ಬೀಜಿಂಗ್, ಜ 30 ಚೀನಾದಲ್ಲಿ ಕೊರೋನಾ ವೈರಾಣು ಸೋಂಕಿತರ ಸಂಖ್ಯೆ 7711ಕ್ಕೇರಿದೆ. ಈ ಸೋಂಕಿನಲ್ಲಿ ಇಲ್ಲಿಯವರೆಗೆ 170 ಜನರು ಮೃತಪಟ್ಟಿದ್ದಾರೆ. ಚೀನಾದ 31 ಪ್ರಾಂತೀಯ ವಲಯಗಳಲ್ಲಿ ಸೋಂಕುಗಳು ಪತ್ತೆಯಾಗಿದ್ದು, ವ್ಯಾಪಕವಾಗಿ ಇತರ ಪ್ರದೇಶಗಳಿಗೂ ಹರಡುತ್ತಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಸರ್ಕಾರ ನಿರಂತರವಾಗಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು ಕ್ರಮಗಳನ್ನು ಜರುಗಿಸುತ್ತಿದೆ.