ವೇಷಭೂಷಣ ಪ್ರೊಮೊ ರನ್‌: ಮಹಿಳೆಯರಿಗೆ ಅಭಿನಂದನೆ

ವೇಷಭೂಷಣ ಪ್ರೊಮೊ ರನ್‌: ಮಹಿಳೆಯರಿಗೆ ಅಭಿನಂದನೆ  Costume Promo Run: Appreciation for Women

ವಿಜಯಪುರ 06: ಡಿಸೆಂಬರ್ 13ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌-2026 ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಪ್ರೊಮೊ ರನ್ನಲ್ಲಿ ವಿವಿಧ ವೇಷಭೂಷಣಗಳಲ್ಲಿ ಓಟ ಪೂರ್ಣಗೊಳಿಸಿದ ಮಹಿಳೆಯರನ್ನು ಗುರುತಿಸಿ ಅಭಿನಂದಿಸಲು ಆಯ್ಕೆ ಮಾಡಲಾಗಿದೆ.  ರವಿವಾರ ನಡೆದ ಪ್ರೊಮೊ ರನ್ನಲ್ಲಿ ಬಾಲಕಿಯರು, ಯುವತಿಯರು ಹಾಗೂ ವಿವಿಧ ವಯೋಮಾನದ ಮಹಿಳೆಯರು ಮರಾಠಿ ಸಾಂಪ್ರದಾಯಿಕ ಸೀರೆ, ನಾಗಾಲ್ಯಾಂಡ್ ದಿರಿಸು, ಆದಿವಾಸಿ ಉಡುಪು ಸೇರಿದಂತೆ ವಿವಿಧ ವೇಷಭೂಷಣಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪ್ರೊಮೊ ರನ್ನಲ್ಲಿ ಅತ್ಯುತ್ತಮ ವೇಷಭೂಷಣಕ್ಕಾಗಿ ಬಶೀರಾ ದೇಸಾಯಿ, ಐಶ್ವರ್ಯಾರಾಣಿ ತಾಳಿಕೋಟಿ, ಅಶ್ವಿನಿ ಜೇವೂರ, ಭೀಮಾ ಬಸನಾಳ, ಪ್ರಿಯಾ ಭೀಮಸನೂರ, ಗೀತಾ ಪಡಿಕರ ಹಾಗೂ ಫ್ಯಾನ್ಸಿ ಡ್ರೆಸ್ನಲ್ಲಿ ಸ್ಮಿತಾ ಪಾಟೀಲ ಮತ್ತು ಸ್ನೇಹಾ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುವುದು. ಅದೇ ರೀತಿ, ಸುಕುನ ಮಹಿಳಾ ಗುಂಪಿನ ವಿದ್ಯಾ, ಸುಚಿತಾ ಶೆಟ್ಟಿ, ಧನುಶ್ರೀ, ಭಾಗ್ಯಶ್ರೀ ಪಾಟೀಲ ಹಾಗೂ ರೂಪಾ ಸಿಂದಗಿಕರ ಅವರನ್ನೊಳಗೊಂಡ ತಂಡವನ್ನು ವಿಶೇಷ ಮಹಿಳಾ ಗುಂಪು ಎಂದು ಗುರುತಿಸಿ ಅಭಿನಂದನಾ ಪತ್ರ ನೀಡಲಾಗುವುದು. ಈ ಪ್ರೊಮೊ ರನ್ ಮೂಲಕ ವೃಕ್ಷಥಾನ್ ಹೆರಿಟೇಜ್ ರನ್ ಕುರಿತು ನಗರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹ ದೊರೆತಿದೆ ಎಂದು ಸಂಘಟಕರು ತಿಳಿಸಿದ್ದಾರೆ.