ಕಾಂಗ್ರೆಸ್ ಶಾಸಕನಿಗೆ ಕೊರೊನಾ ಪಾಸಿಟಿವ್... ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕ್ವಾರೆಂಟೈನ್‌ಗೆ...!

ಅಹಮದಾಬಾದ್ ಏ ೧೬,ಅವರು ರಾಜ್ಯವೊಂದರ   ಮುಖ್ಯಮಂತ್ರಿ.. ಕೊರೊನಾ ವೈರಸ್  ಹಬ್ಬುವುದನ್ನು   ತಡೆಗಟ್ಟಲು ಕಳೆದ ಒಂದು ತಿಂಗಳಿನಿಂದ  ಹಗಲು ರಾತ್ರಿ ಎನ್ನದೇ   ನಿರಂತರ ಪ್ರಯತ್ನ ನಡೆಸುತ್ತಿದ್ದರು.  ಆದರೆ,   ದುರದುಷ್ಟವಷಾತ್   ಈಗ ಅವರು ಕ್ವಾರಂಟೈನ್ ತೆರಳುವ  ಪರಿಸ್ಥಿತಿ ಬಂದಿದೆ...!   ಕಾರಣ  ಕೊರೊನಾ ಪಾಸಿಟಿವ್  ಶಾಸಕರೊಬ್ಬರು,   ಅವರನ್ನು  ಎರಡು ಬಾರಿ ಭೇಟಿ ಮಾಡಿರುವುದು. ಇಷ್ಟಕ್ಕೂ..  ಅವರು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ. ಗುಜರಾತ್  ಕಾಂಗ್ರೆಸ್  ಎಂಎಲ್ ಎ ಇಮ್ರಾನ್ ಖೇಡವಾಲ  ಅವರಿಗೆ  ಕೊರೊನಾ   ವೈರಾಣು ಪರಿಕ್ಷೇಯಲ್ಲಿ  ಸೋಂಕು  ತಗುಲಿರುವುದು   ದೃಢಪಟ್ಟಿರುವುದರಿಂದ     ಮುಖ್ಯಮಂತ್ರಿ   ವಿಜಯ್ ರೂಪಾನಿ  ಅಘಾತಕ್ಕೀಡಾಗಿದ್ದಾರೆ.
ಕಾರಣ,  ಸದರಿ  ಕಾಂಗ್ರೆಸ್  ಎಂಎಲ್ ಎ,  ಕಳೆದ ವಾರ, ೧೦ ದಿನಗಳಲ್ಲಿ   ಒಂದಲ್ಲ, ಎರಡು ಸಾರಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಖುದ್ದು ಭೇಟಿಮಾಡಿ  ಮಾತುಕತೆ ನಡೆಸಿದ್ದರು.   ಕೊರೊನಾ ಪಾಸಿಟಿವ್ ಬಂದಿರುವ  ಶಾಸಕ  ತಮ್ಮನ್ನು ಭೇಟಿಯಾದ ನಂತರ  ಈಗ ಮುಖ್ಯಮಂತ್ರಿ  ಸ್ವಯಂ  ಕ್ವಾರೆಂಟೈನ್  ಹೋಗಬೇಕಾಗಿ ಬಂದಿದೆ.   ಒಂದು ವಾರ ಕಾಲ   ಮನೆಯಿಂದ  ಕಾರ್ಯನಿರ್ವಹಿಸಲು ವಿಜಯ್ ರೂಪಾನಿ ನಿರ್ಧರಿಸಿದ್ದಾರೆ.  ಅದಕ್ಕೂ ಮುನ್ನ  ಅವರು  ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದು,  ಈ ಪರೀಕ್ಷೆಗಳಲ್ಲಿ   ಆರೋಗ್ಯ ಸ್ಥಿತಿ ಸಾಮಾನ್ಯ  ಎಂದು ವರದಿ ಬಂದ ಹಿನ್ನಲೆಯಲ್ಲಿ   ಮುಖ್ಯಮಂತ್ರಿ  ಹೋಮ್ ಕ್ಯಾರೆಂಟೈನ್ ಗೆ ಒಳಗಾದರೆ  ಸಾಕು ಎನ್ನಲಾಗಿದೆ.
ಒಂದು ವಾರ  ಮನೆಯಿಂದ  ಕಾರ್ಯನಿರ್ವಹಿಸಬೇಕು,  ಸಭೆಗಳನ್ನು   ವಿಡಿಯೋ  ಕಾನ್ಫರೆನ್ಸ್ ಮೂಲಕ  ನಿರ್ವಹಿಸಲು ವಿಜಯ್ ರೂಪಾನಿ  ನಿರ್ಣಯಿಸಿಕೊಂಡಿದ್ದಾರೆ. ಮುಖ್ಯಮಂತ್ರಿ  ನಿವಾಸಕ್ಕೆ   ಇತರರಿಗೆ  ಪ್ರವೇಶವಿಲ್ಲ ಎಂದು ಘೋಷಿಸಲಾಗಿದೆ.  ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಡಿಜಿಟಲ್  ವೇದಿಕೆಯ ಮೂಲಕ  ಅಧಿಕೃತ  ಕಾರ್ಯಕ್ರಮಗಳಲ್ಲಿ  ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ  ಮೂಲಗಳು ತಿಳಿಸಿವೆ.   ಕಾಂಗ್ರೆಸ್ ಶಾಸಕರೊಬ್ಬರಿಗೆ    ಕೋವಿಡ್ -೧೯ ಪಾಸಿಟಿವ್  ಬಂದ ಹಿನ್ನಲೆಯಲ್ಲಿ   ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ.