ಕೋವಿಡ್ -19; ನಂಜನಗೂಡನ್ನು 'ಅತಿ ಸೂಕ್ಷ್ಮ ಪ್ರದೇಶ ' ಎಂದು ಘೋಷಣೆ
ಮೈಸೂರು,
ಮಾ 30, ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣ
ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು 'ಅತಿ ಸೂಕ್ಷ್ಮ ಪ್ರದೇಶ' ಎಂದು ಜಿಲ್ಲಾಡಳಿತ
ಘೋಷಿಸಿದೆ. ಇಲ್ಲಿನ ಔಷಧ ಕಂಪನಿಯಲ್ಲಿ ವಿದೇಶಿಗರೊಂದಿಗೆ ಕೆಲಸ ಮಾಡುತ್ತಿದ್ದ
ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಅದೇ ಕಂಪನಿಯ ಐವರಲ್ಲಿ ಕೂಡ ಸೋಂಕು
ದೃಢಪಟ್ಟಿತ್ತು. ಆದ್ದರಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು
ಪ್ರತ್ಯೇಕವಾಗಿರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕುಇರುತ ಎಸ್ ಪಿ
ಸಿ.ಬಿ.ರಿಷ್ಯಂತ್ ವಿಡಿಯೋ ಸಂದೇಶ ಬಿಡುಗಡೆಗೊಳಿಸಿದ್ದು, ಕಂಪನಿಯಲ್ಲಿದ್ಉದ ಎಲ್ಲಾ
1,372 ಉದ್ಯೋಗಿಗಳ ಪೈಕಿ ಈಗಾಗಲೇ 900 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು,
ಉಳಿದವರನ್ನು ಇಂದು ಪ್ರತ್ಯೇಕವಾಗಿರಿ ಸಲಾಗಿರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಸೋಂಕಿತರೊಂದಿಗೆ
ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸದ್ಯ ನಂಜನಗೂಡನ್ನು
ಒಂದು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಪ್ರತ್ಯೇಕವಾಗಿರಿಸಿದವರ
ಮೇಲೆ ನಿಗಾ ವಹಿಸಲಾಗುವುದು. ಅವರು ಮನೆಯಿಂದ ಹೊರಬರದಂತೆ ಗಮನಹರಿಸಲು ಗಸ್ತು
ಪೊಲೀಸರನ್ನು ನಿಯೋಜಿಸಲಲಾಗುವುದು. ಇಲ್ಲಿನ ಎಪಿಎಂಸಿಗೆ ಕೂಡ ಹೋಲ್ ಸೇಲ್
ಮಾರಾಟಗಾರರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಲಾಗುತ್ತಿಲ್ಲ. ಇಲ್ಲಿಯವರೆಗೆ
ಮೈಸೂರು ಜಿಲ್ಲೆಯಲ್ಲಿ 776 ಜನರು 14 ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಿದ್ದಾರೆ
1,702 ಮಂದಿ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ತಪಾಸಣೆಗೊಳಪಡಿಸಿರುವ 90
ಮಾದರಿಗಳ ಪೈಕಿ 82 ನಕಾರಾತ್ಮಕ ವರದಿ ಬಂದಿದ್ದು, ಭಾನುವಾರ 8 ಮಂದಿಯಲ್ಲಿ ಸೋಂಕಿರುವುದು
ದೃಢಪಟ್ಟಿತ್ತು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 