ಎಪ್ರಿಲ್ ಕೊನೆವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ : ಡಾ.ದುರ್ಗದಾಸ್ ಅಭಿಮತ
Complete taluk level Bayalata Sammelana in the last week of April: Dr. Durgadas's opinion
ಲೋಕದರ್ಶನ ವರದಿ
ಕಂಪ್ಲಿ 20: ಸ್ಥಳೀಯ ಶಾಸಕರ, ಸಂಘ-ಸಂಸ್ಥೆ ಹಾಗೂ ಕಲಾವಿದರ ಸಹಕಾರದೊಂದಿಗೆ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ.ದುರ್ಗದಾಸ್ ತಿಳಿಸಿದರು. ಅವರು ಪಟ್ಟಣದ ಅತಿಥಿ ಗೃಹದಲ್ಲಿ ಆದಿವಾಸಿ ಜನಪದ ಕಲೆ ಹಾಗೂ ಬಯಲಾಟದ ಬಗ್ಗೆ ಸ್ಥಳೀಯ ಕಲಾವಿದರೊಂದಿಗೆ ಚರ್ಚಿಸಿದ ನಂತರ ಮಾತನಾಡಿ, ಬಳ್ಳಾರಿ ಜಿಲ್ಲೆ ಬಯಲಾಟದ ತವರು ಮನೆಯಾಗಿದೆ.
ಕಂಪ್ಲಿ ತಾಲೂಕಿನ ಕಾಳಗಿ ಈರಣ್ಣ ಬರೆದಂತಹ ಕನಕಾಗಿ ಕಲ್ಯಾಣ ಎಂಬ ಪುಸ್ತಕವು ಬಳ್ಳಾರಿ ಜಿಲ್ಲಾದ್ಯಂತ ಅತ್ಯಂತ ಪ್ರಸಿದ್ಧ ಪಡೆದಿದೆ. ರಾಮಸಾಗರದ ಸಾಲಿ ವೆಂಕಣ್ಣಯ್ಯನವರು ಬರೆದಂತಹ ಏಳು ಬಯಲಾಟ ಕೂಡ ಜನಮನ್ನಣೆಗೆ ಪಾತ್ರವಾಗಿವೆ. ಇದರಲ್ಲಿ ಗಿರಿಜಾ ಕಲ್ಯಾಣ, ರಾವಣ ದಿಗ್ವಿಜಯ, ಪ್ರಹ್ಲಾದ ಚರಿತ್ರೆ ಸೇರಿದಂತೆ ಹಲವು ಬಯಲಾಟಗಳು ಜಿಲ್ಲೆಯ ಹೆಗ್ಗಳಿಕೆಯ ಜೊತೆಗೆ ನಾಡಿನುದ್ದಕ್ಕೂ ಪಸರಿಸುವ ನಿಟ್ಟಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಈ ಜಿಲ್ಲೆಯ ತುಂಬಾ ಅಲೆಮಾರಿ, ಅರೆಅಲೆಮಾರಿ ಮತ್ತು ಸ್ಥಳೀಯ ಕಲಾವಿದರು ಬಯಲಾಟಗಳನ್ನು ಪ್ರತಿ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡುತ್ತ ಈ ಬಯಲಾಟ ಕಲೆ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ.
ಆಧುನಿಕ ಯುಗದಲ್ಲಿ ಬಯಲಾಟ ಕಣ್ಮರೆಯಾಗುತ್ತಿವುದು ವಿಷಾಧನೀಯವಾಗಿದೆ. ಆದ್ದರಿಂದ ಈ ಬಯಲಾಟ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯವಾಗಿದೆ. ಈ ದೃಷ್ಟಿಯಿಂದ ಕರ್ನಾಟಕ ಬಯಲಾಟ ಅಕಾಡೆಮಿವತಿಯಿಂದ ಎಪ್ರಿಲ್ ತಿಂಗಳ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ ಏರಿ್ಡಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಶಾಸಕರ, ಸಂಘ ಸಂಸ್ಥೆಯವರ ಮತ್ತು ಬಯಲಾಟ ಕಲಾವಿದರ ಬೆಂಬಲ ಮತ್ತು ಸಹಕಾರದೊಂದಿಗೆ ಯಶಸ್ವಿ ಮಾಡಿಕೊಡಬೇಕಾಗಿದೆ ಎಂದರು.
ಜೈ ಆದಿವಾಸಿ ತಾಷಾರಾಂಡೋಲ್ ಕಲಾ ತಂಡದ ಮುಖ್ಯಸ್ಥ ಎಚ್.ಪಿ.ಶಿಕಾರಿರಾಮು ಮಾತನಾಡಿ, ಬಯಲಾಟ ಹಾಗೂ ಜನಪದ ಕಲೆಗಳಿಗೆ ತನ್ನದೇ ಆದ ಇತಿಹಾಸವಿದೆ. ಇಂದಿನ ತಂತ್ರಜ್ಞಾನದಲ್ಲಿ ಸಾಕಷ್ಟು ಕಲೆಗಳು ಮರೆಯಾಗುವಂತಾಗಿದೆ. ಆದ್ದರಿಂದ ಸರ್ಕಾರ ಈ ಕಲೆಗಳ ಅಳಿವು ಉಳಿವಿಗಾಗಿ ಹೆಚ್ಚಿನ ಗಮನ ಹರಿಸಿ, ಶಾಲೆ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಕಲೆಗಳಿಗೆ ಮನ್ನಣೆ ನೀಡಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅಗತ್ಯವಾಗಿದೆ ಎಂದರು. ನಂತರ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ.ದುರ್ಗದಾಸ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮುಖಂಡರಾದ ಮಲ್ಲೇಶಪ್ಪ, ಯಮನಪ್ಪ ಪವರ್, ಸಿಂಗಂ ರಾಘವೇಂದ್ರ, ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 