ನಕಲಿ ವೈದ್ಯ ಅಭಿ ಕುಮಾರ್ ಮೇಲೆ ದೂರು : ವೆಂಕಟೇಶ ರಾಠೋಡ ಪರವಾನಿಗೆ ರಹಿತ ಓಷಧ ವ್ಯಾಪಾರಿಯ ಆಸ್ಪತ್ರೆಗೆ ಭೇಟಿ
Complaint against fake doctor Abhi Kumar: Venkatesh Rathod visits unlicensed drug dealer's hospital
ಕನಕಗಿರಿ 29: ತಾಲೂಕಿನ ಜೀರಾಳ ಗ್ರಾಮದ ಬಂಗಾಳಿ ಮೂಲದ ನಕಲಿ ವೈದ್ಯ ಅಭಿ ಕುಮಾರ್ ಅ ಅಭಿರಾಮ್ ಲೈಸೆನ್ಸ್ ರಹಿತವಾಗಿ ಓಷಧ ಮಾರಾಟ ಮಾಡುತ್ತಿರುವ ಮಾಹಿತಿ ಅನಾಮಧೇಯ ದೂರುದಾರರಿಂದ ತಿಳಿದು ಬಂದಿದ್ದರಿಂದ ಕೊಪ್ಪಳ ವೃತ್ತದ ಸಹಾಯಕ ಓಷಧ ನಿಯಂತ್ರಕ ವೆಂಕಟೇಶ ರಾಠೋಡ ಪರವಾನಿಗೆ ರಹಿತ ಓಷಧ ವ್ಯಾಪಾರಿಯ ಆಸ್ಪತ್ರೆಗೆ ಭೇಟಿ ನೀಡಿ ಪರೀಶೀಲಿಸಿದ್ದರು. ಸ್ಥಳದಲ್ಲಿ ಓಷಧಗಳು ಪತ್ತೆಯಾದವಾದರೂ ಸಾರ್ವಜನಿಕರ ಅಡೆತಡೆಯಿಂದಾಗಿ ನಕಲಿ ವೈಧ್ಯ ಸಂಗ್ರಹಿಸಿ ಕೊಂಡಿದ್ದ ಓಷಧಗಳನ್ನು ದಸ್ತಗೀರ ಮಾಡಲು ಅವರಿಗೆ ಅವಕಾಶ ವಾಗಿರಲಿಲ್ಲ.ನಂತರ ಬಳ್ಳಾರಿ ವಿಭಾಗದ ಉಪ ಓಷಧ ನಿಯಂತ್ರಕ ರಾಜಶೇಖರ ಮಲ್ಲಿ ಅವರ ಆದೇಶದ ಮೇರೆಗೆ ಬಳ್ಳಾರಿ ವೃತ್ತದ ಇಬ್ಬರು ಸಹಾಯಕ ಓಷಧ ನಿಯಂತ್ರಕರು ಮತ್ತು ಕೊಪ್ಪಳ ವೃತ್ತದ ಸಹಾಯಕ ಓಷಧ ನಿಯಂತ್ರಕರು ಸೇರಿ ಮತ್ತೊಮ್ಮೆ ಜೀರಾಳ ಗ್ರಾಮದ ನಕಲಿ ವೈಧ್ಯನ ಆಸ್ಪತ್ರೆಯ ಮೇಲೆ ಮೂರು ಜನರ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಆಗ ಆಸ್ಪತ್ರೆ ಮತ್ತು ಆತ ವಾಸಿಸಿದ್ದ ಮನೆಯಲ್ಲಿಯೂ ಅಲೋಪತಿ ಓಷಧಗಳು ಕಂಡು ಬಂದಿವೆ. ಪುನಃ ಅವುಗಳನ್ನು ಸೀಜ್ ಮಾಡಲು ಅಲ್ಲಿನ ಗ್ರಾಮಸ್ಥರು ಪುನಃ ಅಡ್ಡಿ ಪಡಿಸಿದ್ದಾರೆ. ಸ್ಥಳಕ್ಕೆ ಪೋಲೀಸ್ ಫೋರ್ಸ್ ತೆಗೆದುಕೊಂಡು ಹೋಗುವುದರಲ್ಲಿ ಓಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದು ,ಇಲ್ಲಿ ಕರ್ತವ್ಯಕ್ಕೆ ಚ್ಯುತಿಯಾಗಿದೆ. ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಅಧಿಕಾರಿಗಳು ಕನಕಗಿರಿ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಬಂದಿದ್ದಾರೆ. ಕೇವಲ ದೂರನ್ನು ದಾಖಲಿಸಿಕೊಂಡ ಅಲ್ಲಿನ ಪೋಲೀಸ್ ಎಫ್.ಐ.ಅರ್. ಮಾಡಿಲ್ಲ. ಅದಕ್ಕಾಗಿ ಎ.ಡಿ.ಸಿ.,ವೆಂಕಟೇಶ ರಾಠೋಡ ಕೊಪ್ಪಳದ ಎಸ್.ಪಿ.ಅವರನ್ನು ಕಂಡು ಪ್ರಕರಣದ ಬಗ್ಗೆ ವಿವರಿಸಿದ್ದಾರೆ.
