ಢಪಳಾಪೂರ ವಿದ್ಯಾ ವಿಹಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ! ಒಂದು ಉತ್ತಮ ಆಲೋಚನೆ ಇತಿಹಾಸ ಸೃಷ್ಟಿಸುತ್ತದೆ.

ಢಪಳಾಪೂರ ವಿದ್ಯಾ ವಿಹಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ! ಒಂದು ಉತ್ತಮ ಆಲೋಚನೆ ಇತಿಹಾಸ ಸೃಷ್ಟಿಸುತ್ತದೆ. Dhapalapura Vidya Vihar School's Annual Friendship Conference! A good idea creates history.

ಲೋಕದರ್ಶನ ವರದಿ 

ಢಪಳಾಪೂರ ವಿದ್ಯಾ ವಿಹಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ! ಒಂದು ಉತ್ತಮ ಆಲೋಚನೆ ಇತಿಹಾಸ ಸೃಷ್ಟಿಸುತ್ತದೆ. 

ಮಹಾಲಿಂಗಪುರ    03: ಒಂದು ಉತ್ತಮ ಆಲೋಚನೆಗೆ ಇತಿಹಾಸವನ್ನು ಸೃಷ್ಟಿಸುವ ಶಕ್ತಿ ಇದ್ದು, ಬೆಳೆಯುವ ಮಕ್ಕಳಲ್ಲಿ ಸ್ವಾಭಿಮಾನದ ಪಾಠದೊಂದಿಗೆ ಧನಾತ್ಮಕ ಅಂಶಗಳನ್ನು ಬೆಳೆಸಬೇಕೆಂದು ಕಾರ್ಕಳದ ರಾಷ್ಟ್ರಮಟ್ಟದ ಅಭಿವೃದ್ಧಿ ತರಬೇತುದಾರ ಫಡಕೆ ರಾಜೇಂದ್ರ ಭಟ್ ಕೆ ಅವರು ವಿಧ್ಯಾರ್ಥಿಗಳ ಪಾಲಕ, ಪೋಷಕರಿಗೆ ತಿಳಿ ಹೇಳಿದರು. 

ಭಾನುವಾರ ಢಪಳಾಪೂರ ವಿದ್ಯಾ ವಿಹಾರ ಶಾಲೆಯ ಆವರಣದಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಾಲ್ಯದಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊತ್ತು ಬೆಳೆಯುತ್ತವೆ.ಅವರಲ್ಲಿ ಬೆರೆತು ಬಾಳುವ (ಸೌಹಾರ್ದ) ರೀತಿ ಕಲಿಸಿ, ದ್ವೇಷ, ಮತ್ಸರ ತೊಡೆದು ಹಾಕಿದರೆ ಅದೆ ಮಗು ತನ್ನ ಭಿನ್ನ ಆಲೋಚನೆಗಳಿಂದ ಸಾಧನೆಯ ಮೆಟ್ಟಿಲುಗಳನ್ನೇರುತ್ತದೆ. 

ಈ ಸಂದರ್ಭದಲ್ಲಿ ಪಾಲಕರು ಯಾವುದೇ ತರಹದ ಋಣಾತ್ಮಕ, ಭಯ ಮತ್ತು ಆತಂಕದಂತಹ ವಿಷಯಗಳನ್ನು ವಿಧ್ಯಾರ್ಥಿಗಳ ಮುಂದೆ ಬಿತ್ತಬೇಡಿ.ಬದುಕಿನ ಯಶಸ್ವಿಗೆ ಮಾರ್ಕ್ಷಗಳೇ ಆಧಾರವಲ್ಲ, ಬದಲಾಗಿ ಸಾಮಾನ್ಯ ಜ್ಞಾನದೊಂದಿಗೆ ಅವರ ಬೌದ್ಧಿಕ ವಿಕಸನದತ್ತ ಪಾಲಕರು ಶ್ರಮಿಸಬೇಕು.ತಾಯಿ, ಗುರುಗಳು ಮತ್ತು ಅವಕಾಶಗಳಿಗೆ ಜಗತ್ತನ್ನೇ ಬದಲಿಸುವ ಶಕ್ತಿ ಇದೆ.ಇದೆ ಮಾರ್ಗದಲ್ಲಿ ವಿದ್ಯಾ ವಿಹಾರ ಶಾಲೆ ದಾಪುಗಾಲಿಡುತ್ತಿದ್ದು,, ಭವಿಷ್ಯದಲ್ಲಿ ನಾಡಿನ್ನೆಲೆಡೆ ಇದರ ಖ್ಯಾತಿ ಪಸರಿಸಲಿ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಕಾರ್ಯದರ್ಶಿ ವಿವೇಕ ಢಪಳಾಪೂರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯ ದೇಶ ಒಂದೇ ಇಲ್ಲಿ ಕಲಿಯುವ ಎಲ್ಲ ಮಕ್ಕಳು ಸಾಧಕರಾಗಿ ಹೊರಹೊಮ್ಮಿದರೆ ಸಾಕು, ನಮ್ಮ ಶಾಲೆ ತನ್ನಷ್ಟಕ್ಕೆ ತಾನೇ ಲಿಜೆಂಡ್ ಆಗಿ ಹೊರಹೊಮ್ಮುತ್ತದೆ ಇದೆ ನಮ್ಮ ಶಾಲೆಯ ಹೆಗ್ಗಳಿಕೆ ಎಂದರು. 

ಕಾರ್ಯಕ್ರಮದ ಭವ್ಯ ವೇದಿಕೆ ಮೇಲೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕ ವರದಿ ವಾಚನ ನಡೆಯಿತು.ಉಪನ್ಯಾಸ ನೀಡಿದ ಮಹನೀಯರ ಕುರಿತು ನಿರರ್ಗಳವಾಗಿ ಪರಿಚಯ ನೀಡಿದ ವಿಧ್ಯಾರ್ಥಿನಿ ಅನನ್ಯ ಅಂಗಡಿಯನ್ನು ರಾಜೇಂದ್ರ ಭಟ್ ಅವರು ಮುಕ್ತ ಕಂಠದಿಂದ ಹೋಗಳಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಶೀರ್ವದಿಸಿದರು. 

 ಕಾರ್ಯದರ್ಶಿ ವಿವೇಕ ಢಪಳಾಪೂರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕೆಎ??? ಸಂಸ್ಥೆಯ ಸ್ಥಾನಿಕ ಮಂಡಳಿ ಸದಸ್ಯರಾದ ಬಸವರಾಜ ಢಪಳಾಪೂರ, ಪ್ರಿನ್ಸಿಪಾಲ್ ರಾದ ಡಾ.ಜಾಯ್ ಸೆಬಾಸ್ಟಿಯನ್ ಇದ್ದರು. ನಿರೂಪಣೆ,ಸ್ವಾಗತ ಮತ್ತು ವಂದನಾರೆ​‍್ಣಯನ್ನು