ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ Demand to give ministerial position to Yashwant Rayagouda Patil

ಲೋಕದರ್ಶನ ವರದಿ 

ತಾಂಬಾ 11 : ನಿಂಬೆ ನಾಡಿನ ಧ್ವನಿ ವಿಧಾನಸೌಧದಲ್ಲಿ ಮುಳುಗಬೇಕಾದರೆ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಇಂಡಿ ತಾಲೂಕ ಕನಕ ಸೇನೆಯ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ನಡೆದ ಪತ್ರೀಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಇಂಡಿ ಮತಕ್ಷೇತ್ರಕ್ಕೆ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಸಚಿವಸ್ಥಾನ ಸಿಕ್ಕಿಲ್ಲಾ. ಶಾಸಕ ಯಶವಂತರಾಯಗೌಡ ಪಾಟೀಲ ಸಾತ್ವಿಕ ರಾಜಕಾರಣಿ ಬಡವರ, ದುರ್ಬಲರ, ಬಗ್ಗೆ ಅನುಕಂಪ ಹೊಂದಿದ್ದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, 3ಭಾರಿ ಶಾಸಕರಾಗಿ, ಆಡಳಿತ ಅನುಭವ ಹೊಂದಿದ್ದಾರೆ.

ಇಂಡಿ ಕ್ಷೇತ್ರದ ದಿ.ಆರ್‌.ಆರ್‌.ಕಲ್ಲೂರ ಅವರು ಬೇಳ್ಳಿ ಪಂಪ್‌ಸಟ್ ಕೋಟ್ಟಿರುವದು ಈ ಭಾಗದ ರೈತರ ಹೇಮ್ಮೆಯಾಗಿದೆ ಇಂಡಿ, ಸಿಂದಗಿ, ನಾಗಠಾಣ, ದೇವರ ಹಿಪ್ಪರಗಿ ಸೇರಿದಂತೆ ಈ ಭಾಗದ ಅನೇಕ ಕ್ಷೇತ್ರಗಳಲ್ಲಿ ಅವರು ಪ್ರಭಾವಶಾಲಿಗಳಾಗಿದ್ದಾರೆ. ಈ ಕ್ಷೇತ್ರವು ನೀರಾವರಿ ಶಿಕ್ಷಣ, ಉದ್ಯೂಗದ ಸಮಸ್ಯೆಗಳು ಬಗೆ ಹರಿಯಬೇಕಾದರೆ ಸಚಿವಸ್ಥಾನ ನೀಡಲೆಬೇಕು. ಯಶವಂತರಾಯಗೌಡರು ಅನೇಕ ಅಭಿವೃದ್ಧಿ ಕೇಲಸ ಮಾಡಿದ್ದಾರೆ. ತಾಲೂಕಿನಲ್ಲಿ ಕೆರೆತುಂಬುವ ಯೋಜನೆ, ರೇವಣಸಿದ್ದೇಶ್ವರ ಏತ ನೀರಾವರಿ, ಭೀಮಾಶಂಕರ ಸಹಕಾರಿ ಸಕ್ಕರೆ ಖಾರ್ಕಾನೆ, ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇದ್ರ ತಂದಿದ್ದಾರೆ. ಹಿಂತವರಿಗೆ ಸಚಿವ ಸ್ಥಾನ ನೀಡಿದರೆ ಅಭೀವೃದ್ದಿ ಪರ್ವ ಪ್ರಾರಂಭವಾಗುತ್ತದೆ. ಪಕ್ಷ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದರು. ಈ ಸಂಧರ್ಭದಲ್ಲಿ ನಿವೃತ್ತ ಪಾಚಾರ್ಯ ಎಸ್‌.ಎಸ್‌.ಕನಾಳ, ಸಿದ್ದಗೊಂಡ ಹಿರೇಕುರಬರ, ಅರ್ಜುನ ಚಟ್ಟರಕಿ, ಆರ್‌.ಎಚ್‌.ಶಿವಣಗಿ ಇದ್ದರು.