ಕಟ್ಟಡ ಕಾರ್ಮಿಕರ ಕಾರ್ಯಾಲಯ ಬಂದ: ಮರಿಚಿಕೆಯಾಗುತ್ತಿರುವ ಸರ್ಕಾರದ ಸೌಲಭ್ಯಗಳು

ಕಟ್ಟಡ ಕಾರ್ಮಿಕರ ಕಾರ್ಯಾಲಯ ಬಂದ: ಮರಿಚಿಕೆಯಾಗುತ್ತಿರುವ ಸರ್ಕಾರದ ಸೌಲಭ್ಯಗಳು Construction workers' office Bandh: Government facilities are fading

ಶಿಗ್ಗಾವಿ 22: ಕಟ್ಟಡ ಕಾರ್ಮಿಕರ ಹಿತಾಸಕ್ತಿಗಾಗಿ ಸರ್ಕಾರದ ಸೌಲಭ್ಯ ಕಲ್ಪಿಸಲು ತೆರೆಯಲಾಗಿದ್ದ ಪಟ್ಟಣದ ಕಾರ್ಯಾಲಯ ಹಲವಾರು ದಿನಗಳಿಂದ ಸ್ಥಗಿತವಾಗಿ  ತಾಲೂಕಿನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಮರಿಚಿಕೆಯಾಗಿದೆ. ಎಂದು ಕರುನಾಡು ಕಟ್ಟಡ ನಿರ್ಮಾಣ ಕಾರ್ಮಿಕರ ಜಾಗೃತಿ ಹಾಗೂ ಅಭಿವೃದ್ಧಿ ವೇದಿಕೆ ರಾಜ್ಯಾದ್ಯಕ್ಷ ಹನಮಂತಪ್ಪ ಬಾರಂಗಿ ಹೇಳಿದರು. 

ಪಟ್ಟಣದ ಕಾರ್ಮಿಕ ಇಲಾಖೆಯ ನೀರೀಕ್ಷಕರ ಕಛೇರಿಗೆ ಬಂದು ಇಲಾಖೆ ಕಟ್ಟಡ  ಚಟುವಟಿಕೆ ಸ್ಥಗಿತಗೊಂಡಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಮಾಧ್ಯಮ ಹೇಳಿಕೆ ನೀಡಿದ ಅವರು ಕಳೆದ ಒಂದು ವಾರದಿಂದಲೇ ಕಾರ್ಯಾಲಯ ತೆರೆದಿಲ್ಲ. ಇಲ್ಲಿ ನೀರೀಕ್ಷಕ ಕಿರಣಕುಮಾರ ಇಂಗಳೆಯವರಾಗಲಿ, ಡಾಟಾ ಪರೀಶೀಲನೆ ಮಾಡುವ ಶಿಬ್ಬಂದಿ ರಂಗಪ್ಪ ಆಗಲಿ ಕಾರ್ಯಾಲಯ ತರೆದು ಕೆಲಸಕ್ಕೆ ಹಾಜರಾಗಿಲ್ಲಾ. ಕಟ್ಟಡ ಕಾರ್ಮಿಕರು ಸ್ಥಳಿವಾಗಿ ಕಾರ್ಮಿಕರು ತಮ್ಮ ಮಕ್ಕಳ ಸ್ಕಾಲರ್ ಶಿಫ್‌. ಮದುವೆ ಸಹಾಯಧನ. ಅರ್ಜಿ ಪರೀಶೀಲನೆ.ಕಾರ್ಮಿಕರ ಕೆಲಸದ ಕಿಟ್ ಲ್ಯಾಫ್ ಟಾಫ್‌ಗೆ ಅರ್ಜಿ, ಕಾರ್ಮಿಕರ ಕುಟುಂಭದ ಮಹಿಳೆಯರ ಹೆರಿಗೆ ಭತ್ಯೆ. ಕಾರ್ಮಿಕರ ಕುಟುಂಭ ಸದಸ್ಯರ ಡೆತ್ತ ಕ್ಲೈಮುಗಳು, ಹಿರಿಯ ಕಾರ್ಮಿಕರ ಅರ್ಜಿಗೆ ಆನ್‌ಲೈನ್ ಅರ್ಜಿ ಹಾಕಿ ಪರೀಶೀಲನೆಗೆ ಕೆಲಸ ಬಿಟ್ಟು ದಿನವಿಡಿ ಅಲೆದಾಡುವಂತಾಗಿದೆ. ಸೌಲಭ್ಯತೆಗೆ ಸಕಾಲದಲ್ಲಿ ನೀಡಿದ ಅರ್ಜಿಯನ್ನು ಪರೀಶೀಲನೆ ಕಾರ್ಯ ನೆನಗುದಿಗೆ ಬಿದ್ದಿದೆ. 

ಈಗಾಗಲೇ ಹಲವಾರು ಸೌಲಭ್ಯತೆಗೆ ಕಾರ್ಮಿಕರು ನೀಡಿದ ಅರ್ಜಿಯನ್ನು ಪರೀಶೀಲಿಸಲು ಸಮಯಾವಕಾಶ ವಿಳಂಬವಾಗಿ ಅವಧಿ ಮೀರಿ ಅರ್ಜಿಗಳು ವಿಲೆಗೆ ಸಂಬವನೀಯತೆಯೂ ಇದೆ. ಇದರಿಂದ ಕಾರ್ಮಿಕರ ಸಮಯ, ಹಣ ಕೆಲಸದ ಅವಧಿ ನಷ್ಟ ಅನುಭವಿಸುವಂತಾಗಿ ಸೌಲಭ್ಯತೆಯಿಂದ ವಂಚಿತರಾಗುತ್ತಿದ್ದಾರೆ ಇದರಿಂದಾಗಿ ಮತ್ತೊಮ್ಮೆ ಅರ್ಜಿದಾರರು ಅರ್ಜಿ ಹಾಕಿ ಅಲೆದಾಡಬೇಕಾದ ಸನ್ನಿವೇಶ ಎದುರಾಗುತ್ತದೆ. ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ವಿಕಾಸ ವೇಧಿಕೆ ಅಧ್ಯಕ್ಷ ಜಿಲಾನಿ ಜಂಗಳಿ. ಗೋವಿಂದ ಗಣಪ್ಪನವರ,ಬಸವರಾಜ ಬಡಿಗೇರ,ಮುನಾಫ ಬನ್ನೂರು ಇದ್ದರು.