ಬೀಜಿಂಗ್, ಜನವರಿ 29, ಕರೋನವೈರಸ್ ಹಿನ್ನಲೆಯಲ್ಲಿ ಎಲ್ಲಾ ವಿದೇಶಿಯರ ಆರೋಗ್ಯ, ಸುರಕ್ಷತೆಗೆ ಚೀನಾ ವಿಶೇಷ ಗಮನ, ನಿಗಾವಹಿಸಲಿದೆ ಎಂದು ವಿದೇಶಾಂಗ ಸಚಿವ ವಾಂಗ್ ಯಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕೊರಿಯಾದ ಸಹವರ್ತಿ ಕಾಂಗ್ ಕ್ಯುಂಗ್-ವಾ ಅವರು ನೀಡಿದ, ಬೆಂಬಲ , ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ವಿಷಮ ಸನ್ನಿವೇಶದಲ್ಲಿ ಚೀನಾ ದೇಶದ ಎಲ್ಲಾ ವಿದೇಶಿ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರೆಸಲಿದೆ ಎಂದು ಹೇಳಿದರು.
ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಹಕಾರ ಬಲಪಡಿಸುವುದನ್ನು ಮುಂದುವರೆಸುತ್ತದೆ ಮತ್ತು ಮುಕ್ತತೆಯ ತತ್ವಗಳಿಗೂ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ದಕ್ಷಿಣ ಕೊರಿಯಾದವರು ಸೇರಿದಂತೆ ದೇಶದ ಎಲ್ಲಾ ವಿದೇಶಿಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲಿದೆ ಎಂದೂ ಸಚಿವ ವಾಂಗ್ ಹೇಳಿದರು.
ಚೀನಾದ ನಗರವಾದ ವುಹಾನ್‌ನಲ್ಲಿ ಡಿಸೆಂಬರ್ ಅಂತ್ಯದಲ್ಲಿ ಅಪರಿಚಿತ ರೀತಿಯ ವೈರಲ್ ನ್ಯುಮೋನಿಯಾ ಪತ್ತೆಯಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದಲ್ಲಿ ಮಾರಕ ಸೋಂಕಿಗೆ 132 ಜನರು ಸಾವನ್ನಪ್ಪಿದ್ದು, 5,900 ಕ್ಕೂ ಹೆಚ್ಚು ಪ್ರಕರಣಗಳು ದೃಡಪಟ್ಟಿವೆ.