ನಾಲ್ಕು ದಿನಗಳಲ್ಲಿ ರೈತರ ಖಾತೆಗೆ ಬೆಳೆ ಹಾನಿ ಜಮಾ ಆಗಲಿದೆ: ಸಚಿವ ಶಿವಾನಂದ್ ಪಾಟೀಲ

ನಾಲ್ಕು ದಿನಗಳಲ್ಲಿ ರೈತರ ಖಾತೆಗೆ ಬೆಳೆ ಹಾನಿ ಜಮಾ ಆಗಲಿದೆ: ಸಚಿವ ಶಿವಾನಂದ್ ಪಾಟೀಲ Crop damage will be credited to farmers' accounts within four days: Minister Shivanand Patil

ಬ್ಯಾಡಗಿ 05 :  ಹಾವೇರಿ ಜಿಲ್ಲೆಯಲ್ಲಿ ಹಸಿ ಬರಗಾಲದಿಂದ ರೈತರು ತಮ್ಮ ಬೆಳೆ ಆನೆಯಾಗಿದ್ದು ಸುಮಾರು 6534 ಹೆಕ್ಟರ್ ಪ್ರದೇಶ ಈಗಾಗಲೇ ಸಮೀಕ್ಷೆಯ ಮೂಲಕ ಹಾನಿಯ ಪ್ರದೇಶವಾಗಿದ್ದು ರೈತರಿಗೆ ಇನ್ನೂ ಕೇವಲ ನಾಲ್ಕು ದಿನಗಳಲ್ಲಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಜವಳಿ ಮತ್ತು ಕಬ್ಬು ಸಕ್ಕರೆ ಅಭಿವೃದ್ಧಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಹೇಳಿದರು. 

ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗಿ ಬಂದಿದ್ದು ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಡ್ಯಾಮ್ ಗಳು ತುಂಬಿದ ವರ್ಷ ಈ ವರ್ಷವಾಗಿದ್ದು ಇದೊಂದು ರೈತರಿಗೆ ಸಂತಸದ ಸುದ್ದಿ ಸಿದ್ದರಾಮೇಶ್ವರರು 12ನೇ ಶತಮಾನದ ಶರಣರು ದಾರ್ಶನಿಕರು ಬಸವಾಧೀಶ ಶರಣರಲ್ಲಿ ಅವರು ಒಬ್ಬರು ಗುರುಬಸವಣ್ಣನವರು ಕಂಡ ಆದರ್ಶ ಕಲ್ಯಾಣ ಸಮಾಜದ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಸಾಗಿದ ಶ್ರೆ?ಷ್ಠ ಸಮಾಜ ಸುಧಾರಕ.ಕಲ್ಯಾಣ ಕ್ರಾಂತಿಯ ನಂತರ ಶೂನ್ಯ ಪೀಠದ ಅಧ್ಯಕ್ಷ ರಾಗಿ ಶರಣ ಸಮುದಾಯಕ್ಕೆ ಅವರು ನೀಡಿದ ಮಾರ್ಗದರ್ಶನ ಮತ್ತು ಬಸವತತ್ವ ಪ್ರಸಾರ ಕಾರ್ಯದಲ್ಲಿ ಸಮರ​‍್ಿಸಿಕೊಂಡ ತನ್ಮಯತೆಯ ನಿಲುವು ಅವರನ್ನು ಒಬ್ಬ ಆದರ್ಶ ಜಂಗಮಯೋಗಿ ಎನಿಸಿದವರು ಎಂದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಅದ್ದೂರಿಯಾಗಿ ಸಿದ್ದರಾಮೇಶ್ವರ ದೇವಸ್ಥಾನ ನಿರ್ಮಾಣ ಆಗಲಿದೆ.ದೇವಸ್ಥಾನ ನಿರ್ಮಾಣ ಆಗಲಿಕ್ಕೆ ಗ್ರಾಮದವರ  ಶ್ರಮ ಬಹಳಿಷ್ಟಿದೆ. ಸರ್ಕಾರದಿಂದ ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದರು ಮತ್ತು ತಮ್ಮ  ಅವಧಿಯಲ್ಲಿ ದೇವಸ್ಥಾನದ ಉದ್ಘಾಟನೆ ಆಗುವ ಕೆಲಸ ಮಾಡಲು ಸೂಚಿಸಿದರು.ರೈತರ  ಈಗಾಗಲೇ ಹಸಿಬರ್ಗಾಲದಿಂದ ಕಂಗೆಟ್ಟಿದ್ದು ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಆದಷ್ಟು ಬೇಗನೆ ನೀಡಲು ಸೂಚಿಸಿದರು .ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ರಾಜ್ಯದಲ್ಲಿ ಹೆಸರು ಆಗುವ ರೀತಿಯಲ್ಲಿ ಜಾತ್ರೆ ಮಾಡಿದ್ದೇವೆ ನಮ್ಮ ಸರ್ಕಾರದಿಂದ.50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು ದೇವಸ್ಥಾನದ ಸಮಿತಿಯವರ ಬೇಡಿಕೆ ಎರಡು ಕೋಟಿ ಕೇಳಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹಣ ಕೊಡಿಸುವ ಕೆಲಸ ಮಾಡಲಾಗುತ್ತದೆ ಮತ್ತು.ಗ್ರಾಮದ ಜನರು ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಕಟ್ಟಲು ಒಗ್ಗಟ್ಟಿನಿಂದ ಶ್ರಮಿಸಬೇಕು ಪ್ರತಿಯೊಬ್ಬರೂ ಪಕ್ಷಾತೀತವಾಗಿ ದೇವಸ್ಥಾನವನ್ನು ಕಟ್ಟಲು ಸಹಕರಿಸಿ ಈಗಾಗಲೇ ಸಮಾಜದಿಂದ ಎರಡು ಕೋಟಿ ಎಷ್ಟು ಹಣ ಸಂಗ್ರಹವಾಗಿದೆ ಮತ್ತು ತಮ್ಮ ತನು ಮನ ಧನದಿಂದ ದೇವರಿಗೆ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಪ್ಪನವರ, ಎ ಸಿ ಕಾಂಬಳೆ.ಎಸ್ ಆರ್ ಪಾಟೀಲ, ಜಗದೀಶಯ್ಯಾ ಮಠದ, ಸಂಜೀವ ನೀರಲಗಿ, ಎಡಿಶನಲ್ ಎಸ್ ಪಿ ಲಕ್ಷಣ ಶಿರೋಳಕರ, ವೀರಭದ್ರ​‍್ಪ ಗೊಡಚಿ.ಎನ್ ಕೆ ಸೋಮಶೇಖರ​‍್ಪ.ಸುರೇಶಗೌಡ ಪಾಟೀಲ, ಶಿವನಗೌಡ ಪಾಟೀಲ, ರಮೇಶ ಸುತ್ತ ಕೋಟೆ, ದಾನಪ್ಪ ಚೂರಿ, ಲಲಿತಮ್ಮಾ ವಾಲ್ಮೀಕಿ, ಜಯಣ್ಣ ಮಲ್ಲಿಗಾರ, ಎಮ್ ಎಸ್ ಪಾಟೀಲ, ರುದ್ರಣ್ಣ ಹೊಂಕಣದ, ಹಾಕು ಸಮಾಜದ ಅನೇಕ ಮುಖಂಡರುಗಳು, ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.