ದಲಾಯಿಲಾಮ ಅವರ 90ನೇ ಜನ್ಮದಿನ ಆಚರಣೆ

ದಲಾಯಿಲಾಮ ಅವರ 90ನೇ ಜನ್ಮದಿನ ಆಚರಣೆ Dalai Lama's 90th Birthday Celebration

ಮುಂಡಗೋಡ 07 : ತಾಲೂಕಿನ ಟಿಬೇಟಿಯನ್  ಕಾಲೋನಿಯಲ್ಲಿ ಟೀಬೇಟಿಯನ್  ಧರ್ಮಗುರು ಆದ ದಲಾಯಿಲಾಮ ಅವರ 90ನೇ ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮ ಆಚರಿಸಲಾಯಿತು.ತಾಲ್ಲೂಕಿನಲ್ಲಿ ನೆಲೆಸಿರುವ ಟಿಬೇಟಿಯನ ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

ಧರ್ಮಗುರು ದಲಾಯಿಲಾಮ್ ಅವರ ಮಾರ್ಗದರ್ಶನದಲ್ಲಿ ಜಗತ್ತಿನ ವಿವಿಧಡೆ ನೆಲೆಸಿರುವ ಟಿಬೆಟನ್‌ರು, ಶಾಂತಿಯನ್ನು ಪ್ರತಿಪಾದಿಸುತ್ತಿದ್ದಾರೆ.ಪ್ರತಿವರ್ಷವು ಈ ಸಮಯದಲ್ಲಿ ಟಿಬೇಟಿಯನ್ ಕಾಲೋನಿ ವಿಜೃಂಭಣೆಯಿಂದ  ಕಂಗೊಳಿಸುತ್ತದೆ ,ಧರ್ಮಗುರು ಆದ ದಲಾಯಿಲಾಮ ಅವರ ಹಾಗೂ ಕಾಲೋನಿಯ ಪ್ರತಿ ಮನೆಯಲ್ಲೂ  ಧರ್ಮಗುರುವಿನ ಹುಟ್ಟು ಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ಹಾಗೆಯೇ ಟಿಬೆಟಿಯನ್ ಕ್ಯಾಂಪ್ ನಂ 3 ರ  ಕಮ್ಯುನಿಟಿ ಹಾಲ್‌ನಲ್ಲಿ ಭಾನುವಾರ ನಡೆದ ದಲಾಯಿ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಟಿಬೇಟಿಯನ್ ಜನರಿಂದ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ದಲಾಯಿ ಲಾಮಾ ಅವರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕ, ಮಂತ್ರಿಯಾಗಿದ್ದೇನೆ. 

 ಜಗತ್ತಿನ ಶಾಂತಿಮಂತನ ಆಶೀರ್ವಾದವು ಎಲ್ಲರಿಗೂ ಸಿಗಬೇಕು. ಕೆಲವು ವರ್ಷಗಳಿಂದ ತಾಲ್ಲೂಕಿನ ಟಿಬೇಟಿಯನ್ ಕ್ಯಾಂಪ್ ಗಳಿಗೆ ದಲೈಲಾಮಾ ಭೇಟಿ ನೀಡಿಲ್ಲ. ಆದರೆ, ಅದಕ್ಕಿಂತ ಮುಂಚೆ ಪ್ರತಿ ವರ್ಷ ದಲಾಯಿ ಲಾಮಾ ಭೇಟಿ ನೀಡಿದಾಗಲೂ, ಅವರ ಆಶೀರ್ವಾದ ಪಡೆಯುತ್ತಿದೆ ಟಿಬೇಟಿಯನ್ ಜನರು ಎಲ್ಲರೊಳಗೆ ಒಂದಾಗಿ ಜೀವನ ನಡೆಸುತ್ತಿದ್ದು, ಅವರ ಬೇಡಿಕೆಗಳನ್ನು ಶಾಸಕನಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಮಾತನಾಡಿ, ಟಿಬೆಟಿಯನ್ ಧಾರ್ಮಿಕ ನಾಯಕ ದಲಾಯಿ ಲಾಮಾ ಅವರು ಕೇವಲ ಧಾರ್ಮಿಕ ಗುರುವಾಗಿ ಗುರುತಿಸಿಕೊಂಡಿಲ್ಲ. ಜಗತ್ತಿನ ಶಾಂತಿಧೂತ ರಾಗಿ ಹೆಚ್ಚು ಪ್ರಭಾವಿತರಾಗಿದ್ದಾರೆ.ಇನ್ನಷ್ಟು ವರ್ಷಗಳ ಕಾಲ ದಲಾಯಿ ಲಾಮಾ ಆರೋಗ್ಯದಿಂದ ಜೀವನ ನಡೆಸಲಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಹೇಳಿದರು.ತಾಲ್ಲೂಕಿನಲ್ಲಿ ನೆಲೆಸಿರುವ ಟಿಬೇಟಿಯನ ಸ್ಥಳೀಯ ಈ ಸಂದರ್ಭದಲ್ಲಿ  ತಹಶೀಲ್ದಾರ್ ಶಂಕರ ಗೌಡಿ, ಸಿಪಿಐ ರಂಗನಾಥ್ ನಿಲಮ್ಮನವರ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್‌.ಫಕ್ಕೀರ​‍್ಪ, ಜಂಪಾ ಲೋಯ್ಸಂಗ್, ಇಂಡೋ ಟಿಬೇಟಿಯನ್ ಅಸೋಸಿಯೇಷನ್ ಪದಾಕಾರಿಗಳು, ಬೌದ್ಧ ಮುಖಂಡರು ಉಪಸ್ಥಿತರಿದ್ದರು.