ಸರಕಾರಿ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಪ್ರಗತಿ ಪರೀಶೀಲಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು;
DC Divya Prabhu inspected the progress of Government Women's College building work
ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ, ಜನವರಿ-26 ರೊಳಗೆ ಬಳಕೆಗೆ ಕಟ್ಟಡ ನೀಡಲು ಸೂಚನೆ
ಧಾರವಾಡ: ಆ.21: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಯನ್ನು ನಿನ್ನೆ (ಆ.21) ಸಂಜೆ ವೀಕ್ಷಿಸಿ, ಪ್ರಗತಿ ಪರೀಶೀಲಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಬರುವ ಜನವರಿ 2026 ರೊಳಗೆ ಕಾಲೇಜು ಕಟ್ಟಡವನ್ನು ಪೂರ್ಣಗೊಳಿಸಿ, ಬಳಕೆ ನೀಡಬೇಕೆಂದು ನಿರ್ಮಾಣ ಸಂಸ್ಥೆಗೆ ಅವರು ಸೂಚಿಸಿದರು.
ಕಾಲೇಜಿನ ಪ್ರಗತಿ, ಕಟ್ಟಡದ ಮೂಲಸೌಕರ್ಯ, ವಿದ್ಯಾರ್ಥಿನಿಯರ ಅಗತ್ಯಗಳು ಹಾಗೂ ತರಗತಿಗಳ ಸೌಲಭ್ಯಗಳನ್ನು ಪರೀಶೀಲಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಚರ್ಚಿಸಿದರು.
ನಂತರ ಅವರು ಮಾತನಾಡಿದ ಜಿಲ್ಲಾಧಿಕಶರಿಗಳು, ಶೈಕ್ಷಣಿಕವಾಗಿ ಬಹು ಉಪಯೋಗವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಬೇಕು. ವಿದ್ಯಾರ್ಥಿನಿಯರಿಗಾಗಿ ಅಗತ್ಯ ಸೌಕರ್ಯಗಳು ದೊರಕುವಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲಿ ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಅವರು ಸೂಚಿಸಿದರು.
ಕಟ್ಟಡದ ಕಾಮಗಾರಿಯ ಅಂದಾಜು ವೆಚ್ಚ 3.5 ಕೋಟಿ ರೂ. ಗಳಾಗಿದ್ದು ಮೂರು ಕೊಠಡಿಗಳು, ಒಂದು ಗ್ರಂಥಾಲಯ, ಒಂದು ಆಡಳಿತ ಕಚೇರಿ, ಒಂದು ಸಿಬ್ಬಂದಿಗಳ ಕೊಠಡಿ, ಒಂದು ಪ್ರಾಚಾರ್ಯರ ಕೊಠಡಿ, 8 ಶೌಚಾಲಯ ಹಾಗೂ ಒಂದು ಪ್ರತ್ಯೇಕವಾಗಿ ಅಂಗವಿಕಲರಿಗೆ ಶೌಚಾಲಯ ಹಾಗೂ ಲಿಫ್ಟ್ ವ್ಯವಸ್ಥೆಯನ್ನು ಈ ಕಟ್ಟಡ ಹೊಂದಲಿದೆ ಎಂದು ಅವರು ಹೇಳಿದರು.
ಸದರಿ ಕಟ್ಟಡವನ್ನು ನಿಗದಿತ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಮುಗಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದರು.
ಕಾಲೇಜು ಪ್ರಾಚಾರ್ಯರ ಡಾ.ಎಸ್.ಎಸ್.ಅಂಗಡಿ ಅವರು ಮಾತನಾಡಿ, ಹಳೆ ಕಟ್ಟಡದ ಸ್ಥಿತಿ, ಅಗತ್ಯ ದುರಸ್ತಿ ಹಾಗೂ ಇನ್ನಷ್ಟು ತರಗತಿ ಕೊಠಡಿಗಳ ಅವಶ್ಯಕತೆ ಇರುವ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಡಿ. ಹೆಚ್ ಹೂಗಾರ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಭಿಯಂತರ ನಂದಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕ ಲಕ್ಷ್ಮಿಪತಿ, ಮಹಿಳಾ ಕಾಲೇಜು ಉಪಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 