ಕ್ಲಾಸ್-1 ಗ್ರೇಡ್ ಅಧಿಕಾರಿಗಳಾದ ಓಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ದೂರು ನೀಡಲು ಕನಕಗಿರಿ ಪೋಲೀಸ್ ಇನ್ಸಪೆಕ್ಟರ್ ಕೇಳಿ ಪಡೆದದ್ದು ,ಕೇವಲ ಇಬ್ಬರು ಪೇದೆಗಳನ್ನು ರಕ್ಷಣೆಗೆ ಕಳುಹಿಸಿದ್ದು , ಓಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕರ್ತವ್ಯ ಪಾಲನೆಗೆ ಆಸ್ಪದವಾಗಿಲ್ಲ.ಇದೇ ರೀತಿ ಎ.ಡಿ.ಸಿ.ಯವರು ಕೊಪ್ಪಳದ ಜಿಲ್ಲಾಧಿಕಾರಿಯನ್ನೂ ಸಹ ಕಂಡು ಜೀರಾಳ ಗ್ರಾಮದಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಮತ್ತು ರಾಜ್ಯ ಓಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮುಂದಿನ ಕ್ರಮವನ್ನು ಹೇಗೆ ಜರುಗಿಸುತ್ತಾರೆ ?
ಪರವಾನಿಗೆ ಪಡೆದು ಓಷಧ ವ್ಯಾಪಾರ ಮಾಡುತ್ತಿರುವ ಓಷಧ ವ್ಯಾಪಾರಿಗಳನ್ನು ಯಾವ ರೀತಿ ರಕ್ಷಿಸುತ್ತಾರೆ ಕಾಯ್ದು ನೋಡಬೇಕಾಗಿದೆ.ಇಷ್ಟಾದರೂ ಸ್ಥಳಿಯದವನೂ ಅಲ್ಲದ ಬಂಗಾಳಿ ಮೂಲದ ಈ ನಕಲಿ ವೈದ್ಯ ಪುನಃ ಜೀರಾಳ ಗ್ರಾಮಕ್ಕೆ ಆಗಮಿಸಿದ್ದು, ನಕಲಿ ಚಿಕಿತ್ಸೆ ಮತ್ತು ಕಾನೂನು ಬಾಹಿರ ಓಷಧ ಮಾರಾಟದಲ್ಲಿ ನಿರತನಾಗಿದ್ದಾನೆ ಎಂದು ಗ್ರಾಮಸ್ಥರಿಂದ ತಿಳಿದು ಬಂದಿದೆ.ಕೆ.ಪಿ.ಎಮ್.ಎ.,ಎಂದು ಪದೇ ಪದೇ ಬಡ ಬಡಿಸುವ ತಾಲೂಕು ವೈಧ್ಯಾಧಿಕಾರಿ ಮತ್ತು ಜಿಲ್ಲಾ ವೈಧ್ಯಾಧಿಕಾರಿಗಳು ಯಾವ ರೀತಿಯ ಕ್ರಮಕ್ಕೆ ಮುಂದಾಗಬಹುದು ಎಂದು ತಿಳಿಯುವುದು ಬಾಕಿ ಇದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 