ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕೊಪ್ಪಳದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ  ಖಂಡಿಸಿ ಕೊಪ್ಪಳದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ Congress holds massive protest in Koppal condemning central government's price hike policy

ಕೊಪ್ಪಳ 11: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಿನೇ ದಿನ ದಿನಕ್ಕೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲೆಂಡರ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಜೀವನ ಅಲ್ಲೋಲ ಕಲ್ಲೋಲ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕೊಪ್ಪಳದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು, ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ ಕೇಂದ್ರದ ಬೆಲೆ ಏರಿಕೆ ನೀತಿ ಖಂಡಿಸಿದರು ಕೂಡಲೇ ಬೆಲೆ ಏರಿಕೆ ನಿಲ್ಲಿಸಿ ಕಡಿಮೆ ಶುಲ್ಕ ಮಾಡಿ ಸಾಮಾನ್ಯ ಜನರಿಗೆ ಅನುಕೂಲತೆ ದೊರಕಿಸಿ ಕೊಡುವಂತೆ ಒತ್ತಾಯಿಸಿದರು,

ಪ್ರತಿಭಟನೆಯಲ್ಲಿ ಅನೇಕ ಜನ ಮುಖಂಡರು ಮಾತನಾಡಿ ಬಿಜೆಪಿ ಸರ್ಕಾರದ ಅಚ್ಚೇದೀನ್ ಇದೇನಾ, ಜನರಿಗೆ ಬಹುದೊಡ್ಡ ಮೋಸ ಮಾಡುತ್ತಿದೆ ,12 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ  ಮಾಡಲಿಲ್ಲ ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ,ಬೆಲೆ ಇಳಿಸುವ, ರೂಪಾಯಿ ಮೌಲ್ಯ ವೃದ್ಧಿಸುವ, ಉದ್ಯೋಗ ಕೊಡುವ ಹಾಗೂ ಕಪ್ಪು ಹಣ ತರುವ ಭರವಸೆ ನೀಡಿ ಇಂದು ಸಾಮಾನ್ಯ ಜನರ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದರು, ಬೃಹತ್ ಪ್ರತಿಭಟನ ಮೆರವಣಿಗೆಯಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಸಂಸದ ಕೆ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ತುಂಗಬದ್ರ ಕಾಡಾ ಅಧ್ಯಕ್ಷ ಹಸನ್ ಸಾಬ್ ಡೂಟಿಹಾಳ,

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್, ಬಿ, ನಾಗರಹಳ್ಳಿ, ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ , ವಕ್ತಾರ  ಕೃಷ್ಣ ಇಟ್ಟಂಗಿ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ್, ಶ್ರೀನಿವಾಸ ಗುಪ್ತ, ಮಂಜುನಾಥ್ ಗೊಂಡವಾಳ ಗಂಗಮ್ಮ ಸೌಮ್ಯ ಕಂದಗಲ್ ಮಲ್ಲಿಕಾರ್ಜುನ ಸುರೇಶ್ ದಾಸರೆಡ್ಡಿ ಲಿಂಗೇಶ್ ಕಲ್ಗುಡಿ ಜೀಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ಗವಿಸಿದ್ದನಗೌಡ ಪಾಟೀಲ್, ಶೈಲಜಾ ಹಿರೇಮಠ್, ಜ್ಯೋತಿ ಗೊಂಡವಾಳ ,ರೇಷ್ಮಾ ಖಾಜಾವಲಿ, ಸಾವಿತ್ರಿ ಮುಜುಮ್ದಾರ್ ,ಚಾಂದ್ ಪಾಷಾ ಕಿಲ್ಲೆದಾರ್ ,ಹುಸೇನ್ ಪೀರ ಮುಜಾವರ್ ,

ಮಾನ್ವಿ ಪಾಷಾ , ಅಜ್ಜಪ್ಪ ಗೌಡ   ಯುವ ಕಾಂಗ್ರೆಸ್ ನಾಯಕ ಆಸಿಫ್ ಹನಗಿ ,ಅಕ್ಬರ್ ಪೊಲೀಸ್ ಮನಿ, ರೇಣುಕಾ,ಪರಶುರಾಮ ಕೆರೆಹಳ್ಳಿ, ಮಲ್ಲು ಪೂಜಾರ್, ಹಾಜಿ ಹುಸೇನಿ ಅಕ್ಬರ್ ಪಾಷಾ ಪಲ್ಟನ್, ಅಜೀಮುದ್ದೀನ್ ಅತ್ತಾರ್, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಹಿಳೆಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡು ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಲ್ಲಿಸಬೇಕು ಹೆಚ್ಚುವರಿ ಹೊರೆ ಕಡಿತ ಗೊಳಿಸಿ ಸಾಮಾನ್ಯ ಜನರಿಗೆ ಗ್ರಹಬಳಕೆ ಸಾಮಗ್ರಿಗಳ ಅನುಕೂಲತೆ ದೊರಕಿಸಿಕೊಡಲು ಪ್ರತಿಭಟನಾಕಾರರು ಒತ್ತಾಯಿಸಿದರು, ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿ ಕಟ್ಟಿಗೆಯ ಒಲೆ ಹಚ್ಚಿ ನೀರು ಕಾಯಿಸಿ ಪ್ರತಿಭಟಿಸಿದರು