ತಾಳಿಕೋಟಿ 27: ಇಡೀ ಜಗತ್ತಿಗೆ ಮಾದರಿಯೋಗ್ಯವಾದ ಭಾರತದ ಸಂವಿಧಾನವನ್ನು ಜನಸಾಮಾನ್ಯರು ತಿಳಿಯುವಂತಾಗಲು ಪ್ರತಿ ಹಳ್ಳಿಯ ಪ್ರತಿ ಮನೆಗೂ ತಲುಪಿಸುವ ಅಗತ್ಯ ಇದೆ ಎಂದು ಸಮಾಜ ಸೇವಕ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ತಾಲೂಕಿನ ಬೆಕಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಸ್ಕಿ ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿ ಇಂತಹ ಸಣ್ಣ ಗ್ರಾಮದಲ್ಲಿ ಇಷ್ಟೊಂದು ಅದ್ಭುತವಾದ ಕಾರ್ಯಕ್ರಮವನ್ನು ಸಂಘಟಿಸಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಇದರಲ್ಲಿ ನಮ್ಮ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಂಘಟಕರಿಗೆ ಋಣಿ ಯಾಗಿರುವೆ ಎಂದರು. ಸಾಹಿತಿ ಅಶೋಕ ಹಂಚಲಿ ಮಾತನಾಡಿ ಸ್ವತಂತ್ರ ಭಾರತಕ್ಕೆ ದಿಕ್ಸೂಚಿ ಯಾಗುವ ಒಂದು ಸಂವಿಧಾನದ ಅಗತ್ಯವಿತ್ತು ಈ ಮಹಾನ್ ಕಾರ್ಯವನ್ನು ಡಾ.ಅಂಬೇಡ್ಕರರು ಮಾಡಿದರು ಇದು ಭಾರತದ ಸರ್ವಶ್ರೇಷ್ಠ ಗ್ರಂಥವಾಗಿದೆ ಎಂದರು. ಡಿಎಸ್ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ,ಎಸ್.ಡಿ.ಎಮ್.ಸಿ ಅಧ್ಯಕ್ಷ ಯಮನೂರಿ ಸಿಂದಗೇರಿ ವಿದ್ಯಾರ್ಥಿನಿ ತಹಸೀನ್ ತಾಳಿಕೋಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಸ್ಕಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ. ಪ್ರಭುಗೌಡ ಲಿಂಗದಳ್ಳಿ ನೇತೃತ್ವದ ಅನುಗ್ರಹ ಫೌಂಡೇಶನ್ ವತಿಯಿಂದ 12000 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಂವಿಧಾನ ದಿನಾಚರಣೆ ಅಂಗವಾಗಿ ಅಸ್ಕಿ ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು .ಡಾ.ಪ್ರಭುಗೌಡ ಬಿ.ಎಲ್.ಸಂವಿಧಾನ ಪೀಠಿಕೆ ಭೋಧಿಸಿದರು. ಶಾಸಕ ಸಹೋದರ ಸಚೀನಗೌಡ ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು.ಗ್ರಾಮ ಗಣ್ಯರಾದ ನಾನಾಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ. ಮಲ್ಲಿಕಾರ್ಜುನ ಮಠ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಶಿವಣ್ಣ ಪೂಜಾರಿ, ಮಹೇಶ ಮುತ್ಯಾ, ಪ್ರಕಾಶ ಪೂಜಾರಿ ಬೆಕಿನಾಳ ಸಾನಿಧ್ಯ ವಹಿಸಿದ್ದರು. ಶಿಕ್ಷಕ ಬಸವರಾಜ ಮಾದರ ನಿರೂಪಿಸಿದರು. ವೇದಿಕೆಯಲ್ಲಿ ಬೆಕಿನಾಳ ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ ರವೀಂದ್ರ. ಸುಧಾಕರ, ಕಲಕೇರಿ ಗ್ರಾಪಂ ಅಧ್ಯಕ್ಷ ರಾಜ ಅಹಮದ್ ಸಿರಸಗಿ, ಕಲಕೇರಿ ಪಿಎಸ್ಐ ಸುರೇಶ ಮಂಟೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ,ಅಹಿಂದ ಮುಖಂಡ ಕಳ್ಳಿಮನಿ,ಸಿದ್ದು ಬುಳ್ಳಾ,ಡಾ.ಪ್ರಭುಗೌಡ ಬಿರಾದಾರ, ಹಳ್ಳೆಪ್ಪಗೌಡ ಚೌದ್ರಿ, ವಿಜಯಕುಮಾರ್ ಚೌದ್ರಿ, ಭೀಮಣ್ಣ ಚಿಂಚೋಳಿ, ವೀರಗಂಟಿ ಬ್ಯಾಕೋಡ, ಬೆಕಿನಾಳ ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು, ಅಸ್ಕಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.