ ನೀವೆ ಶಾಸಕರಾಗಿ ಮತ್ತೆ ಆಯ್ಜೆ ಆಗಬೇಕು ಅಂತಾ ಜನಾ ನನಗೆ ಹೇಳತಾ ಇದ್ದಾರೆ ಎಂದು ನುಡಿದರು.
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ 