ನಿರಂತರ ಪರಿಶ್ರಮವೇ ಸಹಕಾರಿ ಸಂಘದ ಅಭಿವೃದ್ಧಿಗೆ ನಾಂದಿ : ಮರಿಸ್ವಾಮಿ ನಾಯಕ
Constant effort is the key to the cooperative society's development: Mariswamy Nayaka
ಕಂಪ್ಲಿ 21: ತಾಲೂಕು ಸಮೀಪರ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಜನ ಸಭೆ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಮರಿಸ್ವಾಮಿ ನಾಯಕ ಸಭೆಯ ಅಧ್ಯಕ್ಷತವಹಿಸಿ ಮಾತನಾಡಿ, ಸಂಘವು ರೈತರ, ಸ್ಥಳೀಯ ಮುಖಂಡರ ಸಹಕಾರದ ಜೊತೆಗೆ ಸಂಘದ ಸಿಬ್ಬಂದಿಗಳ ನಿರಂತರ ಪರಿಶ್ರಮವೇ ಅಭಿವೃದ್ಧಿಗೆ ನಾಂದಿಯಾಗಿದೆ ಎಂದರು.
ನಂತರ ಮುಖ್ಯ ಕಾರ್ಯನಿರ್ವಾಹಕ ವಿ.ಮಲ್ಲಿಕಾರ್ಜುನ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 4428 ಸದಸ್ಯರಿದ್ದು, 1 ಕೋಟಿ 7 ಲಕ್ಷ 78 ಸಾವಿರ ಠೇವಣಿ ಸಂಗ್ರಹಿಸಿದೆ. ಕೆಸಿಸಿ ಸಾಲ 437 ಲಕ್ಷ, ಮಧ್ಯಮಾವಧಿ ಸಾಲ 45ಲಕ್ಷ, ಸ್ವಸಹಾಯಕ ಸಂಘಗಳಿಗೆ 14 ಲಕ್ಷ, ಮೀನು ಸಾಕಾಣಿಕೆಗೆ 12 ಲಕ್ಷ ಸೇರಿದಂತೆ ಒಟ್ಟು 708 ಲಕ್ಷ ಸಾಲ ವಿತರಿಸಿದೆ. 2025-26ನೇ ಸಾಲಿನಲ್ಲಿ ಸಂಘವು 7 ಲಕ್ಷ 87 ಸಾವಿರ 971 ರೂ.ಗಳ ನಿವ್ವಳ ಲಾಭಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ವಿ. ಹನುಮಂತ, ನಿರ್ದೇಶಕರಾದ ಪಿ.ಎಸ್.ಲಿಂಗಪ್ಪ, ಡಿ.ವಿ.ಮಂಜುನಾಥ, ಕೆ.ರಾಮಾಂಜನೇಯ್ಯ, ಎನ್.ವೆಂಕಟೇಶ, ಡಿ.ಶ್ರೀನಿವಾಸ, ವಲಿ ಮಸೀದಿ, ಹೆಚ್.ದಾನಪ್ಪ, ಕೆ.ತಿಮ್ಮಯ್ಯ, ಟಿ.ಶೋಭಾದೇವಿ, ನಾಗಮ್ಮ, ರಮೇಶ(ಕ್ಷೇತ್ರಾಧಿಕಾರಿ), ಜಿಪಂ ಮಾಜಿ ಸದಸ್ಯ ವಿ.ಜನಾರ್ದನ, ತಾಪಂ ಮಾಜಿ ಉಪಾಧ್ಯಕ್ಷ ಮಾದಾಪುರ ಮಾರ್ಪ, ಮುಖಂಡರಾದ ಟಿ.ರಸೂಲ್ ಸಾಬ್, ಮಜ್ಜಿಗೆ ನಾಗಪ್ಪ ಸೇರಿದಂತೆ ರೈತರು, ಸಿಬ್ಬಂದಿ ಇದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 