ಕನ್ನಡ ಭಾಷೆಯ ಪಠ್ಯಪುಸ್ತಕ ವಿಳಂಬ, ವಿದ್ಯಾರ್ಥಿಗಳಿಗೆ ಅನ್ಯಾಯ: ಹಾವೇರಿ ವಿಶ್ವ ವಿದ್ಯಾಲಯ ಕನ್ನಡ ವಿರೋಧಿ ಧೋರಣೆ ಎಸ್‌ಎಫ್‌ಐ ಖಂಡನೆ

ಕನ್ನಡ ಭಾಷೆಯ ಪಠ್ಯಪುಸ್ತಕ ವಿಳಂಬ, ವಿದ್ಯಾರ್ಥಿಗಳಿಗೆ ಅನ್ಯಾಯ: ಹಾವೇರಿ ವಿಶ್ವ ವಿದ್ಯಾಲಯ ಕನ್ನಡ ವಿರೋಧಿ ಧೋರಣೆ ಎಸ್‌ಎಫ್‌ಐ ಖಂಡನೆ Delay in Kannada language textbook, injustice to students: SFI condemns Haveri University's anti-Kan

ಹಾನಗಲ್  16: ಹಾವೇರಿ ವಿಶ್ವವಿದ್ಯಾಲಯ ಕನ್ನಡ ಭಾಷೆಯ ಸೆಮಿಸ್ಟರ್ ಪಠ್ಯಪುಸ್ತಕ  ವಿತರಣೆಯ ವಿಳಂಬ ನೀತಿಯನ್ನು ಖಂಡಿಸಿ, ಕೂಡಲೇ ಪಠ್ಯಪುಸ್ತಕ ಬಿಡುಗಡೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾನಗಲ್  ತಾಲ್ಲೂಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಪ್ರಾಂಶುಪಾಲರಾದ ಡಾ. ಚನ್ನಬಸಪ್ಪ ಎಸ್ ಕುಮ್ಮೂರ ಅವರ ಮೂಲಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹಲವು ಕಾಲೇಜುಗಳಿಗೆ ಬಿಎ, ಬಿಎಸ್‌ಸಿ, ಬಿಸಿಎ, ಬಿಬಿಎ ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಬೋಧನಾ ತರಗತಿಗಳಿಗೂ ಪ್ರಾರಂಭವಾಗಿ ಒಂದು ತಿಂಗಳಾಗಿದೆ ಇಷ್ಟಾದರೂ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಪಠ್ಯಕ್ರಮವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ಪಠ್ಯಕ್ರಮ ವಿಳಂಬ ದಿಂದಾಗಿ ಉಪನ್ಯಾಸಕರ ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿಯ ಪ್ರಕಾರ ಇನ್ನೊಂದು ವಾರದ ನಂತರ ಕಿರುಪರೀಕ್ಷೆ ಪ್ರಾರಂಭವಾಗುತ್ತಿದೆ.

ಪಠ್ಯಕ್ರಮ ನೀಡಿದ ಜೊತೆಗೆ ಪಿಡಿಎಫ್ ಮಾದರಿಯಲ್ಲೂ ಪಠ್ಯಕ್ರಮ ಒದಗಿಸಿಲ್ಲ ಎಂದು ದೂರಿದರು. ಪ್ರತಿಬಾರಿಯೂ ಯಾವುದಾದರೂ ಒಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ತಳ್ಳುವ ವ್ಯವಸ್ಥೆ ರೂಡಿಗತವಾಗಿ ಬರುತ್ತಿದೆ. ಈ ವ್ಯವಸ್ಥೆ ನಿಲ್ಲಬೇಕು ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬೀಳುತ್ತದೆ. ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲ ಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಅಧಿಕೃತ ಪಠ್ಯಕ್ರಮ ಬಿಡುಗಡೆ ಮಾಡಿ ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಚ್ಚರಿಕೆ ನೀಡಿದರು.

ಪ್ರತಿಬಾರಿ ಪದವಿ ವಿದ್ಯಾರ್ಥಿಗಳಿಗೆ ಬಾರಿ ಅನ್ಯಾಯವಾಗುತ್ತಿದೆ. ಹೀಗೆ ಹಿಂದೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗಳಲ್ಲಿ, ಪಠ್ಯಕ್ರಮ ಸಂಪೂರ್ಣ ವ್ಯವಸ್ಥಿತವಾಗಿ ನಡೆಯಲಿಲ್ಲ, ಈಗ ಪಠ್ಯಕ್ರಮ, ಪಠ್ಯಪುಸ್ತಕ ಮುದ್ರಣವಾಗದೆ ಕನ್ನಡ ಭಾಷೆಯ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಹೀಗೆ ನಿರಂತರ ಮುಂದುವರಿದರೆ ಸೆಮಿಸ್ಟರ್ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕವನ ಬಡಿಗೇರ,  ಸುಪ್ರೀತಾ ಕನ್ನೂರು, ಪ್ರತಿಭಾ ಕಾಗೆಣ್ಣನವರ, ಪ್ರಿಯಾ ಎಳಿಗೇರ್, ರಕ್ಷಿತಾ  ಕಾಲಿ, ರಕ್ಷಿತಾ ಚಿಕ್ಕಣ್ಣನವರ, ಜಯಲಕ್ಷ್ಮೀ ಸಿ, ಕವಿತಾ ಎಚ್, ಮಾಲಕ್ ಗುಂಡಲ್ಲಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.