ಸರ್ಕಾರಿ ಜಾಗಗಳ ಅಳತೆ ನಡೆಸಿ ಎಲ್ಲ ಅತಿಕ್ರಮಣ ತೆರವುಗೊಳಿಸಿ: ಪುರಸಭೆಗೆ ಮನವಿ

ಸರ್ಕಾರಿ ಜಾಗಗಳ ಅಳತೆ ನಡೆಸಿ ಎಲ್ಲ ಅತಿಕ್ರಮಣ ತೆರವುಗೊಳಿಸಿ: ಪುರಸಭೆಗೆ ಮನವಿ Conduct a survey of government lands and clear all encroachments: Appeal to the Town Municipality

 ಲಕ್ಷ್ಮೇಶ್ವರ 22:  ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಏಳು ಮತ್ತು ಒಂಬತ್ತುನೇ ವಾರ್ಡಿನಲ್ಲಿ ಕೇವಲ ಒಬ್ಬರು ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಅದನ್ನು ಅಳತೆ ಮಾಡಿ ತೆರಿವುಗೊಳಿಸುವಂತೆ ಕೆಲವರು ಪುರಸಭೆಗೆ ಮನವಿ ಕೊಟ್ಟಿದ್ದು ನಮಗೆ ಕಂಡುಬರುತ್ತೀದೆ ಅದಕ್ಕಾಗಿ ಪುರಸಭೆಯ ಅಧಿಕಾರಿಗಳು ಅಳತೆ ಮಾಡಿದರೆ ಅತಿಕ್ರಮಿಸಿರುವ ಕೇವಲ ಒಬ್ಬರ ಜಾಗವನ್ನು ಮಾತ್ರ ಅಳತೆ ಮಾಡದೆ ಏಳು ಮತ್ತು ಒಂಬತ್ತುನೇ ವಾರ್ಡಿನಲ್ಲಿ ಬರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿರುವ ಎಲ್ಲಾ ಜಾಗವನ್ನು ಅಳತೆ ಮಾಡಿ ವಶಪಡಿಸಿಕೊಳ್ಳಬೇಕು  ಕೇವಲ ಒಬ್ಬರ ಜಾಗವನ್ನು ಅಳತೆ ಮಾಡಿ ಉಳಿದ ಜಾಗವನ್ನು ಹಾಗೆ ಬಿಟ್ಟರೆ ನಾವು ಮುಂದೆ ಪುರಸಭೆ ಅಧಿಕಾರಿಗಳು ವಿರುದ್ಧ ಕೋರ್ಟ್‌ ಮೊರೆ ಹೋಗಲು ಸಿದ್ದರಿದ್ದೇವೆ ಎಂದು ಏಳನೇ ವಾರ್ಡಿನ ನಿವಾಸಿಗಳು ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರ ಮೂಲಕ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಈ ಸಮಯದಲ್ಲಿ ಪುರಸಭೆಯ ಅಧಿಕಾರಿಗಳಾದ ಹನುಮಂತಪ್ಪ ನಂದೆಣ್ಣವರ ನೇತ್ರ ಹೊಸಮನಿ ಏಳನೇ ವಾರ್ಡಿನ ನಿವಾಸಿಗಳಾದ ಅಶೋಕ್ ನೀರಲೋಟಿ ಮಲ್ಲಪ್ಪ ಉಮಚಿಗಿ ಈರ​‍್ಪ ಅಣ್ಣಿಗೇರಿ ಚಂದ್ರು ಧರಣಿ ಅಕ್ಷಯ್ ಓದುನವರ ವಿಜಯ್ ಉಮಚಗಿ ಫಕೀರ​‍್ಪ ಉಮಚಗಿ ಮಲ್ಲಿಕಾರ್ಜುನ್ ನೀರಲೋಟಿ ಇದ್ದರು.