ಸಿಂದಗಿ 08: ನಿರಂತರ ಮೂವತ್ತು ವರ್ಷದ ಹೋರಾಟದ ಪ್ರತಿಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆಲ, ಜಲ, ಮೀಸಲಾತಿಯನ್ನು ಪ್ರತಿಯೊಂದು ದಲಿತರಿಗೆ ನ್ಯಾಯ ಬದ್ಧವಾಗಿ ಮೀಸಲಾತಿ ಸಿಗಬೇಕು ಎಂಬ ಸದುದ್ದೇಶದಿಂದ ಪರಿಶಿಷ್ಠ ಜಾತಿಯ ಸಮಗ್ರ ಸಮೀಕ್ಷೆ ಪ್ರಾರಂಭಿಸಲಾಗಿದೆ ಎಂದು ದಲಿತ ಮುಖಂಡ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಿದ್ದರು ಸಹಿತ ಸಂಪೂರ್ಣ ಲಾಭವನ್ನು ಕೆಲವು ಜಾತಿಗಳು ಅದರ ಸದುಪಯೋಗ ಪಡೆದುಕೊಳ್ಳುತ್ತಿರುವುದನ್ನು ನೋಡಿದ ಹೋರಾಟಗಾರರು ಕಳೆದ 30ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಎಲ್ಲ ಪರಿಶಿಷ್ಟ ಸಮುದಾಯಗಳು ಮನೆ ಬಾಗಿಲಿಗೆ ಬರುವ ಸಮೀಕ್ಷಾದಾರರಿಗೆ ಸಹಕಾರ ನೀಡಿ ಸಂಪೂರ್ಣವಾದ ಮಾಹಿತಿ ಒದಗಿಸಬೇಕು. ಹಾಗೂ ಮುಖ್ಯವಾಗಿ ನಮೂದಿಸ ಬೇಕಾಗಿರುವುದು ಜಾತಿ ಕಾಲಂ. ನನ್ನ ಕುಲ ಬಾಂಧವರು ಅವರು ನೀಡುವ ಕಾಲಂ ನಂಬರ 44.1, 44.2, 44.3.( ಹೋಲೆಯ, ಹೋಲೆರ, ಹೊಲೇಯ) ಮೂರು ಸಮನಾರ್ಥಕ ಪದಗಳು ಸೂಚಿಸುತ್ತದೆ. ನಿಮ್ಮ ಜಾತಿ ಪ್ರಮಾಣ ಪತ್ರದಂತೆ ನಮೂದು ಮಾಡಿಸಬೇಕಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎಂದು ಜಾತಿ ಪ್ರಮಾಣ ಪತ್ರ ಇರುವವರು ಅವರ ಮೂಲಜಾತಿ ನಮೂದಿಸಬೇಕು. ನಮ್ಮ ವಿವರಗಳು ಮುಂಬರುವ ದಿನಮಾನಗಳಲ್ಲಿ ನಮ್ಮ ಮಕ್ಕಳಿಗೆ ನೀಡುವ ಮೀಸಲಾತಿ ಎಂದರು.
