ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಪಾಟೀಲ

ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಪಾಟೀಲ  Contribution of co-operative sector to country's economy is immense: Patil

ತಾಳಿಕೋಟಿ 05 :  ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ 05 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯ ವಾಕ್ಯದೊಂದಿಗೆ, ದಿನಾಂಕ 03.07.2026ರಂದು ’ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ವಿಜಯಪುರ ಹಾಗೂ ತಾಳಿಕೋಟಿ ತಾಲ್ಲೂಕ ಸಹಕಾರಿಗಳು ಸಹಯೋಗದೊಂದಿಗೆ “ಸಹಕಾರ ಜಾಗೃತಿ ಸಭೆ” ಕಾರ್ಯಕ್ರಮವನ್ನು ವೀರಶೈವ ವಿದ್ಯಾವರ್ಧಕ ಸಂಘ ಎಸ್‌.ಕೆ. ಬಿಎಡ್‌.ಕಾಲೇಜ್ ತಾಳಿಕೋಟಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯ ನುಡಿಗಳನ್ನು ವಿ. ಸಿ ಹಿರೇಮಠ, ಅಧ್ಯಕ್ಷರು ವೀರಶೈವ ವಿದ್ಯಾವರ್ಧಕ ಸಂಘ ತಾಳಿಕೋಟಿ ಇವರು ನೀಡಿದರು.

ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಮಾನ್ಯ ನಿರ್ದೇಶಕರಾದ ಸಂಜಯ ಪಾಟೀಲ (ಕನಮಡಿ) ಇವರು ವಹಿಸಿ ಸಹಕಾರ ಕ್ಷೇತ್ರ ನಡೆದು ಬಂದ ದಾರಿ ಸಹಕಾರ ಸಚಿವಾಲಯ ಸ್ಥಾಪನೆ ನಂತರ ದೇಶದಲ್ಲಿ ಆದ ಪ್ರಗತಿ ಕುರಿತು ತಿಳಿಸಿದರು. ಮುಖ್ಯ ಅತಿಥಿಗಳಾಗಿ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ವಿಜಯಪುರ, ಇದರ ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ ಇವರು ಪ್ರಸ್ತಾವಿಕವಾಗಿ ಮಾತನಾಡಿದರು, ಹಾಗೂ ಒಕ್ಕೂಟದ ನಿರ್ದೇಶಕರುಗಳಾದ ಸಿದ್ಧು ಮಲ್ಲಿಕಾರ್ಜುನ ಮಠ, ಯಮನಪ್ಪ ಸಾತಿಹಾಳ, ಅರುಣ ಆರ್‌. ವಾರದ, ವಿವೇಕಾನಂದ ಶಿರೋಳಕರ, ಮುಖ್ಯ ಕಾರ್ಯನಿರ್ವಾಹಕರಾದ ಪಂಪನಗೌಡ ಪಾಟೀಲ ಉಪಸ್ಥಿತರಿದ್ದರು.

ಸಹಕಾರಿ ಜಾಗೃತ ಸಭೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಬಿಎಡ್ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿತ್ತು, ಸಭೆಯಲ್ಲಿ ಸಹಕಾರಿಗಳಾದ ಕಾಶಿನಾಥ ಮುರಾಳ, ಕಿಶನ್ ಲೋಖರೆ, ವಾಸುದೇವ ಹೆಬಸೂರ, ಸಂಜು ಹಂಚಾಟೆ, ಶಂಕರಗೌಡ ಪಾಟೀಲ, ದ್ಯಾಮನಗೌಡ ಪಾಟೀಲ ಮಿಣಜಗಿ , ಬಾಬುಸಿಂಗ್ ಹಜೇರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹಟ್ಟಿ, ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರು, ತಾಲ್ಲೂಕಿನ ಸ್ಥಳೀಯ ಸಹಕಾರಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿವಾಹಕರು ಉಪಸ್ಥಿತರಿದ್ದರು.