ತಳಕಲ್ನಲ್ಲಿ ಅನ್ನದಾನೀಶ್ವರ ಮಠದ ಗೋಪುರ ನಿರ್ಮಾಣಕ್ಕೆ ಚಾಲನೆ
Construction of the Annadanishwara Matha's gopura launched at Talakal
ಕುಕನೂರು, ಜು.28: ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾ ಮಠದಲ್ಲಿ ಗೋಪುರ ನಿರ್ಮಾಣ ಕಾಮಗಾರಿಗೆ ಭಕ್ತಿಭಾವದಿಂದ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರೇಶ್ ಬಿಸನಳ್ಳಿ, ಅನ್ನದಾನೀಶ್ವರ ಶಾಖಾ ಮಠವು ಗ್ರಾಮಕ್ಕೆ ಶಕ್ತಿಕೇಂದ್ರವಾಗಿದ್ದು, ಗೋಪುರ ನಿರ್ಮಾಣದಿಂದ ಮಠದ ಗೌರವ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು. ಈ ಪುಣ್ಯ ಕಾರ್ಯಕ್ಕೆ ಗ್ರಾಮಸ್ಥರು ತಮ್ಮ ತನು-ಮನ-ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನೀಲನಗೌಡ ಮಾಲೀಪಾಟೀಲ ಮಾತನಾಡಿ, ಅನ್ನದಾನೀಶ್ವರರು ಅನ್ನದಾನದ ಜೊತೆಗೆ ಜ್ಞಾನವನ್ನೂ ನೀಡಿದ ಸಂತರು. ಶಾಖಾ ಮಠದ ಗೋಪುರ ನಿರ್ಮಾಣವು ಇಡೀ ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದ್ದು, ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು. ಪೂಜ್ಯ ಮಹಾದೇವ ಸ್ವಾಮೀಜಿಯವರ ಕಾರ್ಯಶೀಲತೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಕುಕನೂರು ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ ಮಾತನಾಡಿ, ಶ್ರೀಮಠವು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ತಳಕಲ್ ಶಾಖಾ ಮಠದ ಅಭಿವೃದ್ಧಿಗೆ ಭಕ್ತರ ಸಹಕಾರವೇ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪಕ್ಕಪ್ಪ ಮುರಿಗಿ, ನಿಂಗಪ್ಪ ನಿಟ್ಟಲಿ, ಮಲ್ಲಯ್ಯ ಕಣವಿ, ಆನಂದ ಚಿಲವಾಡಗಿ, ಅಬ್ಬಾಸಾಲಿ ಮುಂಡರಗಿ, ಪಕ್ಕಪ್ಪ ಅಳವಂಡಿ, ರಾಮಣ್ಣ, ಬಸವರಾಜ ಬ್ಯಾಳಿ, ಸೋಮಪ್ಪ ಕಜ್ಜಗಿ, ಮುದಿಯಪ್ಪ ಯೋಗಮ್ಮನವರ, ಶೇಖರಗೌಡ ಮಾಲೀಪಾಟೀಲ, ಮಲ್ಲೇಶಪ್ಪ, ಶರಣಪ್ಪ ಬಂಗಾರಿ, ತಿರುಗುಣೇಶ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ 