ಸೆ.6ರಂದು ರಾಯಬಾಗದಲ್ಲಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ದಶಮಾನೋತ್ಸವ

ಸೆ.6ರಂದು ರಾಯಬಾಗದಲ್ಲಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ದಶಮಾನೋತ್ಸವ Decennial celebrations of Gurushanteshwara Samsthana Hiremath in Raibag on September 6

ರಾಯಬಾಗ, ಸೆ.4: ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ರಾಯಬಾಗ ಶಾಖಾ ಮಠದ ದಶಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಸೆ.6ರಂದು ವಿಜೃಂಭಣೆಯಿಂದ ನಡೆಯಲಿದೆ.  ಸೆ.6ರಂದು ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ, ಅಯ್ಯಾಚಾರ ಹಾಗೂ ಶಿವದೀಕ್ಷಾ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 9 ಗಂಟೆಗೆ ಪಟ್ಟಣದ ಹನುಮಾನ ಮಂದಿರದಿಂದ ಶ್ರೀಮಠದವರೆಗೆ ಸುಮಂಗಲೆಯರಿಂದ ಕುಂಭಮೇಳ ಹಾಗೂ ಜಗದ್ಗುರು ರೇಣುಕಾಚಾರ್ಯರ ಬೆಳ್ಳಿಮೂರ್ತಿ ಅಡ್ಡಪಲ್ಲಕ್ಕಿ ಉತ್ಸವ ಮತ್ತು ವಿವಿಧ ದೇವರುಗಳ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.  

ಕೊಲ್ಲಾಪುರ ಜಿಲ್ಲಾ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಪರಮಾನಂದವಾಡಿ ಗುರುದೇವ ಬ್ರಹ್ಮಾನಂದಾಶ್ರಮದ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಕಟಕೋಳದ ರೇಣುಕ ಗಡದೇಶ್ವರ ದೇವರು, ಆದಿಜಾಂಬವ ಮಠದ ಅನಂತಾನಂದ ಸ್ವಾಮೀಜಿ, ಆರಾದ್ರಿಮಠದ ಡಾ. ಮಹಾಂತೇಶ ಶಾಸ್ತ್ರಿ, ಹುಕ್ಕೇರಿಯ ಸಂಪತಕುಮಾರ ಶಾಸ್ತ್ರಿ ಹಾಗೂ ಬೆಂಗಳೂರಿನ ಡಾ. ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.  

ರೈತ ನಾಯಕ ಹಾಗೂ ಇಂಚಗೇರಿ ಮಠದ ಆಧ್ಯಾತ್ಮಿಕ ಗುರು ಶಶಿಕಾಂತ ಗುರುಜಿ ಉಪನ್ಯಾಸ ನೀಡಲಿದ್ದಾರೆ. ಶಾಸಕ ದುರ್ಯೋಧನ ಐಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೊಳೆ ಮನವಿ ಮಾಡಿದ್ದಾರೆ.