ಸೈಬರ್ ಅಪರಾಧ: 11 ರಾಜ್ಯಗಳಲ್ಲಿ ಸಾರ್ವಜನಿಕರನ್ನುವಂಚಿಸಿದ್ದಬಿಹಾರದ ಹರ್ದಿಪ್ ಸಿಂಗ್ ಬಂಧನ
Cybercrime: Bihar's Hardeep Singh arrested for cheating public in 11 states
ಕಾರವಾರ 16: ಮಾದಕ ವಸ್ತು ಪಾರ್ಸಲ್ ಬಂದಿದೆ. ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವ್ಯಾಟ್ಸಪ್ ವಿಡಿಯೋ ಕಾಲ್ ಮಾಡಿ, ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರದ ಹರ್ದಿಪ್ ಸಿಂಗ್ (39) ಎಂಬಾತನನ್ನು ಬಂಧಿಸುವಲ್ಲಿ ಪಿಎಸ್ ಐ ಉದ್ದಪ್ಪ ಧರೆಪ್ಪನವರ್, ಕಾನ್ಸಟೇಬಲ್ ನಾಮದೇವ ನಾಂದ್ರಿ ಯಶಸ್ವಿಯಾಗಿದ್ದಾರೆ.
ಡಿಜಿಟಲ್ ಅರೆಸ್ಟ ಹೆಸರಿನಲ್ಲಿ 11 ರಾಜ್ಯಗಳಲ್ಲಿ ಅಮಾಯಕರನ್ನು ಮತ್ತು ಶ್ರೀಮಂತರನ್ನು ಹರ್ದಿಪ್ ಸಿಂಗ್ ರಾಮ್ ಸಿಂಗ್ ಸುಲಿಗೆ ಮಾಡಿದ್ದ . ಈತನ ವಿಡಿಯೊ ಕಾಲ್ ನಿಂದ ಕಾರವಾರದ ವಿಲ್ಸನ್ ಫನಾಂರ್ಡೀಸ್ ಕಳೆದ ವರ್ಷದ ಅಕ್ಟೋಬರ್ ನಲ್ಲಿ 3.80000.00 ಹಣ ಕಳೆದು ಕೊಂಡಿದ್ದರು. ಈ ಸಂಬಂಧ ವಿಲ್ಸನ್ ಸಹೋದರ ರಾಫೆಲ್ ಸೈಬರ್ ಅಪರಾಧ ಪತ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಜಾಡು ಹಿಡಿದು ಪೊಲೀಸರು ಬಿಹಾರಕ್ಕೆ ಹೋದಾಗ ಪಟ್ನಾ ಜಕನಪುರದಲ್ಲಿದ್ದ ಆರೋಪಿ ಹರ್ದಿಪ್ ಸಿಂಗ್ ಸಿಕ್ಕಿಬಿದ್ದಿದ್ದ.11 ರಾಜ್ಯಗಳಲ್ಲಿ 40. 95 ಕೋಟಿ ರೂಪಾಯಿ ವಂಚಿಸಿದ್ದ. ಆರೋಪಿ ಹರ್ದಿಪ್ ಸಿಂಗ್ ಪೊಲೀಸರ ವಶದಲ್ಲಿದ್ದಾನೆ.
ವಿಲ್ಸನ್ ಫನಾಂರ್ಡಿಸ್‌ಗೆ ಕಳೆದ ವರ್ಷ ಅಕ್ಟೋಬರ್ 23 ರಂದು ಕರೆ ಮಾಡಿದ್ದ ಹರ್ದಿಪ್ ಸಿಂಗ್ , ಡಿಹೆಚ್‌ಎಲ್ ಕೊರಿಯರ್ ಸರ್ವಿಸ್‌ನಿಂದ ಪಾರ್ಸೆಲ್ ಬಂದಿದೆ .ಅದರಲ್ಲಿ ವಿವಿಧ ಹೆಸರಿನ ಕ್ರೆಡಿಟ್ ಕಾರ್ಡ, ವಿವಿಧ ದೇಶಗಳ ಪಾಸ್ ಪೋರ್ಟ, 3 ,ಕೆ.ಜಿ.ಬಟ್ಟೆ ಹಾಗೂ ಮಾದಕವಸ್ತು 'ಎಂಡಿಎಂಎ' ಇದೆ ಎಂದು ಹೇಳಿದ. ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿದ್ದ ವ್ಯಕ್ತಿ ಕಾಲ್ ಡೈವರ್ಟ ಮಾಡಿ, ಬಂಧಿಸುವ ಬೆದರಿಕೆ ಹಾಕಿದ. ಹಣ ಕೊಟ್ಟರೆ, ಅಪಾಯದಿಂದ ಪಾರು ಮಾಡುವುದಾಗಿ ಹೇಳಿದ ಹರ್ದಿಪ್ ಸಿಂಗ್ ,ತನ್ನ ಖಾತೆಗೆ ರೂ. 3.80 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ. ನಂತರ ವಿಲ್ಸನ್ ಸಹೋದರ ರಾಫೆಲ್‌ಈ ಸಂಬಂಧ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಬಿಹಾರಕ್ಕೆ ತೆರಳಿದ್ದ ಜಿಲ್ಲೆಯ ಪೊಲೀಸರುಪಾಟ್ನಾ ನಿವಾಸಿ ಹರ್ದೀಪ್ ಸಿಂಗ್ (39) ಎಂಬಾತನನ್ನು ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ.
ಬಂಧಿತ ಆರೋಪಿ ಹರ್ದೀಪ್ ಸಿಂಗ್ ಮೇಲೆ ದೇಶದ ಹನ್ನೊಂದು ರಾಜ್ಯಗಳಲ್ಲಿ 29ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡುನಲ್ಲಿ 9.9 ಕೋಟಿ, ಆಂಧ್ರ್ರದೇಶ 2.47 ಕೋಟಿ, ಬೆಂಗಳೂರನ ಮಾರತನಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ 80 ಲಕ್ಷ , ಪುಲಕೇಶಿ ನಗರದ ವ್ಯಕ್ತಿಗೆ ಲ್ಲಿ 74 .60 ಲಕ್ಷ ರೂ. ಸೇರಿ ಹಲವು ಕಡೆ 40,95, 71,710.00 ರೂ. ವಂಚಿಸಿರುವುದು ದೃಢಪಟ್ಟಿದೆ. ಆರೋಪಿಯು ವಿವಿಧ ಬ್ಯಾಂಕುಗಳಲ್ಲಿ 8 ಉಳಿತಾಯ ಖಾತೆ ಮತ್ತು 2 ಚಾಲ್ತಿ ಖಾತೆಗಳನ್ನು ಹೊಂದಿದ್ದ ಎಂದು ತನಿಖೆವೇಳೆ ಬಯಲಾಗಿದೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿ.ಇ.ಎನ್ ಅಪರಾದ ಠಾಣೆಯ ಡಿವೈಎಸ್ಪಿ ಬಿ.ಅಶ್ವಿನಿ ತಿಳಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 