ಬೇಸಿಗೆಯ ಚಿಣ್ಣರ ಮೇಳದಿಂದ ಮಕ್ಕಳ ವ್ಯಕ್ತಿತ್ವ ವಿಕಾಸನ
Children's personality development through summer children's fair
ಲೋಕದರ್ಶನ ವರದಿ
ಹೂವಿನಹಡಗಲಿ 16- ಶಾಲೆಯ ಓಪಚಾರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗದ ಆಸಕ್ತಿಯ ಅನೇಕ ವಿಷಯಗಳನ್ನು ಕಲಿಯಲು ಬೇಸಿಗೆ ಶಿಬಿರದ ಚಿಣ್ಣರ ಮೇಳ ಅವಕಾಶ ಮಾಡಿಕೊಡುತ್ತದೆ ಎಂದು ತಹಶಿಲ್ದಾರರ ಕೆ.ಎಂ.ಗುರುಬಸವರಾಜ ಹೇಳಿದರು. ಪಟ್ಟಣದ ರಂಗಭಾರತಿ ರಂಗಮಂದಿರ ದಲ್ಲಿ ಗುರುವಾರ ಆಯೋಜಿಸಿರುವ ಬೇಸಿಗೆಯ ಚಿಣ್ಣರ ಮೇಳ ಇದು ಉದ್ಘಾಟಿಸಿ ಮಾತನಾಡಿ ರಜಾ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಿಣ್ಣರ ಮೇಳದಲ್ಲಿ ಹಾಡು,ಸಂಗೀತ, ನಲಿ-ಕಲಿ ಮತ್ತುಕೌಶಲ ಕಲಿಕೆಗೆ ವೇದಿಕೆ ಒದಗಿಸುತ್ತದೆ ಎಂದರು.
ಮೈಸೂರು ರಂಗಾಯಣ ರಂಗಕರ್ಮಿ ಹುಲಗಪ್ಪ ಕಟ್ಟಿಮನಿ ಮಾತನಾಡಿ ಎಂ.ಪಿ.ಪ್ರಕಾಶ್ ರು ರಂಗಭಾರತಿ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹ ನೀಡಿದ್ದಾರೆ ಜತೆಗೆ ಶಾಲೆಯಲ್ಲಿ ಕಲಿಯದ ವಿಷಯ ಚಿಣ್ಣರ ಮೇಳದಲ್ಲಿ ನಾಟಕ,ರಂಗ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ಸಂಕೋಚ ದೂರವಾಗಿ , ಆತ್ಮ ವಿಶ್ವಾಸ ಮತ್ತು ಶಿಸ್ತು ಹೆಚ್ಚುತ್ತದೆ ಎಂದರು.ರಂಗಭಾರತಿ ಕಾರ್ಯದ್ಯಕ್ಷೆ ಎಂ.ಪಿ.ಸುಮಾ, ಎಂ.ಪಿ.ಪಿ.ಸಮಾಜ ಮುಖಿ ಟ್ರಸ್ಟ್ ಅದ್ಯಕ್ಷೆ ಎಂ.ಪಿ.ವೀಣಾ,ಉಪನ್ಯಾಸಕ ಪ್ರಭು ಸೊಪ್ಪಿನ , ಶಿಬಿರದ ನಿರ್ದೇಶಕ ಆನಂದ, ಶಿಕ್ಷಕರಾದ ಕೊಟ್ರಸ್ವಾಮಿ.ಚಂದ್ರ್ಪ ಇದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 