101 ಜಾತಿಗಳಿಗೂ ಸಂಪೂರ್ಣವಾಗಿ ಮೀಸಲಾತಿ ನೀಡುವ ಉದ್ದೇಶ ಈ ಸಮೀಕ್ಷೆಯದ್ದಾಗಿದೆ. ಎಲ್ಲರೂ ಜನಸಂಖ್ಯೆಗೆ ಅನಗುಣವಾಗಿ ಮೀಸಲಾತಿ ದೊರಕುವುದು. ಅದನ್ನು ಬಿಟ್ಟು ಸಮಗಾರ, ಚರ್ಮಗಾರಿಕೆ ಮಾಡುವವರೆಲ್ಲರೂ ಮಾದಿಗವೆಂದು ನಮೂದಿಸಬಾರದು ಅವರವರ ಮೂಲಜಾತಿ ನಮೂದಿಸಿದ್ದರೆ ಅವರಿಗೆ ಅವರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ದೊರಕುವುದು. ದಲಿತರಲ್ಲಿಯೇ ಸ್ಪರ್ಶರು ಹಾಗೂ ಅಸ್ಪರ್ಶರು ಇರುವುದರಿಂದ ಇತ್ತೀಚಿನ ದಿನಮಾನಗಳಲ್ಲಿ ಮೀಸಲಾತಿಯನ್ನು ಪ್ರಭಾವದ ಮೇಲೆ ಪಡೆದುಕೊಳ್ಳುವಂತಾಗಿದೆ. ಹೀಗಾಗಬಾರದೆಂಬ ಉದ್ದೇಶದಿಂದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿಯ ಸಮಗ್ರ ಸಮೀಕ್ಷೆ ನಡೆಸುತ್ತಿದ್ದಾರೆ. ಆದ್ದರಿಂದ ಮನೆ ಬಾಗಿಲಿಗೆ ಬರುವ ಸಮೀಕ್ಷಾದಾರರಿಗೆ ಸಹಕರಿಸಿ ಹಾಗೂ ಬಲಗೈ ಸಮುದಾಯದವರು ಅವರು ನೀಡುವ 44ನೇ ಕಾಲಂನಲ್ಲಿ ಕಡ್ಡಾಯವಾಗಿ ಜಾತಿ ನಮೂದಿಸಿ ಎಂದು ಮನವಿ ಮಾಡಿದರು.
ಡಿ.ಎಸ್.ಎಸ್. ಮುಖಂಡ ಚಂದ್ರಕಾಂತ ಶಿಂಗೆ ಮಾತನಾಡಿ, ಸದಾಶಿವ ಆಯೋಗದಲ್ಲಿ ಹಲವು ಲೋಪ-ದೋಷಗಳಾದವು. ಸಮೀಕ್ಷೆ ಸಂಧರ್ಭದಲ್ಲಿ ಹಲವಾರು ಜನ ತಮ್ಮ ಜಾತಿಯೇ ಹೇಳಿಕೋಳ್ಳಲಿಲ್ಲ ಹಾಗೂ ಲಕ್ಷಾಂತರ ಜನರು ಸಮೀಕ್ಷೆಯಲ್ಲಿಯೇ ಇರಲಿಲ್ಲ ಎಂಬುದು ಮನಗಂಡ ಸರಕಾರ ಮೂರು ಹಂತದಲ್ಲಿ ಸಮೀಕ್ಷೆ ಪ್ರಾರಂಬಿಸಿದೆ. ಪ್ರತಿಯೊಬ್ಬರು ಅವರವರ ಮೂಲಜಾತಿ ನಮೂದಿಸಬೇಕು. ಹೆಚ್ಚಿನ ಮೀಸಲಾತಿ ಒದಗಿಸಿಕೋಳ್ಳುವ ದೃಷ್ಠಿಯಿಂದ ಮಾಂಗ, ಸಮಾಗರ, ಮಾದರ ಎಲ್ಲರು ಒಂದೇ ಎಂದು ಬರೆಸುವ ಹನ್ನಾರ ನಡೆದಿದೆ ಅದು ಆಗಬಾರದು. ಯಾರದ್ದೋ ಮಾತು ಕೇಳಿ ನೀವು ನಿಮ್ಮ ಮೂಲಜಾತಿ ನಮೂದಿಸದಿದ್ದರೇ ನಿಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಮಾಡುವ ಅನ್ಯಾಯವಾಗಿದೆ ಆದ್ದರಿಂದ ನಿಮ್ಮ ಮೂಲಜಾತಿ ನಮೂದಿಸಬೇಕೆಂದು ಹೇಳಿದರು.
ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಡಿ.ಎಮ್.ಮಾವೂರ, ದಲಿತ ಮುಖಂಡ ಪರಸುರಾಮ ಕಾಂಬಳೆ, ಶ್ರೀನಿವಾಸ ಓಲೇಕಾರ, ಪರಸುರಾಮ ಕೂಚಬಾಳ ಉಪಸ್ಥಿತರಿದ್ದರು.