ಮಕ್ಕಳ ಗುಂಪು ಆಟಗಳ ಕ್ರೀಡಾಕೂಟ

ಮಕ್ಕಳ ಗುಂಪು ಆಟಗಳ ಕ್ರೀಡಾಕೂಟ Children's group games competition

ಜಮಖಂಡಿ 21: ಕ್ರೀಡೆಗಳು ಮಾನಸಿಕವಾಗಿ, ದೈಹಿಕವಾಗಿ ಶರೀರವನ್ನು ಸದೃಢಗೊಳಿಸುತ್ತವೆ. ಕ್ರೀಡೆಯಿಂದ ನಾಯಕತ್ವಗಳ ಗುಣಗಳಿಂದ ಬೆಳೆಯಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ಬಾಗೆನ್ನವರ ಹೇಳಿದರು. 

ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 2025-26 ನೇ ಸಾಲಿನ ಜಮಖಂಡಿ-ರಬಕವಿ - ಬನಹಟ್ಟಿ ತಾಲೂಕಿನ 14 ವಯೋಮಿತಿ ಹಾಗೂ 17 ವಯೋಮಿತಿಯೊಳಗಿನ ಮಕ್ಕಳ ಗುಂಪು ಆಟಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲವು ಇರುತ್ತದೆ. ಸೋಲು ಅನುಭವಿಸಿದವರು ಯಾರು ಕುಗ್ಗದೆ ಗೆಲವು ಸಾಧಿಸುವ ಚಲವನ್ನು ಹೊಂದಬೇಕು. ಕ್ರೀಡೆಗಳಲ್ಲಿ ಗೆಲುವ ಸಾಧಿಸುವ ಆತ್ಮ ವಿಶ್ವಾಸ ಹೊಂದಬೇಕು ಎಂದರು. 

ತಾಲೂಕ ಮಟ್ಟದ ಕ್ರೀಡಾಕೂಟ್ಟದಲ್ಲಿ ಜಮಖಂಡಿ, ರಬಕವಿ-ಬನಹಟ್ಟಿ, ಹುನ್ನೂರ, ಸಾವಳಗಿ, ಹಿಪ್ಪರಗಿ, ಗೊಲಬಾಂವಿ, ತೇರದಾಳ ಸೇರಿದಂತೆ ಅನೇಕ ಶಾಲೆಯ ಮಕ್ಕಳು ಭಾಗವಹಿಸಿದರು. ತಾಲೂಕಿನ ಐದು ಜನ ದೈಹಿಕ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ.ಗೌರವಿಸಿದರು. 

ಪ್ರಾಸ್ತಾವಿಕವಾಗಿ ಕ್ಚೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಮಾತನಾಡಿದರು, ಕ್ರೀಡಾ ಧ್ವಜಾರೋಹನವನ್ನು ನಗರದ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ನೆರವೇರಿಸಿದರು. ಬಾಹುಬಲಿ ಮುತ್ತೂರ ಪ್ರಜ್ಞಾವಿಧಿಯನ್ನು ಬೋಧಿಸಿದರು. ಕ್ಚೇತ್ರ ಸಮನ್ವಯ ಅಧಿಕಾರಿ ಕಾಡೇಶ ಕೊಲೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ,ಎಸ್,ಕಲ್ಯಾಣಿ, ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಕಿ ಪಂಚಾಕ್ಷರಿ ನಂದೇಶ, ನೌಕರರ ಸಂಘದ ಅಧ್ಯಕ್ಷ ಡಿ,ಬಿ,ಅಜ್ಜನವರ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಬಸವರಾಜ ಹಣಗಂಡಿ, ಭೂಪನ ಪತ್ತಾರ, ಕಡಕೋಳ, ಸಿ,ಜಿ,ಕಡಕೋಳ, ಅರ್ಜುನ ಕಾಖಂಡಕಿ, ನರಸಿಂಹ ಕಲ್ಲೋಳಿ,ಬಾಬಾಗೌಡ ಪಾಟೀಲ, ಪಾಂಡು ಸಿಂಗರಡ್ಡಿ, ನೇಮನಾಥ ನ್ಯಾಮಗೌಡ,  ಸಿದ್ದಗೊಂಡ, ವಿಜಯಕುಮಾರ ಯಳಮಲಿ, ಪ್ರಶಾಂತ ಜಂಬಗಿ, ವಿಜಯಕುಮಾರ ಹಲಗಿಮನಿ ಸೇರಿದಂತೆ ಅನೇಕ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದರು. ನಾಡಗೀತೆಯನ್ನು ಶಿಕ್ಷಕಿ ನಿರ್ಮಲಾ ಮಿರ್ಜಿ ಸಂಗಡಿಗರು ನೆರವೇರಿಸಿದರು. ಸುರೇಶ ಭೋಸ್ಲೆ ಸ್ವಾಗತಿಸಿದರು. ಅಪ್ಪು ಧರಿಗೌಡರ ನಿರೂಪಿಸಿದರು. ಬಾಹುಬಲಿ ನ್ಯಾಮಗೌಡ ವಂದಿಸಿದರು.