ಪ್ರತಾಪಸಿಂಹ ಹೇಳಿಕೆ ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಪ್ರತಾಪಸಿಂಹ ಹೇಳಿಕೆ ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ Demand for appropriate legal action condemning Pratap Simha's statement

ಲೋಕದರ್ಶನ ವರದಿ 

ಜಮಖಂಡಿ  24 : ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಂಘಟನೆಗಳು, ದಲಿತ ಮುಖಂಡರು ಹಾಗೂ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಲಿತ ಸಂಘಟನೆಗಳನ್ನು ಕಾಂಗ್ರೆಸ್‌ನ ಗುಲಾಮರು ಎಂಬ ರೀತಿಯಲ್ಲಿ ಬಿಂಬಿಸುವುದು ಹಾಗೂ ಸಾಮಾಜಿಕ ನ್ಯಾಯದ ಸಂಕೇತವಾಗಿರುವ ನೀಲಿ ಶಾಲಿನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ದಲಿತ ಸಂಘರ್ಷ ಸಮಿತಿ ಹಲವು ದಶಕಗಳಿಂದ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕ ಹನಮಂತ ಚಿಮ್ಮಲಗಿ, ಜಿಲ್ಲಾ ಸಂಘಟನಾ ಸಂಚಾಲಕ ಆನಂದ ದೊಡಮನಿ, ಕೃಷ್ಣಮೂರ್ತಿ ನಾಯ್ಕರ್, ಸಂಗಣ್ಣ ಮಡ್ಡಿ, ಮಾರುತಿ ಮರೆಗುದ್ದಿ, ಅರ್ಜುನ ದೊಡಮನಿ, ಲಗಮಣ್ಣ ಮಾರಾಪುರ, ಚಂದ್ರು ಹರಿಜನ, ಲಕ್ಷ್ಮಣ ಹರಿಜನ, ಪ್ರಭು ದೊಡಮನಿ, ಪರಶುರಾಮ ಮಾಂಗ ಅನೇಕರು ಸರಕಾರವನ್ನು ಒತ್ತಾಯಿಸಿದ್ದಾರೆ.