ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆ: ಬಡ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆ: ಬಡ ಮಹಿಳೆಗೆ ಯಶಸ್ವಿ ಚಿಕಿತ್ಸೆ  Complex brain surgery: a successful treatment for a poor woman


ವಿಜಯಪುರ, 29: ಬಿ.ಎಲ್‌.ಡಿ.ಇ. ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ತಂಡವು ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ, ಬಡ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಮರುಜೀವ ನೀಡಿದೆ.  

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ರೇಣವ್ವ ನಾಲತವಾಡ (47) ಅವರು ತೀವ್ರ ಪ್ರಮಾಣದ ಸಬ್ ಅರಾಕ್ನಾಯ್ಡ್‌ ಹೆಮರೇಜ್ ಹಾಗೂ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿ ಬೈಫರ್ಕೇಶನ್ ಅನ್ಯುರಿಸಮ್ನಿಂದ ಬಳಲುತ್ತಿದ್ದರು. ಅನ್ಯುರಿಸಮ್ ಛಿದ್ರಗೊಂಡ ಪರಿಣಾಮ ಮೆದುಳಿನ ಸುತ್ತ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.  

ಅಖಿ ಹಾಗೂ ಆಂಜಿಯೋಗ್ರಫಿ ಪರೀಕ್ಷೆಗಳಲ್ಲಿ ಬಲ ಒಅಂ ಬೈಫರ್ಕೇಶನ್ ಭಾಗದಲ್ಲಿ ದ್ವಿಪ್ರಭೇದದ  ಅನ್ಯುರಿಸಮ್ ಇರುವುದು ಪತ್ತೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ರೋಗಿಯನ್ನು ತುರ್ತಾಗಿ ಮೈಕ್ರೋಸರ್ಜಿಕಲ್ ಚಿಕಿತ್ಸೆಗೆ ಒಳಪಡಿಸಿದರು.  

ಶಸ್ತ್ರಚಿಕಿತ್ಸೆಯ ವೇಳೆ ಅನ್ಯುರಿಸಮ್ನ ಕುತ್ತಿಗೆಯನ್ನು ಯಶಸ್ವಿಯಾಗಿ ಕ್ಲಿಪ್ ಮಾಡುವುದರ ಜೊತೆಗೆ, ಮೆದುಳಿಗೆ ರಕ್ತ ಪೂರೈಸುವ ಪ್ರಮುಖ ಒಅಂ ಶಾಖೆಗಳು ಹಾಗೂ ಸೂಕ್ಷ್ಮ ಪರ್ಫೋರೇಟರ್ ರಕ್ತನಾಳಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು.