ಕೆಪಿಎಸ್ ಯೋಜನೆಯನ್ನು ಹೇರುವ ಸರ್ಕಾರದ ನಡೆಗೆ ಖಂಡನೆ
Condemnation of the government's move to impose the KPS scheme
ಧಾರವಾಡ 12: ರಾಷ್ಟ್ರೀಯ ಶಿಕ್ಷಣ ದಿನದ ಸಂದರ್ಭದಲ್ಲಿ, ಕರ್ನಾಟಕದ ಶಿಕ್ಷಣ ಸಚಿವರಾದ ಮಧು ಬಂಗಾರ್ಪನವರು ರಾಜ್ಯದಲ್ಲಿ 6000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರದ ಈ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ. ಈ ಹೊಸ ಯೋಜನೆಯು ಮತ್ತೊಂದು ವಂಚನೆಯ ಪ್ರಯತ್ನವಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ವೀಲೀನಗೊಳಿಸಲು ಮತ್ತು ಮುಚ್ಚಲು ಇದನ್ನು ರೂಪಿಸಲಾಗಿದೆ.
ಸರ್ಕಾರವು ಈ ಹಿಂದೆ, ಸಾರ್ವಜನಿಕ ಒತ್ತಡ ಹಾಗೂ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಣ ತಜ್ಞರಿಂದ ವ್ಯಾಪಕ ಪ್ರತಿಭಟನೆಗಳ ನಂತರ, ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಅಥವಾ ವೀಲೀನಗೊಳಿಸುವುದಿಲ್ಲ ಎಂದು ಭರವಸೆ ನೀಡಿತ್ತು. ಆದಾಗ್ಯೂ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆಪಿಎಸ್ ಶಾಲೆಯನ್ನು ಸ್ಥಾಪಿಸುವ ಈ ಯೋಜನೆಯನ್ನು ಪರಿಚಯಿಸುವ ಮೂಲಕ, ಸರ್ಕಾರವು ಮತ್ತೊಮ್ಮೆ ಸಂಪನ್ಮೂಲಗಳನ್ನು ಕೇಂದ್ರೀಕರಿಸಿ, ಸಣ್ಣ ಮತ್ತು ಗ್ರಾಮೀಣ ಶಾಲೆಗಳನ್ನು ಕೊನೆಗಾಣಿಸಲು ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಯ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ.
*ಈ ಜನವಿರೋಧಿ ನೀತಿಯು ಅನಿವಾರ್ಯವಾಗಿ ಈ ಕೆಳಗಿನವುಗಳಿಗೆ ಕಾರಣವಾಗುತ್ತದೆ:*
* ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸರ್ಕಾರಿ ಶಾಲೆಗಳ ಮುಚ್ಚುವಿಕೆ ಮತ್ತು ವೀಲೀನ.
* ಬಡ ಮತ್ತು ಗ್ರಾಮೀಣ ಹಿನ್ನೆಲೆಯ ಮಕ್ಕಳಿಗೆ ಹತ್ತಿರದ ನೆರೆಹೊರೆಯ ಶಾಲೆಗಳಿಗೆ ಪ್ರವೇಶ ಸಿಗದೇ ಇರುವುದು.
* ಹೆಚ್ಚಿದ ಪ್ರಯಾಣದ ದೂರ ಮತ್ತು ಅಸುರಕ್ಷತೆಯ ಕಾರಣದಿಂದಾಗಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಶಾಲೆ ಬಿಡುವವರ ಸಂಖ್ಯೆಯಲ್ಲಿ ಹೆಚ್ಚಳ.
* “ಸುಧಾರಣೆ”ಯ ನೆಪದಲ್ಲಿ ಶಿಕ್ಷಣದ ಮತ್ತಷ್ಟು ವ್ಯಾಪಾರೀಕರಣ ಮತ್ತು ಖಾಸಗೀಕರಣ.
ಸರ್ಕಾರದ ನಿಜವಾದ ಕೆಲಸವೆಂದರೆ ಶಾಲೆಗಳಿಗೆ ಮರುನಾಮಕರಣ ಮಾಡುವುದು ಅಥವಾ ಪುನರ್ರಚಿಸುವುದಲ್ಲ, ಬದಲಿಗೆ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಸಾಕಷ್ಟು ಶಿಕ್ಷಕರು, ಮೂಲಸೌಕರ್ಯ, ಕಲಿಕಾ ಸಾಮಗ್ರಿಗಳು ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯೊಂದಿಗೆ ಬಲಪಡಿಸುವುದು. ಶಿಕ್ಷಣವು ಮೂಲಭೂತ ಹಕ್ಕು ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ ಹಿ ಇದನ್ನು ವೆಚ್ಚ ಕಡಿತ ಅಥವಾ ಕಾರ್ೊರೇಟ್-ಶೈಲಿಯ ನಿರ್ವಹಣೆಗಾಗಿ ಬಲಿಕೊಡಲು ಸಾಧ್ಯವಿಲ್ಲ. ಕೆಪಿಎಸ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕೆಂದು ಎಐಡಿಎಸ್‌ಓ ಒತ್ತಾಯಿಸುತ್ತದೆ ಮತ್ತು ಕರ್ನಾಟಕದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಎಲ್ಲಾ ಶಿಕ್ಷಣ-ಪ್ರೇಮಿ ನಾಗರಿಕರು ಸೇರಿದಂತೆ ಕರ್ನಾಟಕದ ಜನತೆ ಸಾರ್ವಜನಿಕ ಶಿಕ್ಷಣವನ್ನು ರಕ್ಷಿಸಲು ಒಂದಾಗಿ ಪ್ರಬಲ ಸಾಮೂಹಿಕ ಆಂದೋಲನವನ್ನು ನಿರ್ಮಿಸಬೇಕೆಂದು ಕರೆ ನೀಡುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 