ಡಿ-ಫಾರ್ಮಸಿ ವಿಧ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮ
D-Pharmacy students' graduation ceremony
ಗಂಗಾವತಿ 17: ಡಿಪ್ಲೊಮಾ ಇನ್ ಫಾರ್ಮಸಿ ಅಭ್ಯಾಸ ಮಾಡುವುದು ಅಷ್ಟು ಸರಳವಾದ ಕೆಲಸವಲ್ಲ, ಹೀಗಾಗಿ ಕಷ್ಟ ಪಟ್ಟು ಪದವಿ ಪಡೆದವರು ಹೆಮ್ಮೆಯಿಂದ ಬದುಕಿ ಎಂದು ಕರ್ನಾಟಕ ರಾಜ್ಯ ಓಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಹೇಳಿದರು. ಡಿ.ಫಾರ್ಮಅಭ್ಯಾಸಜಾಣರು ಮಾತ್ರ ಓದು ವಂತಹದ್ದು, ಓದಲು ಕಷ್ಟ ಇದ್ದಂತೆ ಮುಂದೆ ಬದುಕಲು ಅಡೆ-ತಡೆಗಳೂ ಬರುತ್ತವೆ,ಅವುಗಳನ್ನು ತಡೆಯಲು ಮನೋ ಧೈರ್ಯ ಬೆಳೆಸಿಕೊಳ್ಳಬೇಕು ಎಂದುಕರೆ ನೀಡಿದರು.
ರವಿವಾರ ನಗರದ ಸೇಂಟ್ ಫಾಲ್ಸ್ ಡಿ-ಫಾರ್ಮಸಿ ಕಾಲೇಜ್ ವಿಧ್ಯಾರ್ಥಿಗಳ ಸ್ವಾಗತ ಮತ್ತು ಬಿಳ್ಕೊಡುಗೆ ಕಾರ್ಯಕ್ರಮ ಸಮನ್ವಯ-2025’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಡಿ.ಫಾರ್ಮಸಿ ಓದಿದ ಮೇಲೆ ಓಷಧಅಂಗಡಿಆರಂಭಿಸಲು ಹಣ ಬೇಕು, ವೈಧ್ಯರ ಮತ್ತು ಸಾರ್ವಜನಿಕರ ಸಹಕಾರ ಬೇಕು. ಹಲವಾರುಕಾಯ್ದೆ, ನಿಯಮ ಮತ್ತು ನಿಭಂದನೆಗಳನ್ನು ಪಾಲಿಸಬೇಕು. ಇಷ್ಟು ಇದ್ದಾಗ್ಯೂ ವ್ಯಾಪಾರ ಹೂವಿನ ಹಾಸಿಗೆಯಾಗಿರುವುದಿಲ್ಲ, ಮುಳ್ಳಿನ ಆಸನವಾಗಿರುತ್ತದೆ. ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವತಾಕತ್ತುಇರುವವರು ಮಾತ್ರ ಫಾರ್ಮಸಿ ಅಭ್ಯಾಸ ಮಾಡಲು ಸಾಧ್ಯ.ಬಿ.ಫಾರ್ಮಸಿ, ಎಮ್.ಫಾರ್ಮಸಿ ಮತ್ತು ಫಾರ್ಮ.ಡಿ ಮಾಡಿದರನ್ನು ಬಿಟ್ಟು ಬಿ.ಎಸ್.ಸಿ.ಪದವೀಧರರನ್ನು ಕೆಲಸಕ್ಕೆ ಇಟ್ಟುಕೊಂಡು ಕಂಪನಿಗಳು ಓಷಧತಯಾರಿಸುತ್ತವೆ.
