ನಜೀರ್ ಅಹ್ಮದ್ ಹೇಳಿಕೆಗೆ ಖಂಡನೆ
Condemnation of Nazir Ahmed's statement
ನಜೀರ್ ಅಹ್ಮದ್ ಹೇಳಿಕೆಗೆ ಖಂಡನೆ
ಸದನದ ಕಲಾಪದ ವೇಳೆ ಕಾಂಗ್ರೇಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ನಜೀರ್ ಅಹ್ಮದ್ ದೇಶದ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರನ್ನು ‘ರಾಷ್ಟ್ರದ್ರೋಹಿ, ದೇಶದ್ರೋಹಿ’ ಎಂದು ನಿಂದನಾತ್ಮಕವಾಗಿ ಅವಹೇಳನ ಮಾಡಿರುವುದನ್ನು ಖಂಡಿಸಿತ್ತೇನೆ ಎಂದು ಬಿಜೆಪಿ ರಾಜ್ಯ ಸಂಚಾಲಕರು, ವ್ಯಾಪಾರ - ವಾಣಿಜ್ಯ ಪ್ರಕೋಷ್ಠ, ಕರ್ನಾಟಕದ ವಿಜಯಕುಮಾರ ಕುಡಿಗನೂರ ಹೇಳಿದರು.
ಮೆಲ್ಮನೆಯಲ್ಲಿ ಬುದ್ಧಿಜೀವಿಗಳ ಕೂಟ ಅದು, ಈ ಒಐಅ ಗೆ ನಾಚಿಕೆಯಾಗ್ಬೇಕು, ಈ ದೇಶದ ಪ್ರಧಾನಮಂತ್ರಿಗಳನ್ನ ಇಡೀ ದೇಶ ಹಾಗು ಪ್ರಪಂಚದ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರಶಂಸೆ ಮಾಡುತ್ತಿರುವಾಗ ಹಾಗು ಬಲುಚಿಸ್ತಾನ್ ದವರು ನರೇಂದ್ರ ಮೋದಿಜಿ ರಂತ ವ್ಯಕ್ತಿ ನಮ್ಮ ದೇಶಕ್ಕೂ ಬೇಕು ಅನ್ನುವಾಗ, ಹಿಂತಾ ನಜಿರ್ ಅಹ್ಮದ್ ಬಾಯಿಚಪಲಕ್ಕೆ ಬಾಯಿಗೆ ಬಂದಂಗೆ ಮಾತಾಡಿ, ಅಧಿವೇಶನದ ಮಹತ್ವದ ಸಮಯ ಸಂಪೂರ್ಣ ಹಾಳುಮಾಡಿ, ಇವರನ್ನು ಪರಿಷತ್ ಸದಸ್ಯತ್ವ ದಿಂದ ಸರ್ಕಾರ ಕೈಬಿಡಬೇಕು.. ಮಾತಾಡೋದೆಲ್ಲ ಮಾತಾಡಿ ನಂತರ ಕ್ಷಮೆ ಕೇಳಲು ಮೀನಾ ಮೆಶ್ ಮಾಡುತ್ತಿರುವದು ಸರಿಯೇ ? ಮೊದಲು ಬಾಯಿಗೆ ಬಂದಂಗೆ ಅನ್ನೋದು, ಆನಂತರ ಕ್ಷಮೆ ಕೇಳೋದು ಇದು ನಾಟಕ ಯಾರಿಗೆ ತೋರಸ್ತೀರಾ.. ನಾನು ಈಗ ನಜಿರ್ ಅಹಮದ್ ಅವರಿಗೆ ನಾನು ನಿಮ್ಮಪ್ಪ ಉಗ್ರವಾದಿ ಅನ್ನುತ್ತೇನೆ, ಆಮೇಲೆ ಪ್ರಚಾರ ತೊಗೊಂಡು ಕ್ಷಮಿಸಿ ಎನ್ನುತ್ತೇನೆ ಎಲ್ಲಾ ಸರಿಹೋಗುತ್ತಾ.. ಹಿಂತಾ ದೇಶದ್ರೋಹಿಯ ಹಿಂದೆ ಪಾಕಿಸ್ತಾನ ಕೈವಾಡ ಇದೆಯಾ ಎಂದು ಸಂಶಯ ಬರುತ್ತಿದೆ ಇದು ತನಿಖೆ ಯಾಗಬೇಕು ವಿಜಯಕುಮಾರ ಕುಡಿಗನೂರ ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 