ನಿವೃತ್ತರ ಆರ್ಥಿಕ ಬಿಲ್ಲು ವಾಪಸ್ಸು ಪಡೆಯಲು ಆಗ್ರಹ.: ಜಿಲ್ಲಾಧ್ಯಕ್ಷ ಗೋವಿಂದಪ್ಪನವರ ಮನವಿ
Demand to get back the financial bill of retirees: District President Govindappa's request.
ಬಾಗಲಕೋಟೆ 17 : ಕಳೆದ ದಿ.25.3.2025 ರಂದು ಸಂಸತ್ತಿನಲ್ಲಿ ಕೇಂದ್ರ ಸರಕಾರದ ಆರ್ಥಿಕ ಮಂತ್ರಿಗಳಾದ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ ನಿವೃತ್ತರ ಆರ್ಥಿಕ ಬಿಲ್ಲನ್ನು ಮರಳಿ ಪಡೆಯಲು ಆಗ್ರಹಿಸಿ ಗುರವಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಕುರಿತು ಅಖಿಲ ಭಾರತ ನಿವೃತ್ತರ ಪೇಢರೇಷನ್ ನಿರ್ದೇಶಿಸಿದಂತೆ ಜಿಲ್ಲಾಧಿಕಾರಿಗಳಿಗೂ ತಾಲೂಕು ಸಂಘದಿಂದ ತಹಶೀಲದಾರ್ ಅವರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿ ಅವರಿಗೆ ತಲುಪುವಂತೆ ಉದ್ದೇಶಿಸಿ ಜಿಲ್ಲಾಧಿಕಾರಿಗಳಾದ ಎಂ.ಸಂಗಪ್ಪನವರಿಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ವಿ.ಬಿ.ಗೋವಿಂದಪ್ಪನವರ ಮನವಿ ಅರ್ಿಸಿದರು. ಈ ಬಿಲ್ಲು ಜಾರಿಗೆಯಾದರೆ ನಿವೃತ್ತ ನೌಕರರಿಗೆ ಡಿ.ಎ. ಹಾಗೂ ಎಂಟನೇ ವೇತನ ಆಯೋಗದಿಂದ ಬಹಳಷ್ಟು ಹಾನಿಯಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಎಸ್.ಆರ್.ಮನಹಳ್ಳಿ, ಪ್ರಧಾನ ಕಾರ್ಯದರ್ಶಿ ವಿಜಯರಾವ ಕುಲಕರ್ಣಿ, ಜಿ.ಎಸ್.ಬಡಿಗೇರ, ಎಚ್.ವಿ.ಮಾಗನೂರ, ಡಾ.ಪ್ರಕಾಶ ಖಾಡೆ, ಬಿ.ಜಿ.ಚಿಪ್ಪಲಕಟ್ಟಿ,ಚೆನ್ನಪ್ಪಗೋಳ, ಮೇಟಿ,ದಂಡಣ್ಣವರ,ಬಿ.ವಿ.ಕುಲಕರ್ಣಿ, ನಾಡಗೌಡ, ಬಂದಕೇರಿ, ವಿಜಯಲಕ್ಷ್ಮಿ ಮುರ್ನಾಳ, ಶ್ರೀಮತಿ ಗೊಂಗಡಶೆಟ್ಟಿ, ಶ್ರೀಮತಿ ಮಹೇಂದ್ರಕರ, ಮೊದಲಾದ ನಿವೃತ್ತ ನೌಕರರು ಹಾಜರಿದ್ದು ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ ಅವರಿಗೆ ಸಂಸದರ ಕಛೇರಿ ತೆರಳಿ ಮನವಿ ಸಲ್ಲಿಸಿ ವಿತ್ತ ಸಚಿವರ ಗಮನಕ್ಕೆ ತರಲು ತಿಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 