ಎಲ್ಲಾ ಕಡೆಗಳಲ್ಲಿಯೂ ಫಾರ್ಮಸಿ ಕಾಲೇಜುಗಳು ಪೈಪೋಟಿಯಿಂದ ಆರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ವಿಷಾದ ವ್ಯಕ್ತ ಪಡಿಸಿದರು.ಓಷಧ ತಯಾರಿಸುವ ಫಾರ್ಮಸಿಸ್ಟಗಳಿಗೆ ಸ್ವಂತವಾಗಿ ಓಷಧ ಮಾರಾಟ ಮಾಡುವಅಧಿಕಾರ ಇಲ್ಲ. ಆದರೆ ಫಾರ್ಮಸಿ ಅಭ್ಯಾಸ ಮಾಡದ ಹಾಗೂ ವೈಧ್ಯಕೀಯ ಕಲಿಯದ ವ್ಯಕ್ತಿಗಳುಎಲ್ಲಾ ತರಹದ ಓಷಧಗಳನ್ನು ಯಾವಒಂದೂ ಲೈಸೆನ್ಸ್ ಇಲ್ಲದೆ ಮಾರಾಟ ಮಾಡುತ್ತಾರೆ. ಓಷಧ ನಿಯಂತ್ರಣ ಇಲಾಖೆಯಿಂದ ’ಪರವಾನಿಗೆ ರಹಿತ ಓಷಧ ವ್ಯಾಪಾರಿಗಳನ್ನು ತಡೆಯಲು ಆಗುತ್ತಿಲ್ಲ.’ ತಡೆಯಲು ಹೋದರೆ ಸಾರ್ವಜನಿಕರು ನಕಲಿ ವೈಧ್ಯರ ಪರ ವಹಿಸಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲುಯತ್ನಿಸುತ್ತಾರೆ.
ಲೈಸೆನ್ಸ್ ಇಲ್ಲದೆ ಅಲೋಪತಿ ಓಷಧ ಮಾರಾಟ ಮಾಡುವುದನ್ನು ತಡೆಯುವುದು ಓಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕೆಲಸ.ಆದರೆಅವರಿಗೆ ಪೋಲೀಸ್ ಅಧಿಕಾರಿಗಳು ಸಹಕಾರಕೊಡುತ್ತಿಲ್ಲ.ಜನ ಪ್ರತಿನಿಧಿಗಳು ಸಹ ಅಡ್ಡಿ ಪಡಿಸುತ್ತಿದ್ದಾರೆ.ಬೇರೆ ಬೇರೆ ರಾಜ್ಯಗಳಲ್ಲಿ ಫಾರ್ಮಸಿ ಓದಿದವರು ವೈಧ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ. ಕರ್ನಾಟಕದಲ್ಲಿಯೂ ಅದುಆರಂಭವಾದರೂ ಆಶ್ಚರ್ಯಕರವಿಲ್ಲ ಎಂದು ಹೇರೂರ ಹೇಳಿದರು.ಅಂತಿಮ ವರ್ಷದ ವಿಧ್ಯಾರ್ಥಿಗಳು ಕಾಲೇಜು ಬಿಟ್ಟು ಹೋಗಬೇಕಾದ ದು:ಖದಿಂದ ಭಾಗವಹಿಸಿದ್ದರು. ಮಧ್ಯಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಂಗಾವತಿ ನಗರದ ಸೇಂಟ್ ಫಾಲ್ಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ವಿಧ್ಯಾರ್ಥಿಗಳ ಸ್ವಾಗತ ಮತ್ತು ಬಿಳ್ಕೊಡಿಗೆ ಕಾರ್ಯಕ್ರಮವನ್ನು ರಾಜ್ಯ ಓಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ,ಖಜಾಂಚಿ ಹೃತಿಕ್ ವಸ್ತ್ರದ, ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ, ನ್ಯಾಯವಾದಿ ಸಂಧ್ಯಾ ಪಾರ್ವತಿ ಹಾಜರಿದ್ದರು. ಗಂಗಾವತಿ ನಗರದ ಸೇ0ಟ್ ಫಾಲ್ಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ವಿಧ್ಯಾರ್ಥಿಗಳ ಸ್ವಾಗತ ಮತ್ತು ಬಿಳ್ಕೊಡಿಗೆ ಕಾರ್ಯಕ್ರಮದಲ್ಲಿ ರಾಜ್ಯ ಓಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಮತ್ತು ನ್ಯಾಯವಾದಿ ಸಂಧ್ಯಾ ಪಾರ್ವತಿಯವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ,ಖಜಾಂಚಿ ಹೃತಿಕ್ ವಸ್ತ್ರದ, ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 