ಸಮಾಜ ಅಭಿವೃದ್ದಿಗೆ ತಾಲೂಕಿನ ಎಲ್ಲ ಸಮಾಜ ಭಾಂದವರ ಸಹಕಾರ ಮುಖ್ಯ : ಮಂಜುನಾಥ ಕ್ಷೌರದ

ಸಮಾಜ ಅಭಿವೃದ್ದಿಗೆ ತಾಲೂಕಿನ ಎಲ್ಲ ಸಮಾಜ ಭಾಂದವರ  ಸಹಕಾರ ಮುಖ್ಯ :  ಮಂಜುನಾಥ  ಕ್ಷೌರದ Cooperation from all community members in the taluk is crucial for the community's development: Manj


  ಶಿಗ್ಗಾವಿ  16 : ಸಮಾಜ ಅಭಿವೃದ್ದಿ ಹೊಂದಲು ತಾಲೂಕಿನ ಎಲ್ಲ ಸಮಾಜ ಭಾಂದವರು ಹಾಗೂ ಇತರೆ ಸಮಾಜದವರ ಸಹಕಾರ ಮುಖ್ಯ ಎಂದು  ತಾಲೂಕ ಅಧ್ಯಕ್ಷ ಮಂಜುನಾಥ  ಕ್ಷೌರದ ( ಕಾಮಧೇನು ಬೇಕರಿ ಮಾಲಕರು) ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಶ್ರೀ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ  ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ  ತಾಲೂಕಿನ ಎಲ್ಲ ವೃತ್ತಿ ಬಾಂಧವರಿಗೆ ಉಚಿತವಾಗಿ ಗಡಿಯಾರ ವಿತರಿಸುವ ಮುಖಾಂತರ ಕಾಯಕ ಯೋಗಿಗಳಿಗೆ ಸಂಘಟನಾತ್ಮಕ ಶಕ್ತಿ ತುಂಬಿದರು. ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ರಾಜ್ಯ ಮಾಧ್ಯಮ ಪ್ರತಿನಿಧಿ ಮಲ್ಲಿಕಾರ್ಜುನ ಹಡಪದ ಮಾತನಾಡಿ ಸಮಾಜ ಬಾಂಧವರು ಮುಖ್ಯ ವಾಹಿನಿಗೆ ಬರಬೇಕು.

ಇದು ನಮ್ಮ ಸಂಕಲ್ಪ ಅಲ್ಲದೇ ರಾಜ್ಯದಲ್ಲಿ ಸದಸ್ಯತ್ವ ಹಾಗೂ ಜನಗಣತಿ ಈಗಾಗಲೇ ಚಾಲ್ತಿಯಲ್ಲಿದ್ದು ಸಮಾಜ ಬಾಂದವರು ಸದಸ್ಯರಾಗ ಬೇಕೆಂದು ಕರೆ ನೀಡಿದರು.  ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರ​‍್ಪ ಕ್ಷೌರದ, ತಾಲೂಕ ನಿರ್ದೇಶಕರಾದ ಮಾಹಾಂತೇಶ್ ಹಡಪದ, ರುದ್ರ​‍್ಪ ಹಡಪದ ಮಾತನಾಡಿದರು. ಖಜಾಂಚಿ ಅಶೋಕ್ ಹಂಪಣ್ಣ  ಮಾತನಾಡಿ ಜಯಂತಿಯಲ್ಲಿ ಆದ ಖರ್ಚು ವೆಚ್ಚಗಳ ಮಾಹಿತಿಯನ್ನು ವಿವರಿಸಿ ಹೇಳಿದರು.    ಈ ಸಂದರ್ಭದಲ್ಲಿ ತಾಲೂಕ ಗೌರವಾಧ್ಯಕ್ಷ ಗುರುಬಸಪ್ಪ ಹಡಪದ, ಮಾರುತಿ ಹಡಪದ. ದೇವಪ್ಪ ಮಡ್ಲಿಕರ, ನಾಗರಾಜ್ ಕ್ಷೌರದ, ಬಸವರಾಜ ಕ್ಷೌರದ.  ಪರಮೇಶ ಹಡಪದ, ನಿಂಗಪ್ಪ ಹಡಪದ, ಪುಟ್ಟಪ್ಪ ಗುಡಗೇರಿ,  ವಿವಿಧ ಗ್ರಾಮಗಳ  ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.