ಪೌರಕಾರ್ಮಿಕರ ಕ್ರೀಡಾ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಿಸಿದ ಪ್ರಕಾಶ ಕೋಳಿವಾಡ

ಪೌರಕಾರ್ಮಿಕರ ಕ್ರೀಡಾ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಿಸಿದ ಪ್ರಕಾಶ ಕೋಳಿವಾಡ Civil servants' sports competition: Prakash Koliwada distributes prizes to the winners

ರಾಣೇಬೆನ್ನೂರು:23 ಪೌರಕಾರ್ಮಿಕರು ಇಂದು ವಿಶ್ವ ಮಾನ್ಯತೆ ಪಡೆದಿದ್ದಾರೆ. ಬಸವಣ್ಣನವರ ಸಮ ಸಮಾಜ ನಿರ್ಮಾಣದ ಕಾಯಕ ತತ್ವದ ಅಡಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾನೂನು ಬದ್ಧ ಹಕ್ಕಿನ ಅಡಿಯಲ್ಲಿ  ತಮ್ಮ ಶ್ರೇಷ್ಠ  ಕಾಯಕದ ಮೂಲಕ ಕೈಲಾಸ ಕಂಡವರಾಗಿದ್ದಾರೆ, ಇದರಿಂದ ಕಾರ್ಮಿಕರು ಸಮಾಜದಲ್ಲಿ  ಸದಾಕಾಲವು ಗೌರವಕ್ಕೆ ಪಾತ್ರರಾಗುತ್ತಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.  

ಅವರು ವರ್ತಕರ ಸಂಘದ ಸಮುದಾಯ ಭವನದಲ್ಲಿ ನಗರ ಸಭೆ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ, ಕ್ರೀಡಾ ಸ್ಪರ್ಧಾ ವಿಜೇತರಿಗೆ  ಪಾರಿತೋಷಕ, ಬಹುಮಾನ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕಾರ್ಮಿಕರ ನಿತ್ಯವೂ, ತಮ್ಮ ಕಾಯಕದಲ್ಲಿ ಕಾಯಾ, ವಾಚಾ, ಮಾನಸಾ ಸೇವೆ ಸಲ್ಲಿಸುವವರಾಗಿದ್ದಾರೆ. ಅವರ ಆರೋಗ್ಯ ರಕ್ಷಣೆ ನಗರಸಭೆ ಗಮನಿಸಬೇಕು ಅದಕ್ಕಾಗಿ ಯಾವುದೇ ಸೋಂಕುರೋಗ ಅಂಟದಂತೆ ರಕ್ಷಾ ಕವಚವಾಗಿ ಗುಣಮಟ್ಟದ ಗ್ಲೂಜ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಆಯುಕ್ತರಿಗೆ  ಸೂಚಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ ಅವರು, ನಗರಸಭೆಯಲ್ಲಿ, ಎಲ್ಲ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು ಅವರ ಹಿತಾಶಕ್ತಿಯನ್ನು ಕಾಯುತ್ತಾ ಬಂದಿದ್ದೇವೆ. ಆಗಿದ್ದು ಸಾಕಷ್ಟಿದೆ ಆಗಬೇಕಾದ್ದು ಇನ್ನು ಸ್ವಲ್ಪ ಇದೆ. ಅದನ್ನು ಸಹ ನಿಯಮಿತವಾಗಿ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದರು.  

ನಗರಸಭಾ ಅಧ್ಯಕ್ಷ ಶ್ರೀಮತಿ ಚಂಪಕ್ಕ ರಮೇಶ ಬಿಸಲಹಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗೇಂದ್ರಸಾ ಪವಾರ,  ಸದಸ್ಯರಾದ ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಪ್ಪ ಅಂಗಡಿ, ಗಂಗಮ್ಮ ಹಾವನೂರ, ಮತ್ತಿತರು ಮಾತನಾಡಿದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಕರಡೆಣ್ಣನವರ, ಚಂದ್ರಕಲಾ ಪಾಟೀಲ, ನೌಕರರ ಸಂಘದ ಅಧ್ಯಕ್ಷ ಏಳುಕೋಟೆಪ್ಪ ಗೋಣಿ ಬಸಮ್ಮನವರ, ರತ್ನಮ್ಮ ಪೂಜಾರ, ನಾಗರತ್ನ ಕೋರಿ, ಮೈಲಪ್ಪ ಗೋಣಿಬಸಮ್ಮನವರ, ಮಲ್ಲೇಶಪ್ಪ ಮದ್ಲೆರ, ನೀಲಮ್ಮ, ಸೇರಿದಂತೆ ಕಾರ್ಮಿಕ  ಸಂಘಟನೆಗಳ ಮುಖಂಡರು ಪದಾಧಿಕಾರಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು. ಪ್ರಕಾಶ್ ಗಚ್ಚಿನಮಠ ಪ್ರಾರ್ಥಿಸಿದರು. ಯೋಜನಾ ಸಂಯೋಜಕ ಮಾರುತಿ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಕಛೇರಿ ವ್ಯವಸ್ಥಾಪಕ ಮಂಜುನಾಥ ವಂದಿಸಿದರು.  ದಿನಾಚರಣೆ ನಿಮಿತ್ತ, ನಾಡಿನ ಖ್ಯಾತ ಕಲಾವಿದರಾದ, ವೀಣಾ ಬೋಸ್ಲೆ, ವಿದ್ಯಾ, ಮಹಾನ್ಯ ಪಾಟೀಲ, ಸೌಮ್ಯ ಪಾಟೀಲ್, ಪ್ರಕಾಶ ಗಚ್ಚಿನಮಠ ಕಲಾವಿದರಿಂದ  ವೈವಿಧ್ಯಮಯ ಕನ್ನಡ ಚಲನಚಿತ್ರ ಗೀತೆಗಳು  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಕಾರ್ಮಿಕರ ಮನ ರಂಜಿಸಿದರು.ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ, ಕ್ರೀಡೆ, ಸಾಂಸ್ಕೃತಿಕ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.